Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಪೈನಾಪಲ್ ಹಲ್ವಾ ಮಾಡುವುದು ಬಲು ಸುಲಭ, ರುಚಿ ಸೂಪರ್
Recipes
oi-Reena TK
Posted By: Reena TK
ಪೈನಾಪಲ್ ಹಲ್ವಾ ಟೇಸ್ಟ್ ಮಾಡಿದ್ದೀರಾ? ಸೂಪರ್ ಆಗಿರುತ್ತದೆ, ಆದರೆ ಈ ಹಲ್ವಾ ಎಲ್ಲಾ ಬೇಕರಿಗಳಲ್ಲಿ ಸಿಗಲ್ಲ, ಕೆಲವೊಂದು ಬೇಕರಿಗಳಲ್ಲಿ ಸಿಗುತ್ತದೆ, ನಿಮಗೆ ತುಂಬಾ ಪ್ರಿಯವಾಗಿದ್ದ
ಪೈನಾಪಲ್ ಹಲ್ವಾವನ್ನು ನೀವು ಸುಲಭದಲ್ಲಿ ಮಾಡಬಹುದು, ನೀವು ಅಂದುಕೊಂಡಂತೆ ದೊಡ್ಡ ಶ್ರಮವೇನೂ ಇಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ?:

ಬೇಕಾಗುವ ಸಾಮಗ್ರಿ
2 ಕಪ್ ಪೈನಾಪಲ್
1 ಕಪ್ ಕಾರ್ನ್ ಫ್ಲೋರ್
2 ಚಮಚ ಸಕ್ಕರೆ
5-6 ಚಮಚ ತುಪ್ಪ
ಸ್ವಲ್ಪ ಏಲಕ್ಕಿ
ಮಾಡುವ ವಿಧಾನ:
- ಮೊದಲಿಗೆ ಪೈನಾಪಲ್ ಅನ್ನು ನುಣ್ಣನೆ ರುಬ್ಬಿ, ಸ್ವಲ್ಪ ನೀರು ಸೇರಿಸಿ ರುಬ್ಬಬಹುದು. ನೀರು ಸೇರಿಸಿದೆ ಮಾಡಬೇಕೆಂದರೆ ಹೆಚ್ಚು ಪೈನಾಪಲ್ ಬೇಕಾಗುವುದು
- ಪೈನಾಪಲ್ ರಸವನ್ನು ಸೋಸಿ
- ಅದಕ್ಕೆ ಒಂದು ಕಪ್ ಜೋಳದ ಹಿಟ್ಟು ಸೇರಿಸಿ ಮಿಕ್ಕ್ ಮಾಡಿ
- ಹಿಟ್ಟು ದೋಸೆ ಹಿಟ್ಟಿನಂತೆ ಹದವಾಗಿರಬೇಕು, ತುಂಬಾ ಗಟ್ಟಿಯಾಗಬಾರದು,
- ಈಗ ದಪ್ಪ ತಳವಿರುವ ಪಾತ್ರೆಗೆ 1 ಕಪ್ ನೀರು ಹಾಕಿ ಅದರಕ್ಕೆ 2 ಕಪ್ ನೀರು ಸೇರಿಸಿ, ಕುದಿಸಿ ಸಕ್ಕರೆ ಪಾಕ ತಯಾರಿಸಿ.
- ನಂತರ ಮಿಶ್ರ ಮಾಡಿಟ್ಟ ಪೈನಾಪಲ್ ಮಿಶ್ರಣ ಸೇರಿಸಿ ತಿರುಗಿಸುತ್ತಲೇ ಇರಿ, ಮಿಶ್ರಣ ಗಟ್ಟಿಯಾಗುವವರೆಗೆ ತಿರುಗಿಸುತ್ತಲೇ ಇರಿ
- ನಂತರ ಸ್ವಲ್ಪ ಹಳದಿ ಬಣ್ಣದ ಫುಡ್ ಕಲರ್ ಸೇರಿಸಿ.
- ನಂತರ 2 ಚಮಚ ತುಪ್ಪ ಸೇರಿಸಿ ಮತ್ತೆ ಕುದಿಸಿ
- ತುಪ್ಪವನ್ನು ಸಂಪೂರ್ಣ ಹೀರಿಕೊಳ್ಳುತ್ತದೆ.
- ನಂತರ 2 ಚಮಚ ತುಪ್ಪವನ್ನ ಸೇರಿಸಿ
- ನೀವು 6-7 ಚಮಚದವರೆಗೆ ತುಪ್ಪ ಸೇರಿಸಬಹುದು.
- ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬಿಸಿ ಮಾಡಿ.
- 1/4 ಚಮ ಎಲಕ್ಕಿ ಪುಡಿ ಶೆರಿಸಿ ಮಿಕ್ಸ್ ಮಾಡಿ
- ಈಗ ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಸರಿಯಿರಿ 2 ಗಂಟೆ ಇಡಿ, ರೂಮ್ನ ಉಷ್ಣತೆಗೆ ಇಟ್ಟರೆ ಸಾಕು. ನಂತರ ನಿಮಗೆ ಬೇಕಾದ ಶೇಪ್ಗೆ ಕಟ್ ಮಾಡಿ.
Comments
[ of 5 - Users]
Story first published: Sunday, September 15, 2024, 19:55 [IST]
Other articles published on Sep 15, 2024



Click it and Unblock the Notifications