Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಗಸಗಸೆ ಹಲ್ವಾ ಮಾಡುವ ಪಾಕವಿಧಾನ ಇಲ್ಲಿದೆ..!
ಗಸಗಸೆ ಪಾಯಸ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಗಸಗಸೆ ಪಾಯಸವನ್ನು ಪ್ರತಿಯೊಬ್ಬರು ಸಹ ಇಷ್ಟಪಡುತ್ತಾರೆ. ಹಲವು ರೆಸಿಪಿಗಳಲ್ಲಿ ಗಸಗಸೆಯನ್ನು ನಾವು ಬಳಸುತ್ತೇವೆ. ಗಸಗಸೆ ಬರೀ ಅಡುಗೆ ಕಾರಣಕ್ಕೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಸಹ ಉತ್ತಮವಾಗಿದೆ
ಅದರಲ್ಲೂ ಗಸಗಸೆಯ ಹಲ್ವಾ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ? ಹೌದು ಇದರಲ್ಲಿ ಪಾಯಸ ಮಾತ್ರವಲ್ಲ ಗಸಗಸೆಯ ಹಲ್ವಾ ಸಹ ಮಾಡಬಹುದು. ಹಾಗಾದರೆ ಹಸಗಸೆ ಹಲ್ವಾ ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ, ಅದಕ್ಕೆ ಬೇಕಾದ ವಸ್ತುಗಳೇನು, ಗಸಗಸೆ ಹಲ್ವಾ ಮಾಡುವ ಪಾಕವಿಧಾನವೇನು? ಎಂಬುದನ್ನು ತಿಳಿದುಕೊಳ್ಳೋಣ.

ಗಸಗಸೆ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
100 ಗ್ರಾಂ ಗಸಗಸೆ ರಾತ್ರಿಯಿಡೀ ನೀರಿನಲ್ಲಿ ನೆನೆಸಿ
1/2 ಕಪ್ (125 ಗ್ರಾಂ) ತುಪ್ಪ
2 ಕಪ್ ಹಾಲು
8 ಹಸಿರು ಏಲಕ್ಕಿ, ಪುಡಿ
1/2 ಕಪ್ ಸಕ್ಕರೆ
2-3 ಬಾದಾಮಿ
ಗಸಗಸೆ ಹಲ್ವಾ ಮಾಡುವುದು ಹೇಗೆ?
ರಾತ್ರಿ ನೀರಿನಲ್ಲಿ ನೆನೆಸಿಟ್ಟ ಗಸಗಸೆಯನ್ನು ಚೆನ್ನಾಗಿ ತೊಳೆಯಿರಿ, ಈ ಗಸಗಸೆಯ ಕೆಳಗೆ ಅನಗತ್ಯ ಕಸಗಳು, ಮಣ್ಣು ನಿಂತಿರುತ್ತದೆ ಅದನ್ನು ಬೇರ್ಪಡಿಸಿಟ್ಟುಕೊಳ್ಳಿ, ಇಲ್ಲವೆ ನೀರಿಗೆ ಹಾಕುವ ಮುನ್ನವೇ ಚೆನ್ನಾಗಿ ಸಂಸ್ಕರಿಸಿ.
ಒಲೆಯನ್ನು ಮಧ್ಯಮ ಉರಿಯಲ್ಲಿ ಇಟ್ಟು ಅದಕ್ಕೆ ಅರ್ಧ ಕಪ್ ತುಪ್ಪ ಹಾಕಿ ತುಪ್ಪ ಬಿಸಿಯಾದ ಬಳಿಕ ಅದಕ್ಕೆ ಗಸಗಸೆಯನ್ನು ಹಾಕಿ. ಬಳಿಕ ಚೆನ್ನಾಗಿ ಕಲಸಿ. ಗಸಗಸೆ ಗೋಲ್ಡನ್ ಕಲರ್‌ಗೆ ತಿರುಗುವವರೆಗೂ ಹುರಿಯಿರಿ. ಈ ವೇಳೆ ಗಸಗಸೆ ಕಪ್ಪಾಗದಂತೆ ತಡೆಯಲು ಚೆನ್ನಾಗಿ ತಿರುಗಿಸುತ್ತಿರಿ.
ಗಸಗಸೆ ಗೋಲ್ಟನ್ ಬ್ರೌನ್ ಕಲರ್‌ಗೆ ತಿರುಗಿದ ಬಳಿಕ ಅದಕ್ಕೆ ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ, ಸ್ಪಲ್ಪ ಹೊತ್ತು ಬಿಸಿ ಮಾಡಿ, ಹಾಲು ಬಿಸಿಯಾದ ಬಳಿಕ ಅದಕ್ಕೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವರೆಗೂ ಚೆನ್ನಾಗಿ ಕಲಸಿ. ಇದು ಪದಾರ್ಥವು ಗಟ್ಟಿಯಾಗುವವರೆಗೂ ತಿರುಗಿಸುತ್ತಾ ಇರಿ. ಬಳಿಕ ಅದಕ್ಕೆ ಬಾದಾಮಿಯನ್ನು ಹಾಕಿರಿ. ಇಷ್ಟಾದರೆ ಗಸಗಸೆ ಹಲ್ವಾ ಸವಿಯಲು ಸಿದ್ದವಾಗುತ್ತದೆ. ನೆನೆಪಿಡಿ ಯಾವುದೇ ಹಂತದಲ್ಲೂ ಇದಕ್ಕೆ ನೀರು ಮಿಶ್ರಣ ಮಾಡಬೇಡಿ.
ಗಸಗಸೆಯ ಆರೋಗ್ಯಕರ ಅಂಶಗಳೇನು ಗೊತ್ತಾ?
ಬಾಯಿ ಹುಣ್ಣುಗಳ ಸಮರ್ಥ ಚಿಕಿತ್ಸೆ
ಗಸಗಸೆಯೂ ದೇಹವನ್ನು ತಂಪಾಗಿಸುವ ಪರಿಣಾಮವನ್ನು ಬೀರುವುದರಿಂದ, ಗಸಗಸೆ ಬೀಜಗಳು ಬಾಯಿಯ ಹುಣ್ಣುಗಳಿಗೆ ಉತ್ತಮ ಚಿಕಿತ್ಸೆ ಎಂದು ತಿಳಿದುಬಂದಿದೆ. ಗಸಗಸೆಯಲ್ಲಿನ ಅತ್ಯಗತ್ಯ ಅಂಶವಾದ ಒಲೀಕ್ ಆಮ್ಲವು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಗಸಗಸೆ ಬೀಜಗಳಲ್ಲಿನ ಸತು ಮತ್ತು ಉತ್ಕರ್ಷಣ ನಿರೋಧಕ ಅಂಶವು ದೃಷ್ಟಿ ಸುಧಾರಿಸಲು ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಕಣ್ಣಿನ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಆರೋಗ್ಯಕರ ದೃಷ್ಟಿಗಾಗಿ ಕಣ್ಣಿನ ಆರೈಕೆ ಮಾಡುತ್ತದೆ.
ಗಸಗಸೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಿಸಲು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗಸಗಸೆ ಬೀಜಗಳ ಸೇವನೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದು ನಿಮ್ಮ ಮೆದುಳು ಸೇರಿದಂತೆ ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕದ ಅತ್ಯುತ್ತಮ ಪೂರೈಕೆಗೆ ಕಾರಣವಾಗುತ್ತದೆ.
ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಯಲ್ಲಿ ಸಹಾಯ
ಗಸಗಸೆ ಬೀಜಗಳಲ್ಲಿನ ಪೊಟ್ಯಾಸಿಯಮ್ ಅಂಶವು ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಮತ್ತು ಅವುಗಳ ಮರು-ಸಂಭವನೆಯನ್ನು ತಡೆಯುತ್ತದೆ. ಗಸಗಸೆ ಬೀಜಗಳು ಸರಿಯಾದ ಥೈರಾಯ್ಡ್ ಕಾರ್ಯನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇದಿಷ್ಟೇ ಅಲ್ಲ ಹಲವು ಬಗೆಯ ಆರೋಗ್ಯಕರ ಅಂಶಗಳು ಗಸಗಸೆಯಲ್ಲಿವೆ.



Click it and Unblock the Notifications