For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ ಆಲೂ ಟೊಮೇಟೊ ಪಲ್ಯ

By Manohar V
|

ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಕಾಣಸಿಗುವ ಅತಿಹೆಚ್ಚು ಬಳಕೆಯಾಗುವ ತರಕಾರಿ ಬಟಾಟೆ ಅಥವಾ ಪೊಟೇಟೊ. ಬಟಾಟೆ ಖಾದ್ಯವಿಲ್ಲದೆ ಊಟ ಸಂಪೂರ್ಣವಾಗುವುದಿಲ್ಲ. ಇದರ ಪಲ್ಯ ಮತ್ತು ಸಬ್ಜಿಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ನಿಮ್ಮ ಊಟದ ರುಚಿಯನ್ನು ನಾಲಗೆಯಲ್ಲಿ ಹಿಡಿದಿಡುವಂತೆ ಮಾಡುವ ಹಲವಾರು ಪೊಟೇಟೊ ಖಾದ್ಯಗಳಿವೆ. ಡ್ರೈ ಆಲೂ ಸಬ್ಜಿಯಿಂದ ಹಿಡಿದು ಗ್ರೇವಿಯವರೆಗೆ ನಿವು ಹಲವಾರು ಐಟಂಗಳನ್ನು ಪ್ರಯತ್ನಿಸಬಹುದು.

ಇಂದಿನ ಆಧುನಿಕ ಯುಗದಲ್ಲಿ ವೃತ್ತಿನಿರತರ ಸಂಖ್ಯೆ ಹೆಚ್ಚಿರುವ ಸಮಯದಲ್ಲಿ, ಸರಳ ಹಾಗೂ ಸುಲಭವಾಗಿ ತಯಾರಿಸುವ ರೆಸಿಪಿಗಳು ಉತ್ತಮವಾಗಿರುತ್ತವೆ. ಬರೇ 30 ನಿಮಿಷಗಳಲ್ಲಿ ತಯಾರಿಸಬಹುದಾದ ಆಲೂ ಟೊಮೇಟೊ ಪಲ್ಯವನ್ನು ನಿಮಗಾಗಿ ನಾವಿಂದು ನೀಡುತ್ತಿದ್ದೇವೆ.

Tangy Aloo Tamatar: Side Dish Recipe

ಬೇಯಿಸಿದ ಪೊಟೇಟೊವನ್ನು ಬಾಣಲೆಯಲ್ಲಿ ಫ್ರೈ ಮಾಡಿದ ಟೊಮೇಟೊದೊಂದಿಗೆ ಮಿಶ್ರ ಮಾಡಿದ ಪಲ್ಯ ಇದಾಗಿದೆ. ನೀವು ಈ ಪಲ್ಯವನ್ನು ಗ್ರೇವಿಯಂತೆ ಇಲ್ಲವೇ ಸೆಮಿ ಗ್ರೇವಿಯಂತೆ ಮಾಡಬಹುದು. ಈ ರೆಸಿಪಿಯತ್ತ ಒಂದು ನೋಟ ಹರಿಸಿ ಹಾಗೂ ತಯಾರಿಸಿ.

ಪ್ರಮಾಣ: 4
ಸಿದ್ಧತೆ ಸಮಯ: 5 ನಿಮಿಷಗಳು
ಅಡುಗೆ ಸಮಯ: 25 ನಿಮಿಷಗಳು

ಸಾಮಾಗ್ರಿಗಳು:
1.ಪೊಟೇಟೊ - 4-5

2.ಟೊಮೇಟೊ - 2 (ಸಾಮಾನ್ಯ ಗಾತ್ರದಲ್ಲಿ ಕತ್ತರಿಸಿದ್ದು)

3.ಹಸಿಮೆಣಸು - 2 ತುಂಡರಿಸಿದ್ದು

4.ಅರಶಿನ ಹುಡಿ - 1ಟೇ.ಸ್ಫೂನ್

5.ಮೆಣಸಿನ ಹುಡಿ - 1 ಟೇ.ಸ್ಪೂನ್

6.ಕೊತ್ತಂಬರಿ ಹುಡಿ - 1 1/2 ಸ್ಪೂನ್

7.ಗರಂ ಮಸಾಲಾ - 1/2 ಸ್ಪೂನ್

8.ಜೀರಿಗೆ ಹುಡಿ-1/2 ಸ್ಫೂನ್

9.ಉಪ್ಪು - ರುಚಿಗೆ ತಕ್ಕಷ್ಟು

10.ಎಣ್ಣೆ - 1 ಟೇಸ್ಫೂನ್

ಮಾಡುವ ರೀತಿ:

1. ಪೊಟೇಟೊವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ನಾಲ್ಕು ಭಾಗಗಳನ್ನಾಗಿ ಕತ್ತರಿಸಿ

2. ಪ್ರೆಶ್ಶರ್ ಕುಕ್ಕರ್‌ನಲ್ಲಿ ಪೊಟೇಟೊ ಮತ್ತು ನೀರನ್ನು ಹಾಕಿ. ಮೂರು ನಾಲ್ಕು ವಿಶಲ್ ನಂತರ ಕುಕ್ಕರ್ ಆಫ್ ಮಾಡಿ.

3. ಇದೇ ಸಮಯದಲ್ಲಿ, ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ. ಎಣ್ಣೆ ಬಿಸಿ ಆದ ನಂತರ ಜೀರಿಗೆ ಹಾಕಿ.

4. ಜೀರಿಗೆ ಕಾದೊಡನೆ ಅದಕ್ಕೆ ಮೆಣಸಿನ ಹುಡಿ ಮತ್ತು ಟೊಮೇಟೊವನ್ನು ಹಾಕಿ. ಚೆನ್ನಾಗಿ ಮಿಶ್ರ ಮಾಡಿ 3-4 ನಿಮಿಷಗಳಷ್ಟು ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.

5. ಕುಕ್ಕರ್ ತಣಿದ ಒಡನೆ ಬೆಂದ ಪೊಟೇಟೊವನ್ನು ಹೊರತೆಗೆದು ಸಿಪ್ಪೆ ಸುಲಿದಿಡಿ.

6. ಪ್ಯಾನ್‌ಗೆ ಅರಶಿನ ಹುಡಿ ಮತ್ತು ಉಪ್ಪು ಹಾಕಿ. ಮಿಶ್ರ ಮಾಡಿ 2 ನಿಮಿಷಗಳಷ್ಟು ಸಮಯ ಬೇಯಿಸಿ.

7. ಇದೀಗ ಪ್ಯಾನ್‌ಗೆ ಮೆಣಸಿನಕಾಯಿ, ಕೊತ್ತಂಬರಿ ಹುಡಿ, ಮತ್ತು ಗರಂ ಮಸಾಲಾ ಸೇರಿಸಿ. ಮಿಶ್ರ ಮಾಡಿ ಬೇಯಿಸಿ.

8. ಬೇಯಿಸಿ ಸಿಪ್ಪೆ ತೆಗೆದ ಪೊಟೇಟೊವನ್ನು ಪ್ಯಾನ್‌ಗೆ ಹಾಕಿ. ಇದನ್ನು ಸೆಮಿ ಗ್ರೇವಿ ಮಾಡಲು ನೀವು ಬಯಸಿದ್ದರೆ, ಸ್ವಲ್ಪ ನೀರು ಹಾಕಿ ಗ್ರೇವಿ ದಪ್ಪಗಾಗುವರೆಗೆ ಕುದಿಸಿ. ಆದ ನಂತರ ಗ್ಯಾಸ್ ಆರಿಸಿ.

ನೀರೂರಿಸುವ ಆಲೂ ಟೊಮೇಟೊ ಗ್ರೇವಿ ಸಿದ್ಧವಾಗಿದೆ. ಚಪಾತಿ ರೋಟಿಯೊಂದಿಗೆ ಇದನ್ನು ಬಿಸಿಬಿಸಿಯಾಗಿ ಸವಿಯಲು ನೀಡಿ.

English summary

Tangy Aloo Tamatar: Side Dish Recipe

Aloo or potato is one of the staples found in every kitchen. In many households, a meal is incomplete without any aloo dish. Aloo side dishes and sabjis can vary from places to places.
Story first published: Tuesday, January 7, 2014, 17:45 [IST]
X
Desktop Bottom Promotion