Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪನ್ನೀರ್ ಖೀರ್/ ಪನ್ನೀರ್ ಪಾಯಸ ರೆಸಿಪಿ
ಪನ್ನೀರ್ ಬಳಕೆಯಿಂದ ಅಡುಗೆಯ ಶ್ರೀಮಂತಿಕೆಯನ್ನು ಹೆಚ್ಚಿಸಬಹುದು. ಪನ್ನೀರ್ ರುಚಿ ಹಾಗೂ ಖುಷಿಯನ್ನು ನೀಡುವುದು. ನೀವು ಪನ್ನೀರ್ ಕಡಾಯಿ, ಸಾಗೂ ಪಾಕವಿಧಾನವನ್ನು ಸಾಮಾನ್ಯವಾಗಿ ಸವಿದಿರುತ್ತೀರಿ. ಅದೇ ಪನ್ನೀರ್ ಸಿಹಿ ತಿಂಡಿಯ ವಿಚಾರವನ್ನು ಅಷ್ಟಾಗಿ ತಿಳಿದಿರುವುದಿಲ್ಲ. ಹಾಗಾಗಿಯೇ ನಾವಿಂದು ಪನ್ನೀರ್ ಖೀರ್/ಪಾಯಸ ಎನ್ನುವ ಹೊಸ ಸಿಹಿ ರುಚಿಯ ಪರಿಚಯ ಮಾಡಿಕೊಡುತ್ತಿದ್ದೇವೆ.
ಪನ್ನೀರ್ ಖೀರ್/ಪಾಯಸ ಉತ್ತರ ಭಾರತದ ಕಡೆ ಹೆಚ್ಚಾಗಿ ತಯಾರಿಸುತ್ತಾರೆ. ಇದನ್ನು ಸಮೃದ್ಧವಾದ ಪನ್ನೀರ್, ಮಂದಗೊಳಿಸಿದ ಹಾಲು, ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಒಣ ಹಣ್ಣು ಮತ್ತು ಹಾಲಿನ ಸುಮಧುರ ಮಿಶ್ರಣ ಹಾಗೂ ಸ್ವಲ್ಪ ಉಪ್ಪಿನಂಶ ಹೊಂದಿರುವ ಪನ್ನೀರ್ ಪಾಯಸದ ರುಚಿಯನ್ನು ದ್ವಿಗುಣಗೊಳಿಸುತ್ತವೆ. ಇದನ್ನು ವಿಶೇಷವಾಗಿ ಹಬ್ಬದ ಸಂದರ್ಭ ಹಾಗೂ ವ್ರತಾಚರಣೆಯ ಸಮಯದಲ್ಲಿ ತಯಾರಿಸುತ್ತಾರೆ.
ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ಬಹು ಬೇಗ ಈ ಪಾಯಸವನ್ನು ತಯಾರಿಸಬಹುದು. ಇದನ್ನು ಫ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿ, ನಂತರ ಸವಿಯಲು ನೀಡಬೇಕು. ಆಗ ಪಾಯಸದ ರುಚಿ ನಾಲಿಗೆಯನ್ನು ಚಪ್ಪರಿಸುವಂತೆ ಮಾಡುತ್ತದೆ. ಜೊತೆಗೆ ಸವಿಯಲು ಬಹಳ ಖುಷಿಯಾಗುವುದು. ನೀವು ಈ ಪಾಯಸವನ್ನು ಮಾಡುವ ಹವಣಿಕೆಯಲ್ಲಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಪಾಕವಿಧಾನವನ್ನು ಅನುಸರಿಸಿ.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 2 ಮಂದಿಗೆ
-
ತುರಿದುಕೊಂಡ ಪನ್ನೀರ್ - 1/2 ಕಪ್
ಮಂದಗೊಳಿಸಿದ ಹಾಲು - 3/4 ಕಪ್
ಹಾಲು - 1/2 ಲೀಟರ್
ಒಣದ್ರಾಕ್ಷಿ -2-3 +ಅಲಂಕಾರಕ್ಕೆ
ಹೆಚ್ಚಿಕೊಂಡ ಬಾದಾಮಿ -1 ಟೀ ಚಮಚ+ ಅಲಂಕಾರಕ್ಕೆ
ಏಲಕ್ಕಿ ಪುಡಿ -1 ಟೀ ಚಮಚ
-
1. ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ.
2. ತಕ್ಷಣವೇ ಹಾಲನ್ನು ಸೇರಿಸಿ.
3. ಗಂಟಾಗದಂತೆ 5-6 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ.
4. ಮಂದಗೊಳಿಸಿದ ಹಾಲನ್ನು ಸೇರಿಸಿ, 3-4 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ.
5. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
6. ಒಣದ್ರಾಕ್ಷಿ ಮತ್ತು ಒಂದು ಟೀ ಚಮಚ ಬಾದಾಮಿ ಚೂರನ್ನು ಸೇರಿಸಿ.
7. ಚೆನ್ನಾಗಿ ಮಿಶ್ರಗೊಳಿಸಿ ನಂತರ ಒಂದು ಬೌಲ್ಗೆ ವರ್ಗಾಯಿಸಿ.
8. ನಂತರ ಇದಕ್ಕೆ ಒಣದ್ರಾಕ್ಷಿ ಮತ್ತು ಬಾದಾಮಿಯಿಂದ ಅಲಂಕರಿಸಿ.
9. ಇದನ್ನು ಫ್ರಿಜ್ನಲ್ಲಿಟ್ಟು ತಂಪಾಗಿಸಿ, ನಂತರ ಸವಿಯಲು ನೀಡಿ.
- 1. ಪನ್ನೀರ್ ಮತ್ತು ಹಾಲನ್ನು ಸೇರಿಸಿದಾಗ ಅದು ಗಂಟಾಗದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು.
- ಸರ್ವಿಂಗ್ ಸೈಜ್ - 1/2 ಕಪ್
- ಕ್ಯಾಲೋರಿ - 281.5 ಕ್ಯಾಲ್
- ಫ್ಯಾಟ್ - 6.8 ಗ್ರಾಂ.
- ಪ್ರೋಟೀನ್ - 8 ಗ್ರಾಂ.
- ಕಾರ್ಬೋಹೈಡ್ರೇಟ್ - 47.6 ಗ್ರಾಂ.
- ಸಕ್ಕರೆ - 43.7 ಗ್ರಾಂ.
- ಫೈಬರ್ - 0.2 ಗ್ರಾಂ.
ಸ್ಟೆಪ್ ಬೈ ಸ್ಟೆಪ್ ಪನ್ನೀರ್ ಪಾಯಸ ರೆಸಿಪಿ
1. ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ.

2. ತಕ್ಷಣವೇ ಹಾಲನ್ನು ಸೇರಿಸಿ.

3. ಗಂಟಾಗದಂತೆ 5-6 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ.

4. ಮಂದಗೊಳಿಸಿದ ಹಾಲನ್ನು ಸೇರಿಸಿ, 3-4 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ.


5. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.


6. ಒಣದ್ರಾಕ್ಷಿ ಮತ್ತು ಒಂದು ಟೀ ಚಮಚ ಬಾದಾಮಿ ಚೂರನ್ನು ಸೇರಿಸಿ.


7. ಚೆನ್ನಾಗಿ ಮಿಶ್ರಗೊಳಿಸಿ ನಂತರ ಒಂದು ಬೌಲ್ಗೆ ವರ್ಗಾಯಿಸಿ.


8. ನಂತರ ಇದಕ್ಕೆ ಒಣದ್ರಾಕ್ಷಿ ಮತ್ತು ಬಾದಾಮಿಯಿಂದ ಅಲಂಕರಿಸಿ.


9. ಇದನ್ನು ಫ್ರಿಜ್ನಲ್ಲಿಟ್ಟು ತಂಪಾಗಿಸಿ, ನಂತರ ಸವಿಯಲು ನೀಡಿ.





Click it and Unblock the Notifications