For Quick Alerts
ALLOW NOTIFICATIONS  
For Daily Alerts

ಫಟಾಫಟ್ ತಯಾರಿಸಿ-ರುಚಿ ರುಚಿಯಾದ ಪಲ್ಯ

By Manu
|

ಬಿಡುವಿಲ್ಲದ ಸಮಯದಲ್ಲಿ ಅಡಿಗೆ ಕೆಲಸವನ್ನು ನಾವು ಸಾಧ್ಯವಾದಷ್ಟು ಬೇಗನೇ ಮುಗಿಸುವ ಆತುರದಲ್ಲಿರುತ್ತೇವೆ. ಆರೋಗ್ಯಯುತವಾದ ರುಚಿಕರವಾದ ತಿಂಡಿ ಅಥವಾ ಪಲ್ಯವನ್ನು ತಯಾರಿಸಿಕೊಳ್ಳುವುದು ಗೃಹಿಣಿಯರಿಗೆ ನಿಜಕ್ಕೂ ಸವಾಲಿನ ಕೆಲಸವೇ. ಮನೆಯಲ್ಲೇ ಇರುವ ಮಹಿಳೆ ಆಗಿರಬಹುದು ಅಥವಾ ಹೊರಗೆ ದುಡಿಯುವವರೇ ಆಗಿರಬಹುದು ಇಬ್ಬರಿಗೂ ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟಕ್ಕೆ ಕೊಂಡೊಯ್ಯುವ ಪಲ್ಯವನ್ನು ಚಕ ಚಕನೇ ಮಾಡಿ ಮುಗಿಸುವುದೆಂದರೆ ತುಸು ಕಷ್ಟದ ಕೆಲಸವಾಗುತ್ತದೆ.

ನಿಮ್ಮ ಕಷ್ಟವನ್ನು ನಿವಾರಿಸಲು ಮತ್ತು ಆರೋಗ್ಯಪೂರ್ಣ ಹಾಗೂ ರುಚಿಕರ ಪಲ್ಯದ ಸವಿಯನ್ನು ನಿಮ್ಮ ಮನೆಮಂದಿಗೆ ಬಡಿಸುವ ನಿಮ್ಮ ಇಚ್ಛೆಯನ್ನು ಈಡೇರಿಸಲೆಂದೇ ಇಂದಿನ ಲೇಖನದಲ್ಲಿ ಅತಿ ರುಚಿಕರ ಹಾಗೂ ವಿಭಿನ್ನ ಶೈಲಿಯ ಪಲ್ಯದೊಂದಿಗೆ ನಾವು ಬಂದಿದ್ದೇವೆ. ನಿಜಕ್ಕೂ ಅಮೂಲಾಗ್ರ ರುಚಿಯನ್ನು ನೀಡುವ ಮತ್ತು ಸುಲಭವಾಗಿ ತಯಾರಿಸಬಹುದಾದ ಈ ಪಲ್ಯ ನಿಮ್ಮ ಮನೆಯವರಿಗೂ ಅಚ್ಚುಮೆಚ್ಚಿನದಾಗುವುದು ಖಂಡಿತ. ಮುಂದೆ ಓದಿ...

ಫಟಾಫಟ್ ಮಾಡಿ ಬೀಟ್‌ರೂಟ್ ಪಲ್ಯ

ಫಟಾಫಟ್ ಮಾಡಿ ಬೀಟ್‌ರೂಟ್ ಪಲ್ಯ

ಕೆಂಪುಬಣ್ಣ ಎಂಬ ಒಂದೇ ಕಾರಣಕ್ಕೆ ಬೀಟ್‌ರೂಟ್ ತರಕಾರಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಈ ಕೆಂಪುಬಣ್ಣವೇ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು, ಆಂಟಿ ಆಕ್ಸಿಡೆಂಟುಗಳು, ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಇದನ್ನು ಒಂದು ಪರಿಪೂರ್ಣ ಆಹಾರವನ್ನಾಗಿಸಿದೆ. ಆದರೆ ಹೆಚ್ಚಿನವರು ಬೀಟ್‌ರೂಟ್ ಅನ್ನು ಸಾಂಬಾರಿನೊಂದಿಗೆ ಹೋಳಿನ ರೂಪದಲ್ಲಿ ಸೇವಿಸಲು ಇಷ್ಟಪಡುವುದಿಲ್ಲ. ಬದಲಿಗೆ ಪಲ್ಯದ ರೂಪದಲ್ಲಿ ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಸರಳವಾಗಿ ಮಾಡಬಹುದಾದ ಬೀಟ್‌ರೂಟ್‌ ಪಲ್ಯದ ವಿಧಾನವನ್ನು ಇಲ್ಲಿ ಕ್ಲಿಕ್ ಮಾಡಿ ಊಟದ ಸವಿಯನ್ನು ಹೆಚ್ಚಿಸುವ ಬೀಟ್‌ರೂಟ್ ಪಲ್ಯ

ನುಗ್ಗೆ ಸೊಪ್ಪು

ನುಗ್ಗೆ ಸೊಪ್ಪು

ಸಾಮಾನ್ಯವಾಗಿ ನುಗ್ಗೆ ಸೊಪ್ಪು ಕೊಂಚ ಕಹಿಯಾಗಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ, ಇದೇ ಕಾರಣಕ್ಕೆ ಇದು ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವೂ ಇಲ್ಲ. ಆದರೆ ಈ ಎಲೆಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಕಾರಣ ಮಧುಮೇಹಿಗಳಿಗೂ ಸೂಕ್ತವಾಗಿದೆ. ಹೆಚ್ಚಿನ ನಾರು ಮತ್ತು ಜೀರ್ಣಿಸಿಕೊಳ್ಳಲು ಶರೀರದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸುವುದರಿಂದ ತೂಕ ಇಳಿಸಿಕೊಳ್ಳುತ್ತಿರುವವರಿಗೂ ಸೂಕ್ತವಾದ ಆಹಾರವಾಗಿದೆ. ಬನ್ನಿ ಸರಳವಾಗಿ ಮಾಡಬಹುದಾದ ಈ ನುಗ್ಗೆ ಸೊಪ್ಪಿನ ರೆಸಿಪಿ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ನುಗ್ಗೆ ಸೊಪ್ಪಿನ ರೆಸಿಪಿ: ಸರ್ವ ರೋಗಕ್ಕೂ ರಾಮಬಾಣ

ಆಲೂ-ಬೀನ್ಸ್ ಪಲ್ಯ

ಆಲೂ-ಬೀನ್ಸ್ ಪಲ್ಯ

ಸಾಮಾನ್ಯವಾಗಿ ಬೆಳಗಿನ ಹೊತ್ತು ಎಲ್ಲರಿಗೂ ಧಾವಂತವಿರುತ್ತದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಈ ಧಾವಂತ ಅತ್ಯಂತ ಹೆಚ್ಚು. ಇತ್ತ ತಾವೂ ಉದ್ಯೋಗಕ್ಕೆ ತಲುಪಲು ತಯಾರಾಗಬೇಕು, ಮನೆಯವರು ಮತ್ತು ಮಕ್ಕಳನ್ನೂ ತಯಾರು ಮಾಡಿ ಅವರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ಜೊತೆ ಏನಾದರೂ ಪಲ್ಯವನ್ನು ಕಟ್ಟಿಕೊಡಬೇಕಾಗುತ್ತದೆ. ಇಂತಹ ಸಮಯದಲ್ಲಿ ನಿಮ್ಮ ನೆರವಿಗೆ ಬರಲಿದೆ ಆಲೂ-ಬೀನ್ಸ್ ಪಲ್ಯ. ಬರೀ 10-15 ನಿಮಿಷಗಳ ಅವಧಿಯಲ್ಲಿ ತಯಾರಿಸಬಹುದಾದ ಈ ರೆಸಿಪಿಯನ್ನು ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಸರಳ ತಯಾರಿಕೆಯ ಹರಿಕಾರ ಆಲೂ-ಬೀನ್ಸ್ ಪಲ್ಯ

ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡಿನ ಪಲ್ಯ

ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡಿನ ಪಲ್ಯ

ಸಾಮಾನ್ಯವಾಗಿ ಕರಾವಳಿಯ ಹಳ್ಳಿ ಕಡೆಗಳಲ್ಲಿ ವಾರಕ್ಕೆ ಒಂದು ಬಾರಿಯಾದರೂ ಬಾಳೆಯ ದಿ೦ಡನ್ನು ಧಾರಾಳವಾಗಿ ಮೇಲೋಗರಗಳ ತಯಾರಿಕೆಯಲ್ಲಿ ಬಳಸುವುದನ್ನು ಕಾಣಬಹುದಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣವೇನೆಂದರೆ ಬಾಳೆಯು ದಿ೦ಡು ಅತ್ಯಧಿಕವಾದ ಪೋಷಕಾ೦ಶ ತತ್ವಗಳಿರುವ ಒ೦ದು ಆಹಾರವಸ್ತುವಾಗಿದೆ. ಅಲ್ಲದೆ ಬಾಳೆಯ ದಿ೦ಡು ಮೂತ್ರಪಿ೦ಡಗಳಲ್ಲಿ ರೂಪುಗೊಳ್ಳಬಹುದಾದ ಹರಳುಗಳನ್ನು ತಡೆಗಟ್ಟುತ್ತದೆ, ತೂಕವನ್ನು ಕಳೆದುಕೊಳ್ಳುವಲ್ಲಿ ನೆರವಾಗುತ್ತದೆ. ಇ೦ತಹ ಬಾಳೆ ದಿ೦ಡನ್ನು ಮೆ೦ತೆ ಸೊಪ್ಪಿನ೦ತಹ ಮತ್ತೊ೦ದು ಆರೋಗ್ಯದಾಯಕ ಆಹಾರವಸ್ತುವಿನೊ೦ದಿಗೆ ಸೇರಿಸಿಕೊ೦ಡು ಪಲ್ಯವನ್ನು ತಯಾರಿಸಿದಾಗ ಈ ಸಸ್ಯಹಾರಿ ಆಹಾರಪದಾರ್ಥವು ಅತ್ಯ೦ತ ಆರೋಗ್ಯದಾಯಕವಾಗಿರುತ್ತದೆ. ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ - ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡಿನ ರುಚಿಕರ ಪಲ್ಯ

English summary

Quick side dish recipe in kannada

Being a working individual has its own constrictions. Work takes most part of the day and by the time you get back from office there is no energy left to cook something complicated. At such times you need recipes which can get ready in a few minutes. So today boldsky share variety styles of side dish recipe, have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more