Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನ್ಯೂ ಇಯರ್ ಪಾರ್ಟಿಗೆ ಪರ್ಫೆಕ್ಟ್ ರೆಸಿಪಿ! ಮನೆಯಲ್ಲೇ ಮಾಡಿ ಮುಂಬೈ ಸ್ಟೈಲ್ ಪಾವ್ ಭಾಜಿ.. ರುಚಿಗೆ ಎಲ್ಲರೂ ಫಿದಾ!
ಹೊಸ ವರ್ಷದ ಪಾರ್ಟಿಗೆ ಹೇಳಿ ಮಾಡಿಸಿದ ರೆಸಿಪಿ! ಮನೆಯಲ್ಲೇ ಮಾಡಿ ಮುಂಬೈ ಸ್ಟೈಲ್ ಪಾವ್ ಭಾಜಿ (Pav Bhaji).. ರೆಸ್ಟೋರೆಂಟ್ ರುಚಿಗೆ ಈ ಟಿಪ್ಸ್ ಫಾಲೋ ಮಾಡಿ. ಹೌದು, ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧತೆಗಳು ಶುರುವಾಗಿವೆ. ಈ ವಿಶೇಷ ಸಂದರ್ಭದಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳಿಲ್ಲದೆ ಪಾರ್ಟಿ ಅಪೂರ್ಣ ಎನ್ನಬಹುದು. ಮನೆಮಂದಿ ಹಾಗೂ ಅತಿಥಿಗಳೊಂದಿಗೆ ಆಚರಿಸುವ ಹೊಸ ವರ್ಷದ ಔತಣಕೂಟಕ್ಕೆ ಜನಪ್ರಿಯ ಸ್ಟ್ರೀಟ್ ಫುಡ್ ಆಯ್ಕೆಯಾಗುವುದರಲ್ಲಿ ಅಚ್ಚರಿಯಿಲ್ಲ.
ಮಸಾಲೆಯುಕ್ತ ಭಾಜಿ ಮತ್ತು ಮೃದುವಾದ ಬೆಣ್ಣೆ ಪಾವ್ ಕಾಂಬಿನೇಶನ್ನ 'ಮುಂಬೈ ಪಾವ್ ಭಾಜಿ'ಗೆ ಸರಿಸಾಟಿಯೇ ಇಲ್ಲ. ಈ ಬಾರಿ ನೀವು ಮನೆಯಲ್ಲೇ ಹೊಸ ವರ್ಷದ ಪಾರ್ಟಿ ಆಯೋಜಿಸಿದ್ದರೆ, ಅತಿಥಿಗಳ ಮನ ಗೆಲ್ಲಲು ಪಾವ್ ಭಾಜಿ ಅತ್ಯುತ್ತಮ ಆಯ್ಕೆಯಾಗಿದೆ. ಅಪ್ಪಟ ಮುಂಬೈ ಶೈಲಿಯ ಈ ಖಾದ್ಯವನ್ನು ರೆಸ್ಟೋರೆಂಟ್ ಶೈಲಿಯಲ್ಲಿ ಮನೆಯಲ್ಲೇ ಸುಲಭವಾಗಿ ಸಿದ್ಧಪಡಿಸುವುದು ಹೇಗೆ (Mumbai Pav Bhaji Recipe) ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಪಾವ್ ಭಾಜಿಗೆ ಬೇಕಾಗುವ ಪದಾರ್ಥಗಳು
ಭಾಜಿಗಾಗಿ
• ಬೇಯಿಸಿದ ಆಲೂಗಡ್ಡೆ
• ಹೂಕೋಸು
• ಕ್ಯಾರೆಟ್
• ಹಸಿ ಬಟಾಣಿ
• ಈರುಳ್ಳಿ
• ಟೊಮೆಟೊ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಹಸಿ ಮೆಣಸಿನಕಾಯಿ
ಮಸಾಲಾಕ್ಕೆ
• ಪಾವ್ ಭಾಜಿ ಮಸಾಲಾ
• ಕೆಂಪು ಮೆಣಸಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ಬೆಣ್ಣೆ
• ಕೊತ್ತಂಬರಿ ಸೊಪ್ಪು
• ನಿಂಬೆ ಹಣ್ಣು
ಪಾವ್ ಸಿದ್ಧತೆಗೆ
• ಪಾವ್ ಬನ್ಗಳು
• ಸ್ವಲ್ಪ ಬೆಣ್ಣೆ (ಹುರಿಯಲು)
ಪಾವ್ ಭಾಜಿ ತಯಾರಿಸುವ ಸುಲಭ ವಿಧಾನ
- ಮೊದಲಿಗೆ, ಆಲೂಗಡ್ಡೆ, ಹೂಕೋಸು, ಕ್ಯಾರೆಟ್ ಮತ್ತು ಬಟಾಣಿ ಕಾಳುಗಳನ್ನು ಕುಕ್ಕರ್ನಲ್ಲಿ ಹಾಕಿ, ಸಾಕಷ್ಟು ನೀರು ಸೇರಿಸಿ 2-3 ಸೀಟಿ ಬರುವವರೆಗೆ ಬೇಯಿಸಿ.
- ತರಕಾರಿಗಳು ಚೆನ್ನಾಗಿ ಬೆಂದ ನಂತರ, ಸ್ಮಾಷರ್ ಬಳಸಿ ಅವುಗಳನ್ನು ನುಣ್ಣಗೆ ಮ್ಯಾಶ್ ಮಾಡಿ ಪಕ್ಕಕ್ಕೆ ಇಡಿ.
- ನಂತರ, ಅಗಲವಾದ ಪ್ಯಾನ್ ಅಥವಾ ತವಾ ಬಿಸಿ ಮಾಡಿ, ಅದಕ್ಕೆ ಬೆಣ್ಣೆ ಸೇರಿಸಿ. ಬೆಣ್ಣೆ ಕರಗಿದ ಕೂಡಲೇ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.
- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಸಂಪೂರ್ಣವಾಗಿ ದೂರವಾಗುವವರೆಗೆ ಬಾಡಿಸಿ.
- ಇದಕ್ಕೆ ಸಣ್ಣದಾಗಿ ಹೆಚ್ಚಿದ ಟೊಮೆಟೊ ಸೇರಿಸಿ, ಅದು ಸಂಪೂರ್ಣ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿ.
- ನಂತರ ಪಾವ್ ಭಾಜಿ ಮಸಾಲಾ, ಕೆಂಪು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ.
- ಈಗ ಸಿದ್ಧಪಡಿಸಿದ ಮಸಾಲೆಗೆ ಮ್ಯಾಶ್ ಮಾಡಿದ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಸುಮಾರು 5-7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಮಸಾಲೆ ಚೆನ್ನಾಗಿ ಬೇಯಲು ಬಿಡಿ.
- ಕೊನೆಯಲ್ಲಿ, ಮೇಲೆ ಸ್ವಲ್ಪ ಬೆಣ್ಣೆ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಘಮಘಮಿಸುವ ಭಾಜಿ ಸಿದ್ಧವಾಗುತ್ತದೆ.
- ಪಾವ್ ಹುರಿಯಲು, ಪಾವ್ ಬನ್ಗಳನ್ನು ಮಧ್ಯದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ತವದ ಮೇಲೆ ಸ್ವಲ್ಪ ಬೆಣ್ಣೆ ಮತ್ತು ಚಿಟಿಕೆ ಪಾವ್ ಭಾಜಿ ಮಸಾಲಾ ಹಾಕಿ.
- ಕತ್ತರಿಸಿದ ಪಾವ್ ಅನ್ನು ಎರಡೂ ಕಡೆ ಕೆಂಪಾಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಬಿಸಿ ಮಾಡಿರಿ.
ಮುಂಬೈ ಪಾವ್ ಭಾಜಿಯ ವಿಶೇಷತೆಗಳು
* ಮುಂಬೈ ಪಾವ್ ಭಾಜಿ ಪಾರ್ಟಿಗಳಿಗೆ ಸೂಕ್ತ. ಇದು ಎಲ್ಲರ ಮೆಚ್ಚುಗೆ ಗಳಿಸುವುದು ಖಂಡಿತ.
* ಇದು ಕೇವಲ ರುಚಿ ಮಾತ್ರವಲ್ಲದೆ ಅಗತ್ಯ ಪೌಷ್ಟಿಕಾಂಶವನ್ನೂ ಒದಗಿಸುತ್ತದೆ.
* ನಿಮ್ಮ ಅಭಿರುಚಿಗೆ ತಕ್ಕಂತೆ ಮಾರ್ಪಡಿಸಬಹುದು. ಮಕ್ಕಳಿಗೆ ನೀಡುವಾಗ ಬೆಣ್ಣೆ ಜಾಸ್ತಿ ಸೇರಿಸಬಹುದು.
* ಬಿಸಿಬಿಸಿಯಾದ ಭಾಜಿಯ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ನಿಂಬೆ ರಸ ಹಿಂಡಿ ಸವಿಯುವ ಆನಂದವೇ ಬೇರೆ.
ಈ ವರ್ಷ ಹೊರಗಿನ ಅಡುಗೆಗೆ ವಿದಾಯ ಹೇಳಿ, ಮನೆಯಲ್ಲೇ ಈ ಸ್ಪೆಷಲ್ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ!



Click it and Unblock the Notifications
