Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಕೊತ್ತಂಬರಿ, ಪುದೀನಾ ಮಸಾಲೆಯಿಂದ ಮಾಡುವ ಈ ಕಬಾಬ್ ಸೂಪರ್ ಟೇಸ್ಟ್
ನೀವು ಚಿಕನ್ ಕಬಾಬ್ ಅನ್ನು ಕಬಾಬ್ ಮಸಾಲೆ ಹಾಕಿ ಮಾಡುತ್ತಿದ್ದರೆ ಈ ರೆಸಿಪಿ ಟ್ರೈ ಮಾಡಿ ನೋಡಿ, ತುಂಬಾನೇ ರುಚಿ ಹಾಗೂ ಕಬಾಬ್ ಮಸಾಲೆ ಹಾಕಿ ಮಾಡುವ ಕಬಾಬ್‌ಗಿಂತ ಒಳ್ಳೆಯದು. ಹೊರಗಡೆಯಿಂದ ತರುವ ಮಸಾಲೆಗಿಂತ ಈ ಮಸಾಲೆಯನ್ನು ನೀವೇ ರೆಡಿ ಮಾಡುವುದರಿಂದ ಯಾವುದೇ ರಾಸಾಯನಿಕ ಬಣ್ಣ ಹಾಕಿರದ ಕಬಾಬ್ ಇದಾಗಿದೆ.
ಇನ್ನು ಚಿಕನ್‌ನಿಂದ ಮೈ ಉಷ್ಣಾಂಶ ಹೆಚ್ಚಾಗುವುದನ್ನು ತಡೆಗಟ್ಟಲು ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ಮಾಡಿರುವ ಈ ಚಿಕನ್ ಕಬಾಬ್ ಕೆಂಪು ಬಣ್ಣದ ಚಿಕನ್ ಕಬಾಬ್‌ಗಿಂತ ಒಳ್ಳೆಯದು. ಇನ್ನು ಟಿಕ್ಕಾ ಮಾಡುವ ರೆಸಿಪಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಗ್ರಿ
1/2 ಕೆಜಿ ಚಿಕನ್ (ವಿಥ್ ಬೋನ್, ವಿಥೌಟ್ ಬೋನ್)
ಒಂದು ಕಪ್ ಪುದೀನಾ
1 ಕಪ್ ಕೊತ್ತಂಬರಿ ಸೊಪ್ಪು
4-5 ಹಸಿ ಮೆಣಸು (ಖಾರ ಕಮ್ಮಿ ಬೇಕೆಂದರೆ 3 ಹಾಕಿದರೆ ಸಾಕು)
1/2 ಚಮಚ ಅರಿಶಿಣ ಪುಡಿ
ಶುಂಠಿ ಪೇಸ್ಟ್ 1 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
1/2 ನಿಂಬೆ ರಸ
1/2 ಚಮಚ ಉಪ್ಪಿನ ಪುಡಿ
1/2 ಕಪ್ ರವೆ ಅಥವಾ ಓಟ್ಸ್ ಪುಡಿ
2 ಮೊಟ್ಟೆ
1 ಕಪ್ ಎಣ್ಣೆ
ಮಾಡುವ ವಿಧಾನ
ಸ್ಟೆಪ್ 1
- ನೀವು ಪುದೀನಾ, ಕೊತ್ತಂಬರಿ ಸೊಪ್ಪು , ಹಸಿ ಮೆಣಸು ಹಾಕಿ ರುಬ್ಬಿ, ಗಟ್ಟಿಯಾಗಿ ರುಬ್ಬಿ, ಚೆನ್ನಾಗಿ ರುಬ್ಬದಿದ್ದರೆ 1 ಚಮಚದಷ್ಟು ನೀರು ಸೇರಿಸಬಹುದು
- ನಂತರ ಆ ಪೇಸ್ಟ್ ಒಂದು ಪ್ಲೇಟ್‌ಗೆ ಹಾಕಿ, ಅದಕ್ಕೆ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಉಪ್ಪು, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ
- ಈಗ ತೊಳೆದಿಟ್ಟ ಚಿಕನ್ ಹಾಕಿ (ಚಿಕನ್‌ನಲ್ಲಿ ತೊಳೆದ ನೀರಿನಂಶ ಇರಬಾರದು, ಅದ್ದರಿಂದ ಚಿಕನ್ ತೊಳೆದು ನೀರು ಸೋಸಿ ಹೋಗುವಂಥ ಪಾತ್ರೆಯಲ್ಲಿ ಹಾಕಿಡಿ)
- ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿ 2 ಗಂಟೆ ಇಡಿ ( ಹಾಗೆಯೇ ಹೊರಗಡೆ ಕೂಡ ಇಡಬಹುದು)
ಸ್ಟೆಪ್ 2
- ಈಗ ಒಂದು ಬೌಲ್‌ಗೆ ಮೊಟ್ಟೆ ಒಡೆದು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು, ಸ್ವಲ್ಪ ಅರಿಶಿಣ ಪುಡಿ ಸೇರಿಸಿ, ಸ್ಪೂನ್‌ನಿಂದ ಆಮ್ಲೆಟ್‌ಗೆ ಕಲಿಸುವಂತೆ ಕಲಿಸಿ
- ಮತ್ತೊಂದು ಬೌಲ್‌ನಲ್ಲಿ ಓಟ್ಸ್ ಅಥವಾ ರವೆ ಹಾಕಿಡಿ
ಸ್ಟೆಪ್ 3
- ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ
- ಎಣ್ಣೆ ಕಾಯುವಾಗ ಮಸಾಲೆ ಮಿಕ್ಸ್ ಮಾಡಿಟ್ಟ ಚಿಕನ್ ಅನ್ನು ಮೊಟ್ಟೆಗೆ ಅದ್ದಿ ನಂತರ ರವೆಯಲ್ಲಿ ಹೊರಳಾಡಿಸಿ ಬಳಿಕ ಎಣ್ಣೆಯಲ್ಲಿ ಹಾಕಿ, ಕಬಾಬ್ ರೆಡಿಯಾದಾಗ ಪುದೀನಾ ಸೊಪ್ಪಿನ ಚಟ್ನಿ ಜೊತೆ ಸರ್ವ್ ಮಾಡಿ, ರುಚಿ ತುಂಬಾ ಚೆನ್ನಾಗಿರುತ್ತದೆ.
ಟಿಕ್ಕಾ ಮಾಡುವುದಾದರೆ
ಬೋನ್‌ಲೆಸ್ ಚಿಕನ್ 1/2 ಕೆಜಿ
1 ಕಪ್ ಕೊತ್ತಂಬರಿ ಸೊಪ್ಪು
1 ಕಪ್ ಪುದೀನಾ ಸೊಪ್ಪು
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಹಸಿ ಮೆಣಸಿನಕಾಯಿ
ಉಪ್ಪು 1/2 ಚಮಚ
ಅರಿಶಿಣ ಪುಡಿ 1/2 ಚಮಚ
ನಿಂಬೆರಸ 1 ಚಮಚ (1/2 ನಿಂಬೆ, ಚಿಕ್ಕ ನಿಂಬೆಯಾದರೆ ಒಂದು ನಿಂಬೆರಸ ಹಾಕಿ)
ಈ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಚಿಕನ್ ಹಾಕಿ ಚೆನ್ನಾಗಿ ಕಲೆಸಿ, ಒಂದು ಗಂಟೆ ಮಸಾಲೆ ಹಿಡಿಯಲು ಬಿಡಿ.
ಕಬ್ಬಿಣದ ಕಡ್ಡಿಯಿಂದ ಚಿಕನ್ ಚುಚ್ಚಿ ಅದನ್ನು ಗ್ರಿಲ್ಡ್ ಮಾಡಿ, ಇದನ್ನು ಕೂಡ ಪುದೀನಾ ಚಟ್ನಿ ಜೊತೆ ಸರ್ವ್ ಮಾಡಿ.
ಈ ರೆಸಿಪಿಗಳ ಪ್ರಯೋಜನವೇನು?
- ಉಷ್ಣಾಂಶ ಬ್ಯಾಲೆನ್ಸ್ ಮಾಡುತ್ತದೆ, ಚಿಕನ್ ಮೈ ಉಷ್ಣಾಂಶ ಹೆಚ್ಚಿಸುತ್ತದೆ, ಅದನ್ನು ಪುದೀನಾ ಹಾಗೂ ಕೊತ್ತಂಬರಿ ಸೊಪ್ಪಿನೊಂದಿಗೆ ಮಿಕ್ಸ್ ಮಾಡುವುದರಿಂದ ಚಿಕನ್ ಸೇವಿಸಿದಾಗ ಮೈ ಉಷ್ಣಾಂಶ ಹೆಚ್ಚಾಗುವುದನ್ನು ತಡೆಯಬಹುದು.
- ಇನ್ನು ಈ ರೀತಿ ಮಾಡಿ ಸವಿದರೆ ಕಬಾಬ್ ಮಸಾಲೆ ಹಾಕಿ ಮಾಡುವ ಕಬಾಬ್‌ಗಿಂತ ರುಚಿಯಾಗಿರುತ್ತದೆ
- ಇನ್ನು ಕಬಾಬ್ ಮಸಾಲೆಯಲ್ಲಿ ಕಲರ್ ಮಿಕ್ಸ್ ಗಿರಬಹುದು, ಆದರೆ ಈ ಮಸಾಲೆ ನೀವೇ ಮಾಡುವುದರಿಂದ ಮಕ್ಕಳಿಗೆ ಕೊಡಲು ಈ ಕಬಾಬ್ ಒಳ್ಳೆಯದು
- ಇನ್ನು ನೀವು ಚಿಕ್ಕ ಚಿಕ್ಕ ಬೋನ್‌ಲೆಸ್ ಚಿಕನ್‌ನಿಂದ ಕಬಾಬ್ ಮಾಡಿಕೊಟ್ಟರೆ ಚಿಕನ್ ಪಾಪ್‌ಕಾರ್ನ್ ರೀತಿ ರುಚಿಯಾಗಿರುತ್ತದೆ.



Click it and Unblock the Notifications