ರೆಸಿಪಿ: ದೋಸೆಗೆ ಸೂಪರ್ ಆಗಿರುತ್ತೆ ಈ ಸಿಹಿಕುಂಬಳಕಾಯಿ ಗೊಜ್ಜು

Posted By:

ಸಿಹಿ ಕುಂಬಳದ ಸೀಸನ್‌, ಈ ಸೀಸನ್‌ನಲ್ಲಿ ಚೆನ್ನಾಗಿ ಬಲಿತ ಸಿಹಿಕುಂಬಳಕಾಯಿ ಮಾರುಕಟ್ಟೆಗೆ ಬರುವುದು, ಸಿಹಿ ಕುಂಬಳಕಾಯಿ ಬಳಸಿ ಮಾಡುವ ಸರಳವಾದ ಆದರೆ ಅಷ್ಟೇ ರುಚಿಯಾದ ಸಿಹಿ ಕುಂಬಳಕಾಯಿ ಗೊಜ್ಜು ರೆಸಿಪಿ ನೀಡಿದ್ದೇವೆ, ಈ ಗೊಜ್ಜು ದೋಸೆಗೆ ತುಂಬಾ ಚೆನ್ನಾಗಿರುತ್ತದೆ, ರೆಸಿಪಿ ಸರಳವಾಗಿದೆ ನೋಡಿ:

pumpkin gojju recipe

ಬೇಕಾಗುವ ಸಾಮಗ್ರಿ

ಸಿಹಿ ಕುಂಬಳಕಾಯಿ 1
ಈರುಳ್ಳಿ 2
ಹಸಿಮೆಣಸು 5-6
ಕಲ್ಲುಪ್ಪು (ಪುಡಿ ಉಪ್ಪು ಬೇಕಾದರೂ ಬಳಸಬಹುದು, ನಾವು ಬಳಸಿರುವುದು ಕಲ್ಲುಪ್ಪು)
ತೆಂಗಿನ ತುರಿ
1/4 ಚಮಚ ಅರಿಶಿಣ ಪುಡಿ
2 ಚಮಚ ತೆಂಗಿನೆಣ್ಣೆ(ಇತರ ಅಡುಗೆಯೆಣ್ಣೆ ಬೇಕಾದರೂ ಬಳಸಬಹುದು)
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು


ಮಾಡುವ ವಿಧಾನ

  • ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್‌ ಶಬ್ದ ಮಾಡುವಾಗ ಕರಿಬೇವು, ಈರುಳ್ಳಿ, ಹಸಿಮೆಣಸು ಹಾಕಿ.
  • ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
  • ನಂತರ ಮೀಡಿಯಂ ಪೀಸ್‌ ಆಗಿ ಕತ್ತರಿಸಿದ ಸಿಹಿಕುಂಬಳಕಾಯಿ ಹಾಕಿ, ಉಪ್ಪು ಸೇರಿಸಿ, ಅರಿಶಿಣ ಪುಡಿ ಹಾಕಿ, ಸಿಹಿಕುಂಬಳಕಾಯಿ ಪಾತ್ರೆಯಲ್ಲಿ ಎಷ್ಟಿದೆಯೀ ಅದು ಸ್ವಲ್ಪ ಮುಳುಗುವವರೆಗೆ ನೀರು ಹಾಕಿ 15 ನಿಮಿಷ ಬೇಯಿಸಿ.
  • ನೀರು ಕಡಿಮೆಯಿದ್ದರೆ ತಳ ಹಿಡಿಯುತ್ತದೆ, ನೀರು ತುಂಬಾ ಕೂಡ ಹಾಕಬಾರದು, ಸಿಹಿಕುಂಬಳಕಾಯಿಗಿಂತ 1/2 ಇಂಚು ಹೆಚ್ಚು ನೀರಿದ್ದರೆ ಸಾಕು.
  • ಸಿಹಿಕುಂಬಳಕಾಯಿ ಬೆಂದ ಮೇಲೆ ಅದನ್ನು ಸೌಟ್‌ನಿಂದಲೇ ಸ್ಮ್ಯಾಶ್‌ ಮಾಡಿ.
  • ತೆಂಗಿನತುರಿ ಹಾಕಿ ಮಿಕ್ಸ್ ಮಾಡಿ ಸ್ಟೌವ್‌ನಿಂದ ಇಳಿಸಿದರೆ ದೋಸೆ ಜೊತೆ ಸವಿಯಲು ಸಿಹಿ ಕುಂಬಳಕಾಯಿ ಗೊಜ್ಜು ರೆಡಿ.
  • ದೋಸೆ ಜೊತೆ ಸವಿಯಲು ಈ ಗೊಜ್ಜು ಸೂಪರ್ ಆಗಿರುತ್ತದೆ.

ಯಾವ ರೀತಿಯ ಸಿಹಿಕುಂಬಳಕಾಯಿ ಒಳ್ಳೆಯದು?

  • ಸಿಹಿಕುಂಬಳಕಾಯಿಯಲ್ಲಿ ಹಲವು ಬಗೆ ಇದೆ, ನೀವು ಗೊಜ್ಜಿಗೆ ಬೆಂದಾಗ ಈ ಆಲೂಗಡ್ಡೆ ಪುಡಿ ಪುಡಿಯಾಗುವಂತೆ ಆಗುವ ಸಿಹಿಕುಂಬಳಕಾಯಿ ಆಯ್ಕೆ ಮಾಡಿದರೆ ಇದರ ರುಚಿ ಸೂಪರ್.
  • ಸಿಹಿ ಕುಂಬಕಾಯಿ ಮೇಲೆ ಬಿಳಿ ಬಿಳಿ ಚುಕ್ಕಿಯಿದ್ದರೆ ಅಂಥ ಸಿಹಿ ಕುಂಬಳಕಾಯಿ ಚೆನ್ನಾಗಿರುತ್ತದೆ.
  • ಇದೀಗ ಸಿಹಿಕುಂಬಳಕಾಯಿ ಸೀಸನ್,ಬಲಿತಿರುವ ಸಿಹಿಕುಂಬಳಕಾಯಿ ಬಳಸಿ. ಎಳೆಯದ್ದಾಗಿದ್ದರೆ ಅಷ್ಟು ಟೇಸ್ಟ್‌ ಇರಲ್ಲ, ಹಣ್ಣಾದ ಸಿಹಿ ಕುಂಬಳಕಾಯಿ ಕೂಡಾ ಅಷ್ಟು ಟೇಸ್ಟ್ ಅನಿಸಲ್ಲ.

ಸಿಹಿ ಕುಂಬಳಕಾಯಿಯ ಪ್ರಯೋಜನಗಳು

ಸಿಹಿ ಕುಂಬಳಕಾಯಿಯಲ್ಲಿ ವಿಟಮಿನ್ಸ್ ಅಧಿಕವಿದೆ, ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಲ್ಲದೆ ಗಾಯ ಒಣಗಿಸಲು ತುಂಬಾನೇ ಸಹಕಾರಿ.

ಸಿಹಿ ಕುಂಬಳಕಾಯಿ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಸಿಹಿಕುಂಬಳಕಾಯಿಯನ್ನು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಸೇವಿಸಬಹುದು.

ಇದರಲ್ಲಿ ಕ್ಯಾಲೋರಿ ಕಡಿಮೆಯಿದೆ
ಸಿಹಿ ಕುಂಬಳಕಾಯಿಯಲ್ಲಿ ಕ್ಯಾಲೋರಿ ಕಡಿಮೆಯಿದೆ, ಅಲ್ಲದೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಸಿಹಿ ಕುಂಬಳದಲ್ಲಿದೆ. ಇದರಲ್ಲಿರುವ ವಿಟಮಿನ್ ಸಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸಿಹಿ ಕುಂಬಳಕಾಯಿ ಎಲ್ಲರಿಗೂ ಸುರಕ್ಷಿತವೇ?
ಸಿಹಿ ಕುಂಬಳಕಾಯಿ ಸಾಮಾನ್ಯವಾಗಿ ಎಲ್ಲರೂ ತಿನ್ನಬಹುದು, ಕೆಲವೇ ಕೆಲವು ಜರಿಗಷ್ಟೇ ಸಿಹಿ ಕುಂಬಳಕಾಯಿ ಆಗಿ ಬರಲ್ಲ, ಸಿಹಿ ಕುಂಬಳಕಾಯಿ ಬೀಜ ತೆಗೆದು ಅದನ್ನು ಒಣಗಿಸಿ ತಿನ್ನಿ. ಇದರ ಬೀಜ ಸಿಪ್ಪೆ ಸುಲಿದು ಮಕ್ಕಳ ಸ್ನ್ಯಾಕ್ಸ್‌ನಲ್ಲಿಸೇರಿಸಬಹುದು ಅಲ್ಲದೆ ಇದನ್ನು ತಿನ್ನುವುದು ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು.

ನಂಜು ಇರುವವರಿಗೆ ತಿನ್ನಬೇಡಿ ಎಂದು ಆಯುರ್ವೇದದಲ್ಲಿ ಸಲಹೆ ನೀಡಲಾಗುವುದು

ಸಂಧಿವಾತ ಸಮಸ್ಯೆವಿದ್ದರೆ ಸಿಹಿ ಕುಂಬಳಕಾಯಿ ತಿನ್ನದಂತೆ ಸಲಹೆ ನೀಡಲಾಗುವುದು, ಉಳಿದಂತೆ ಬೇರೆ ಯಾರಿಗೂ ಸಮಸ್ಯೆ ಇರಲ್ಲ. ಸಿಪ್ಪೆ ಸಹಿತ ಇದನ್ನುಮಾಡಬಹುದು, ಬೀಜವನ್ನೂ ತೆಗೆದಿಟ್ಟು ಬಳಸಬಹುದು.

[ of 5 - Users]
Story first published: Monday, October 21, 2024, 12:43 [IST]
X
Desktop Bottom Promotion