ರೆಸಿಪಿ: ಸೀಗಡಿ ಮಸಾಲ ಸುಕ್ಕಾ ಮಾಡುವುದು ಹೇಗೆ?

Posted By:

ಇಲ್ಲಿ ನಾವು ಸೀಗಡಿ ಮೀನಿನ ಸುಕ್ಕಾ ರೆಸಿಪಿ ನೀಡಿದ್ದೇವೆ, ಇದನ್ನು ಮಾಡುವಾಗ ಸಾಸಿವೆಯೆಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ ಮಾಡಿ. ಇದಕ್ಕೆ ನೀವು ಬೇಕಾದರೆ ಚೆಟ್ಟಿನಾಡ್‌ ಮಸಾಲೆ ಸಿಕ್ಕಿದರೆ ಅದನ್ನು ಹಾಕಿದರೆ ತುಂಬಾ ರುಚಿಯಾಗಿರುತ್ತೆ.

Prawn Masala Sukka Recipe

ಬನ್ನಿ ಸೀಗಡಿ ಮೀನಿನ ಸುಕ್ಕಾ ಮಾಡುವುದು ಹೇಗೆ ಎಂದು ನೋಡೋಣ:

prawn masala Sukka recipe, ಸೀಗಡಿ ಮಸಾಲ ಸುಕ್ಕಾ ರೆಸಿಪಿ
prawn masala Sukka recipe, ಸೀಗಡಿ ಮಸಾಲ ಸುಕ್ಕಾ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By: Reena TK

Recipe Type: Dry

Serves: 2

Ingredients
  • ಬೇಕಾಗುವ ಸಾಮಗ್ರಿ

    2 ಚಮಚ ಸಾಸಿವೆಯೆಣ್ಣೆ/ ತೆಂಗಿನೆಣ್ಬೆ

    2 ಲವಂಗ

    1 ಚಮಚ ಸೋಂಪು

    ಸ್ವಲ್ಪ ಕರಿಬೇವು

    2 ಟೊಮೆಟೊ (ಕತ್ತರಿಸಿದ್ದು)

    2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

    1 ಚಮಚ ಉಪ್ಪು

    25 ಗ್ರಾಂ ಸೀಗಡಿ

    ಸ್ವಲ್ಪ ಕೊತ್ತಂಬರಿ ಸೊಪ್ಪು

    ಮಸಾಲೆಗೆ

    1 ಚಮಚ ಕಾಳು ಮೆಣಸಿನ ಪುಡಿ

    1 ಚಮಚ ಖಾರದ ಪುಡಿ

    1/2 ಚಮಚ ಅರಿಶಿಣ ಪುಡಿ

    1 ಚಮಚ ಕೊತ್ತಂಬರಿ ಪುಡಿ

Red Rice Kanda Poha
How to Prepare
  • ಮಾಡುವುದು ಹೇಗೆ?

    * ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸೋಂಪು, ಏಲಕ್ಕಿ, ಕರಿಬೇವು ಹಾಕಿ. ಅದು ಚಟ್‌ಪಟ್‌ ಶಬ್ದ ಮಾಡುವಾಗ ಈರುಳ್ಳಿ ಹಾಕಿ 5-6 ನಿಮಿಷ ಫ್ರೈ ಮಾಡಿ.

    * ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಹಾಕಿ ಮೆತ್ತಗಾಗುವರೆಗೆ ಸೌಟ್‌ನಿಂದ ಆಡಿಸುತ್ತಾ ಬೇಯಿಸಬೇಕು, ನಂತರ ಮಸಾಲೆ ಪುಡಿ ಉಪ್ಪು ಹಾಕಿ 5-6 ನಿಮಿಷ ಬೇಯಿಸಿ.

    * ಈಗ ಸ್ವಚ್ಛ ಮಾಡಿದ ಸೀಗಡಿ ಹಾಕಿ ಮಿಕ್ಸ್ ಮಾಡಿ 4-5 ನಿಮಿಷ ಬೇಯಿಸಿ. ಸೀಗಡಿ ಬೇಗನೆ ಬೇಯುತ್ತದೆ. ನಂತರ ಗ್ಯಾಸ್‌ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸೀಗಡಿ ಸುಕ್ಕಾ ರೆಡಿ.

Instructions
  • ಸೀಗಡಿ ಬೇಗನೆ ಬೇಯುವುದರಿಂದ 4-5 ನಿಮಿಷ ಬೇಯಿಸಿದರೆ ಸಾಕು. * ಇದಕ್ಕೆ ಬೇಕಿದ್ದರೆ ಸ್ವಲ್ಪ ತೆಂಗಿನಕಾಯಿ ತರಿ-ತರಿ ರುಬ್ಬಿ ಹಾಕಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.
Nutritional Information
  • ಕ್ಯಾಲೋರಿ - 203 ಕ್ಯಾ
  • ಕೊಬ್ಬು - 10 ಗ್ರಾಂ
  • ಪ್ರೊಟೀನ್ - 13ಗ್ರಾಂ
  • ಕಾರ್ಬ್ಸ್ - 15 ಗ್ರಾಂ
[ 3.5 of 5 - 27 Users]
X
Desktop Bottom Promotion