Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಬಾಯಲ್ಲಿ ನೀರೂರಿಸುವ ರುಚಿಯ ಸೀಗಡಿ ರೋಸ್ಟ್
ಮೀನು ಪ್ರಿಯರಿಗೆ ಸೀಗಡಿ ಫುಡ್ ಎಂದರೆ ಸಾಕು ಖುಷಿಯಾಗಿ ಬಿಡುತ್ತಾರೆ. ಅದರ ರುಚಿಯೇ ಅಂಥದ್ದು, ಇದನ್ನು ಗ್ರೇವಿ ರೀತಿ ಮಾಡಿದರೂ ಚೆನ್ನಾಗಿರುತ್ತೆ, ರೋಸ್ಟ್ ಮಾಡಿದರೆ ಮತ್ತಷ್ಟು ರುಚಿ.
ಮನೆಯಲ್ಲಿ ತುಂಬಾ ಜನ ಇದ್ದರೆ ರೋಸ್ಟ್ ಮಾಡಿದರೆ ಸಾಕಾಗುವುದಿಲ್ಲ, ಅದೇ 2-4 ಜನ ಇದ್ದರೆ ಒಂದು ಕೆಜಿ ಸೀಗಡಿ ತಂದು ರೋಸ್ಟ್ ಮಾಡಿ ಸವಿಯಬಹುದು.

ನಾವಿಲ್ಲಿ ರುಚಿಕರವಾದ ಸೀಗಡಿ ರೋಸ್ಟ್ನ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Non Veg
Serves: 4
-
ಬೇಕಾಗುವ ಸಾಮಗ್ರಿ
2 ಕಪ್ ಪ್ರಾನ್ಸ್(ಸೀಗಡಿ)
2 ಚಮಚ ಖಾರದ ಪುಡಿ
1 ಚಮಚ ಕೊತ್ತಂಬರಿ ಪುಡಿ
1 ಚಮಚ ಕಾಳು ಮೆಣಸಿನ ಪುಡಿ
1ಚಮಚ ಗರಂ ಮಸಾಲ
1/4 ಚಮಚ ಅರಿಶಿಣ ಪುಡಿ
ಚಿಟಿಕೆಯಷ್ಟು ಮೆಂತೆ ಪುಡಿ
ಸ್ವಲ್ಪ ಕರಿಬೇವು
11/2 ಕಪ್ ಈರುಳ್ಳಿ (ತೆಳುವಾಗಿ , ಉದ್ದುದ್ದವಾಗಿ ಕತ್ತರಿಸಿದ್ದು)
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1/2 ಕಪ್ ತೆಳುವಾಗಿ ಕತ್ತರಿಸಿದ ತೆಂಗಿನಕಾಯಿ
ರುಚಿಗೆ ತಕ್ಕ ಉಪ್ಪು
ತೆಂಗಿನೆಣ್ಣೆ (ನೀವು ಇಷ್ಟವಾದ ಅಡುಗೆ ಎಣ್ಣೆ ಬಳಸಬಹುದು)
-
ಮಾಡುವ ವಿಧಾನ:
* ಸೀಗಡಿಯನ್ನು ಸ್ವಚ್ಛ ಮಾಡಿ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ, ಗರಂ ಮಸಾಲೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಅರ್ಧ ಗಂಟೆ ಇಡಿ. ಆಗ ಮಸಾಲೆ ಚೆನ್ನಾಗಿ ಹಿಡಿಯುತ್ತದೆ.
* ಈಗ ಪ್ಯಾನ್ಗೆ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಬಿಸಿ ಮಾಡಿ. ಅದರಲ್ಲಿ ತೆಳುವಾಗ ಕತ್ತರಿಸಿದ ತೆಂಗಿನಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಈಗ ಅವುಗಳನ್ನು ಒಂದು ಬದಿಯಲ್ಲಿ ತೆಗೆದಿಡಿ.
* ಈಗ ಅದೇ ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಮಿಕ್ಸ್ ಮಾಡಿಟ್ಟ ಸೀಗಡಿ ಹಾಕಿ ಎರಡೂ ಬದಿಯನ್ನು ರೋಸ್ಟ್ ಮಾಡಿ. ಈಗ ಪ್ಯಾನ್ನಿಂದ ತೆಗೆದು ಒಂದು ಬೌಲ್ನಲ್ಲಿ ಹಾಕಿಡಿ.
* ಈಗ ಅದೇ ಪ್ಯಾನ್ಗೆ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು, ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕ ಉಪ್ಪು ಈರುಳ್ಳಿ 3-4 ನಿಮಿಷ ಫ್ರೈ ಮಾಡಿ.
* ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ.
* ಈಗ ಇದಕ್ಕೆ ರೋಸ್ಟ್ ಮಾಡಿದ ಪ್ರಾನ್ಸ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿ, ನಂತರ ಉಪ್ಪು ಸರಿಯಾಗಿದೆಯೇ ನೋಡಿ, ಉರಿಯಿಂದ ಇಳಿಸಿ ಪಾತ್ರೆಯ ಬಾಯಿ ಮುಚ್ಚಿ ಇಡಿ.
* ಸರ್ವ್ ಮಾಡುವ ಮುನ್ನ ಒಮ್ಮೆ ಮಿಕ್ಸ್ ಮಾಡಿ ಸರ್ವ್ ಮಾಡಿ.
* ಅನ್ನ, ಚಪಾತಿ ಇವುಗಳ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತೆ.
- ನೀವು ಪ್ರಾನ್ಸ್ ರೋಸ್ಟ್ ಮಾಡುವಾಗ ತೆಂಗಿನೆಣ್ಣೆ ಬಳಸಿದರೆ ಅದರ ಫ್ಲೇವರ್ ಸೇರಿ ರುಚಿ ಹೆಚ್ಚುವುದು, ತೆಂಗಿನೆಣ್ಣೆ ಬಳಸಿ ಅಭ್ಯಾಸ ಇಲ್ಲದಿದ್ದರೆ ಬೇರೆ ಎಣ್ಣೆ ಬಳಸಿ.
- ಕೊಬ್ಬು - 72%
- ಪ್ರೊಟೀನ್ - 18%
- ಕಾರ್ಬ್ಸ್ - 9%



Click it and Unblock the Notifications