Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಮ್ಮನ ಕೈ ರುಚಿ.. ಮದುವೆ ಮನೆ ಶೈಲಿಯ ಆಲೂ ಮಟರ್ ಪುಲಾವ್! ಅನ್ನ ಉದುರಾಗಿ ಬರಲು ಹೀಗೆ ಮಾಡಿ
ಮದುವೆ ಮನೆ ಶೈಲಿಯ ರುಚಿ! ಅತೀ ಸುಲಭ ಆಲೂ ಮಟರ್ ಪುಲಾವ್.. ಅನ್ನ ಉದುರು ಉದುರಾಗಿ ಬರಲು ಹೀಗೆ ಮಾಡಿ. ಹೌದು, ಮಧ್ಯಾಹ್ನದ ಊಟಕ್ಕಿರಲಿ ಅಥವಾ ರಾತ್ರಿಯ ಡಿನ್ನರ್ ಇರಲಿ, ಏನಾದರೂ ವಿಶೇಷವಾಗಿ ಮತ್ತು ರುಚಿಕರವಾಗಿ ತಿನ್ನಬೇಕು ಎನಿಸಿದಾಗ 'ಪುಲಾವ್' (Pulao Recipe) ನೆನಪಾಗುತ್ತೆ. ಅದರಲ್ಲೂ ಆಲೂಗಡ್ಡೆ ಮತ್ತು ಹಸಿ ಬಟಾಣಿ ಸೇರಿಸಿ ಮಾಡುವ ಆಲೂ ಮಟರ್ ಪುಲಾವ್ (Aloo Matar Pulao) ಅತ್ಯಂತ ಜನಪ್ರಿಯ.
ಇದರ ದೇಸಿ ಮಸಾಲೆಗಳ ಘಮ ಮತ್ತು ಉದುರುದುರಾದ ಅನ್ನದ ಪ್ರತಿ ತುತ್ತೂ ಸಖತ್ ರುಚಿ ನೀಡುತ್ತದೆ. ಅತಿ ಕಡಿಮೆ ಸಮಯದಲ್ಲಿ, ಮನೆಯಲ್ಲೇ ಕುಕ್ಕರ್ ಬಳಸಿ ಹೋಟೆಲ್ ಶೈಲಿಯ ಪುಲಾವ್ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ರೆಸಿಪಿ ಯಾವುದೇ ಸಮಯದಲ್ಲಿ ವಿಶೇಷ ಭೋಜನವನ್ನು ಸಿದ್ಧಪಡಿಸಲು ನೆರವಾಗುತ್ತದೆ. ನಿಮ್ಮ ಮನೆಯಲ್ಲಿಯೇ ರೆಸ್ಟೋರೆಂಟ್ ರುಚಿಯನ್ನು ಅನುಭವಿಸಲು ಸಹಕಾರಿಯಾಗುತ್ತದೆ.
ರುಚಿಕರ ಆಲೂ ಮಟರ್ ಪುಲಾವ್ (Potato Peas Pulao Recipe) ತಯಾರಿಸಲು ಅಗತ್ಯವಿರುವ ಸಾಮಗ್ರಿಗಳು ಈ ಕೆಳಗಿನಂತಿವೆ. ಎಲ್ಲ ಪದಾರ್ಥಗಳನ್ನು ತಯಾರಿಯ ಮೊದಲು ಸಿದ್ಧಪಡಿಸಿಕೊಳ್ಳುವುದರಿಂದ ಅಡುಗೆ ಪ್ರಕ್ರಿಯೆ ಸರಳವಾಗಲಿದೆ. ನೀವು ಒಮ್ಮೆ ಮನೆಯಲ್ಲಿ ಈ ರೆಸಿಪಿ ಟ್ರೈ ಮಾಡಿ ನೋಡಿ.
ಆಲೂ ಮಟರ್ ಪುಲಾವ್ಗೆ ಬೇಕಾಗುವ ಸಾಮಗ್ರಿಗಳು
• ಬಾಸ್ಮತಿ ಅಕ್ಕಿ
• ಆಲೂಗಡ್ಡೆ
• ಅರ್ಧ ಕಪ್ ಹಸಿ ಬಟಾಣಿ
• ಈರುಳ್ಳಿ
• ಟೊಮೆಟೊ
• ತೇಜಪತ್ರ (ಬಿರಿಯಾನಿ ಎಲೆ)
• ಏಲಕ್ಕಿ
• ಲವಂಗ
• ದಾಲ್ಚಿನ್ನಿ
• ಕಾಳು ಮೆಣಸು
• ಜೀರಿಗೆ
• ಅರಿಶಿನ
• ಕೆಂಪು ಮೆಣಸಿನ ಪುಡಿ
• ಜೀರಿಗೆ ಪುಡಿ
• ಧನಿಯಾ ಪುಡಿ
• ಗರಂ ಮಸಾಲಾ
• ಎಣ್ಣೆ ಅಥವಾ ತುಪ್ಪ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಹಸಿ ಮೆಣಸಿನಕಾಯಿ
• ಪುದೀನಾ
• ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
• ನೀರು
ಆಲೂ ಮಟರ್ ಪುಲಾವ್ ತಯಾರಿಸುವ ವಿಧಾನ
- ಮೊದಲು ಪ್ರೆಶರ್ ಕುಕ್ಕರ್ನಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ.
- ಎಣ್ಣೆ ಕಾದ ನಂತರ ತೇಜಪತ್ರ, ಏಲಕ್ಕಿ, ಲವಂಗ, ದಾಲ್ಚಿನ್ನಿ, ಕಾಳು ಮೆಣಸು ಮತ್ತು ಜೀರಿಗೆಯನ್ನು ಹಾಕಿ ಘಮ ಬರುವವರೆಗೆ ಹುರಿಯಿರಿ.
- ನಂತರ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬಾಡಿಸಿ.
- ಬಳಿಕ ಈರುಳ್ಳಿ ಹೊಂಬಣ್ಣಕ್ಕೆ ಬಂದ ನಂತರ ಟೊಮೆಟೊ ಹಾಕಿ ಅದು ಮೃದುವಾಗುವವರೆಗೆ ಬೇಯಿಸಿ.
- ಈಗ ಅರಿಶಿನ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲವನ್ನು ಸೇರಿಸಿ ಸಣ್ಣ ಉರಿಯಲ್ಲಿ ಮಸಾಲೆಯ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
- ಮಸಾಲೆ ಸಿದ್ಧವಾದ ಮೇಲೆ ಹೆಚ್ಚಿದ ಆಲೂಗಡ್ಡೆಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ, ಇದರಿಂದ ಮಸಾಲೆ ಆಲೂಗಡ್ಡೆಯ ಒಳಗೆ ಸರಿಯಾಗಿ ಸೇರಿಕೊಳ್ಳುತ್ತದೆ.
- ನಂತರ ಹಸಿ ಬಟಾಣಿ, ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಕುದಿಯಲು ಪ್ರಾರಂಭವಾಗುವವರೆಗೆ ಕಾಯಿರಿ.
- ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಮೆಲ್ಲಗೆ ಕೈಯಾಡಿಸಿ (ಅಕ್ಕಿ ತುಂಡಾಗದಂತೆ ಜಾಗ್ರತೆ ವಹಿಸಿ).
- ಈಗ ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಎರಡು ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ ತನ್ನಷ್ಟಕ್ಕೆ ತಣ್ಣಗಾಗಲು ಬಿಡಿ.
- ಕುಕ್ಕರ್ ಆರಿದ ನಂತರ ಮುಚ್ಚಳ ತೆಗೆದು, ಮಸಾಲೆಗಳು ಸಮವಾಗಿ ಹರಡುವಂತೆ ಮೆಲ್ಲಗೆ ಅನ್ನವನ್ನು ಮಿಕ್ಸ್ ಮಾಡಿ. ಈಗ ಬಿಸಿಬಿಸಿ ಆಲೂ ಮಟರ್ ಪುಲಾವ್ ಸವಿಯಲು ಸಿದ್ಧ.
ಇದನ್ನು ಕ್ಯಾರೆಟ್ ರೈತಾ, ಉಪ್ಪಿನಕಾಯಿ ಅಥವಾ ಮೊಸರು ಬಜ್ಜಿಯಂತಹ ಕಾಂಬಿನೇಷನ್ಗಳೊಂದಿಗೆ ಬಡಿಸಿದರೆ ರುಚಿ ಅಮೋಘವಾಗಿರುತ್ತದೆ, ಖಂಡಿತಾ ಎಲ್ಲರೂ ಇಷ್ಟಪಡುತ್ತಾರೆ.
ಈ ಟಿಪ್ಸ್ ನೆನಪಿಡಿ..!
• ಅನ್ನ ಉದುರು ಉದುರಾಗಿ ಬರಲು ಅಕ್ಕಿಯನ್ನು ಕನಿಷ್ಠ ಇಪ್ಪತ್ತು ನಿಮಿಷ ನೆನೆಸಬೇಕು.
• ಅಕ್ಕಿಯ ಅಳತೆಗೆ ತಕ್ಕಂತೆ ಸರಿಯಾದ ಪ್ರಮಾಣದ ನೀರನ್ನು ಬಳಸಬೇಕು.
• ಹೆಚ್ಚು ನೀರು ಸೇರಿಸುವುದರಿಂದ ಅನ್ನ ಮೆತ್ತಗಾಗುವ ಸಾಧ್ಯತೆಯಿದೆ.
• ಪುಲಾವ್ ಮಾಡುವಾಗ ಎಣ್ಣೆಯ ಬದಲಿಗೆ ದೇಸಿ ತುಪ್ಪ ಬಳಸಿದರೆ ಅದರ ರುಚಿ ಮತ್ತು ಪರಿಮಳ ಹತ್ತು ಪಟ್ಟು ಹೆಚ್ಚುತ್ತದೆ.



Click it and Unblock the Notifications
