Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪಿತೃಪಕ್ಷಕ್ಕೆ ಅದ್ಭುತ ರುಚಿಯ 10 ನಿಮಿಷದ ಹೋಳಿಗೆ: ಬಹಳ ಸುಲಭದ ತಿಂಡಿ
ಪಿತೃ ಪಕ್ಷದ ವಾರ ನಡೆಯುತ್ತಿದೆ. ಬಹುತೇಕರು ಪಿತೃ ಪಕ್ಷ ಸಂಪ್ರದಾಯಗಳ ನೆರವೇರಿಸಿದ್ದಾರೆ. ಹಾಗೆ ಮತ್ತೆ ಕೆಲವರು ಮಹಾಲಯ ಅಮಾವಾಸ್ಯೆಯಂದು ಈ ಸಂಪ್ರಯದಾಯವನ್ನು ನೆರವೇರಿಸುತ್ತಾರೆ. ಹಾಗೆ ಈ ದಿನ ಪೂರ್ವಜರಿಗೆ ಇಷ್ಟವಾಗುವಂತಹ ಖಾದ್ಯಗಳನ್ನು ಈ ದಿನವನ್ನು ಮಾಡಿ ಊಟ ಮಾಡುವುದು ನೋಡಬಹುದು.
ಹಲವರು ಈ ದಿನ ಸಂಪೂರ್ಣ ಸಸ್ಯಹಾರಿ ಊಟ ಮಾಡುತ್ತಾರೆ, ಮತ್ತೆ ಕೆಲವು ಕಡೆಗಳಲ್ಲಿ ಮಾಂಸಾಹಾರ ಊಟ ಮಾಡುವುದು ನೋಡಬಹುದು. ಆದ್ರೆ ಎರಡೂ ಬಗೆಯಲ್ಲೂ ಸಿಹಿ ಅಂತೂ ಇದ್ದೇ ಇರಲಿದೆ. ಪೂರ್ವಜರಿಗೆ ಇಷ್ಟವಾಗುವಂತಹ ಬಗೆ ಬಗೆಯ ಸಿಹಿಗಳ ಮಾಡುತ್ತಾರೆ. ಅದ್ರಲ್ಲೂ ಬಹಳ ಸಿಹಿಗಳನ್ನು ಊಟದೊಂದಿಗೆ ಸವಿಯೋದು ನೋಡಬಹುದು.

ಇನ್ನು ಸಿಹಿ ಅಂದ ತಕ್ಷಣ ಹಲವು ರೀತಿಯ ತಿಂಡಿಗಳ ಮಾಡುತ್ತಾರೆ. ಅದ್ರಲ್ಲೂ ಕಜ್ಜಾಯ, ಹೋಳಿಗೆ ಸೇರಿ ವಿವಿಧ ಬಗೆಯ ಸಿಹಿಗಳು ಇದ್ದೇ ಇರಲಿದೆ. ಹೋಳಿಗೆ ಅಂದ್ರೆ ಅದರಲ್ಲು ಹಲವು ರೀತಿಯ ಬಗೆಗಳಿವೆ. ನಾವಿಂದು ಸುಲಭವಾಗಿ ಕೇವಲ 10 ನಿಮಿಷದಲ್ಲಿ ಮಾಡುವಂತಹ ರವೆಯಿಂದ ಮಾಡುವ ರುಚಿ ರುಚಿಯ ಹೋಳಿಗೆ ಕುರಿತು ತಿಳಿದುಕೊಳ್ಳೋಣ.
ಬೇಳೆ ಹೋಳಿಗೆ ಕಾಯಿ ಹೋಳಿಗೆ ಬದಲಿಗೆ ಇಂದು ನಾವು ಪಿತೃಪಕ್ಷಕ್ಕೆ ವಿಶೇಷವಾಗಿ ರವೆ ಹೋಳಿಗೆ ಮಾಡುವುದು ಹೇಗೆ ನೋಡೋಣ. ಈ ಹೀಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ಹೋಳಿಗೆ ಮಾಡಲು ಬೇಕಾಗುವ ವಸ್ತುಗಳು ಇವು
- ಮೈದಾ ಹಿಟ್ಟು
- ರವೆ
- ಉಪ್ಪು
- ಎಣ್ಣೆ
- ಏಲಕ್ಕಿ ಪುಡಿ
ರವೆ ಹೋಳಿಗೆ ಮಾಡುವ ಸುಲಭದ ವಿಧಾನ
2 ಕಪ್ ಮೈದಾ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ 2 ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಕಲಸಿಕೊಳ್ಳಿ. ಇದು ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿ ಹದಕ್ಕೆ ಬರಬೇಕು. ನಂತರ ಎಣ್ಣೆ ಹಚ್ಚಿ ಪ್ಲೇಟ್ ಮುಚ್ಚಿ 1 ಗಂಟೆ ಬಿಡಬೇಕು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು 5 ಕಪ್ ನೀರು ಹಾಕಿಕೊಂಡು ಕುದಿಬರಲು ಬಿಡಿ.
ನೀರು ಕುದಿಬರುವಾಗ ಒಂದೂವರೆ ಕಪ್ ಬೆಲ್ಲ ಹಾಕಿಕೊಂಡು ಕರಗಲು ಬಿಡಿ. ಬೆಲ್ಲ ಕರಗುವಂತೆ ಆಗಾಗ ಮಿಶ್ರಣ ಮಾಡಿ. ಬೆಲ್ಲ ಕರಗಿದ ಬಳಿಕ ಏಲಕ್ಕಿ ಪುಡಿ ಹಾಕಿ, ನಂತರ 1 ಕಪ್ ಬಾಂಬೆ ರವೆ ಹಾಕಿಕೊಳ್ಳಿ. ಹಾಗೆ ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. ಇದನ್ನು ಮಿಶ್ರಣ ಮಾಡುತ್ತಾ ನೀರು ಕಡಿಮೆಯಾಗಿ ಗಟ್ಟಿಯಾಗಬೇಕು. ಉಪ್ಪಿಟ್ಟು ರೀತಿ ಬಂದಾಗ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ಇದು ಕೇಸರಿಬಾತ್ನಂತೆ ಆಗಬೇಕು.
ಈಗ ಒಲೆ ಆಫ್ ಮಾಡಿ ಇದನ್ನು ಒಂದು ಪ್ಲೇಟ್ಗೆ ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ. ಇದು ಉಂಡೆ ಕಟ್ಟುವ ಹದಕ್ಕೆ ಬರಬೇಕು. ಈಗ ಮೈದಾ ಹಿಟ್ಟನ್ನು ತೆಗದುಕೊಂಡು ಕೈಗೆ ಎಣ್ಣೆ ಹಚ್ಚಿಕೊಂಡು ಉಂಡೆ ಕಟ್ಟಿಕೊಳ್ಳಬೇಕು. ಈಗ ಮೈದಾ ಹಿಟ್ಟನ್ನು ಸ್ವಲ್ಪ ತಟ್ಟಿಕೊಂಡು ನಂತ ಅದರ ಮಧ್ಯದಲ್ಲಿ ರವೆ ಹೂರ್ಣ ಇಟ್ಟು ಮುಚ್ಚಿಕೊಂಡು ನಂತರ ಚಪಾತಿಯಂತೆ ಲಟ್ಟಿಸಿಕೊಳ್ಳಬೇಕು.
ಇದೇ ವಿಧಾನದ ಮೂಲಕ ಎಲ್ಲಾ ಹಿಟ್ಟನ್ನು ಮಾಡಿಕೊಂಡು ಕಾವಲಿ ಒಲೆ ಮೇಲೆ ಇಟ್ಟು ಎರಡೂ ಕಡೆ ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರವೆ ಹೋಳಿಗೆ ಸಿದ್ದವಾಗಲಿದೆ. ಪಿತೃ ಪಕ್ಷದಲ್ಲಿ ಹೇಳಿ ಮಾಡಿಸಿದ ಸಿಹಿ ಇದು.



Click it and Unblock the Notifications