For Quick Alerts
ALLOW NOTIFICATIONS  
For Daily Alerts

ಗರಿಗರಿಯಾದ ಮಸಾಲ ಹಪ್ಪಳ, ನೀವು ಪ್ರಯತ್ನಿಸಿ ನೋಡಿ!

By Arshad
|

ಈ ತುಪ್ಪ ದೋಸೆ ಹಪ್ಪಳ ಎಂಥ ಪರಿಮಳ, ಮಾಲತಿಯಮ್ಮನ ಮದುವೆಗೆ ಏನು ಗದ್ದಲ... ಹೀಗೆ ಕರಾವಳಿಯ ಕಡೆ ಒಂದು ಕನ್ನಡದ ಜನಪದ ಹಾಡಿದೆ. ಬಡವರ ಕುಚ್ಚಿಗೆ ಗಂಜಿಯಿಂದ ಹಿಡಿದು ಪಂಚಭಕ್ಷ ಪರಮಾನ್ನದವರೆಗೂ ಊಟದ ರುಚಿಯನ್ನು ಹೆಚ್ಚಿಸುವ ಹಪ್ಪಳದ ವೈವಿದ್ಯ ವಿವಿಧ. ಊಟಕ್ಕೆ ಕೇವಲ ಅನ್ನ, ಸಾರು, ಉಪ್ಪಿನಕಾಯಿ ಮತ್ತೊಂದು ಹಪ್ಪಳ ಇದ್ದರೆ ಈ ಊಟ ಯಾವ ಪರಮಾನ್ನಕ್ಕೂ ಕಡಿಮೆಯಿಲ್ಲ.

ಅದರಲ್ಲೂ ಮಳೆಗಾಲದಲ್ಲಿ ಕುರುಕುರು ಮುರುಕುವ ಹಲಸಿನ, ಗೆಣಸಿನ ಹಪ್ಪಳ ಹಾಗೇ ತಿನ್ನಬಹುದಾದರೆ ವಿವಿಧ ಮಸಾಲೆಗಳಿಂದ ಕೂಡಿದ ಗರಿಗರಿ ಹಪ್ಪಳವಂತೂ ಮಳೆಗಾಲದ ಮಜವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರೊಂದಿಗೆ ಮೊಸರಿನ ಗೊಜ್ಜು ಅಥವಾ ವಿವಿಧ ತರಕಾರಿಗಳ ಸಾಲಾಡ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ಇಂತಹ ಮಸಾಲೆ ಹಪ್ಪಳವನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ರುಚಿಕರ, ಗರಿಗರಿ, ಮಸಾಲೆ ಹಪ್ಪಳ ತಯಾರಿಸುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ವಿಶೇಷ ಅಡುಗೆಗೆ ಆರೋಗ್ಯಕರ ಹಪ್ಪಳ ಸಲಾಡ್

Masala Papad Recipe

*ಪ್ರಮಾಣ: ಇಬ್ಬರಿಗಾಗಿ (ಎರಡು ಹಪ್ಪಳಗಳು)
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಐದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ನಿಮ್ಮ ಆಯ್ಕೆಯ ಸಾದಾ ಹಪ್ಪಳ - ಎರಡು
*ಟೊಮೇಟೊ - 2 (ಚಿಕ್ಕದಾದ ಚೌಕಾಕಾರದಲ್ಲಿ ಕತ್ತರಿಸಿದ್ದು)
*ಸೌತೆಕಾಯಿ - ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಕೊತ್ತಂಬರಿ ಸೊಪ್ಪು- ಎರಡು ಚಿಕ್ಕ ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಹಸಿಶುಂಠಿ: ಅರ್ಧ ಚಿಕ್ಕಚಮಚ (ಚಿಕ್ಕದಾದ ನೂಲುಗಳನ್ನಾಗಿಸಿದ್ದು)
*ಹಸಿಮೆಣಸು: ಒಂದು (ಚಿಕ್ಕದಾಗಿ ಕತ್ತರಿಸಿದ್ದು)
*ಲಿಂಬೆ ರಸ - ಮೂರು ಚಿಕ್ಕಚಮಚ
*ಅಡುಗೆ ಎಣ್ಣೆ - ಎರಡು ಚಿಕ್ಕಚಮಚ ಅವಲಕ್ಕಿ ಹಪ್ಪಳ ಹಾಗೂ ಹಲಸಿನಹಣ್ಣು ಹಪ್ಪಳ

ಅಲಂಕಾರಕ್ಕೆ:
*ಉಪ್ಪು: ರುಚಿಗನುಸಾರ
*ಕಪ್ಪು ಉಪ್ಪು - ಕಾಲು ಚಿಕ್ಕಚಮಚ
*ಜೀರಿಗೆ ಪುಡಿ - ಅರ್ಧ ಚಮಚ
*ಕಾಳುಮೆಣಸಿನ ಪುಡಿ - ಅರ್ಧ ಚಿಕ್ಕಚಮಚ
*ಕೆಂಪು ಮೆಣಸಿನ ಪುಡಿ - ಒಂದು ಚಿಟಿಕೆ

ವಿಧಾನ:
1)ಒಂದು ಬೋಗುಣಿಯಲ್ಲಿ ಎಲ್ಲಾ ಒಣ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
2)ಇನ್ನೊಂದು ಪಾತ್ರೆಯಲ್ಲಿ ಟೊಮೇಟೊ, ಸೌತೆ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು ಹಾಕಿ ಕಲಕಿ ಒಂದು ಬದಿಗಿಡಿ
3)ಕಾವಲಿಗೆ ಎಣ್ಣೆ ಸವರಿ ಚಿಕ್ಕ ಉರಿಯಲ್ಲಿ ಹಪ್ಪಳವನ್ನು ಎರಡೂ ಬದಿಗಳಿಗೆ ಕೊಂಚವೇ ಕಂದು ಗುಳ್ಳೆಗಳು ಏಳುವಷ್ಟು ಹುರುಯಿರಿ.
4)ಹುರಿದ ಹಪ್ಪಳವನ್ನು ಒಂದು ಅಗಲವಾದ ತಟ್ಟೆಯಲ್ಲಿಟ್ಟು ಹಸಿ ತರಕಾರಿಯ ಮಿಶ್ರಣವನ್ನು ಒಂದು ಪದರದ ರೂಪದಲ್ಲಿ ಹರಡಿ.
5)ಇದರ ಮೇಲೆ ಒಣ ಮಿಶ್ರಣವನ್ನು ಹರಡಿ.
6)ಇದರ ಮೇಲೆ ಲಿಂಬೆ ರಸವನ್ನು ಚಿಮುಕಿಸಿ. ಬಿಸಿಯಿದ್ದಂತೆಯೇ ಹಪ್ಪಳವನ್ನು ತುಂಡು ಮಾಡಿ ಅಕ್ಕಪಕ್ಕ ವಾಲಿಸದೇ ನೇರವಾಗಿ ಬಾಯಿಗೆ ಹಾಕಿಕೊಳ್ಳಿ.

ಸಲಹೆ:
*ಇದರ ಹಸಿ ತರಕಾರಿ ಮತ್ತು ಇತರ ಮಸಾಲೆ ವಸ್ತುಗಳಿಂದಾಗಿ ಇದೊಂದು ಪೌಷ್ಟಿಕ ಮತ್ತು ಆರೋಗ್ಯಕರವಾದ ಆಹಾರವಾಗಿದ್ದು ಎಲ್ಲರಿಗೂ ಸೂಕ್ತವಾಗಿದೆ. ತೂಕ ಇಳಿಸುವವರಿಗೂ ಹೇಳಿ ಮಾಡಿಸಿದ್ದಾಗಿದೆ.
* ಟೋಮೆಟೊಗಳನ್ನು ಕತ್ತರಿಸುವಾಗ ಬೀಜಗಳನ್ನು ನಿವಾರಿಸಿ. ಇದು ಹಪ್ಪಳ ಗರಿಗರಿಯಾಗಿರಲು ನೆರವಾಗುತ್ತದೆ.
* ಸಾಕಷ್ಟು ದಪ್ಪನೆಯ ಮತ್ತು ಅಗಲವಾದ ಹಪ್ಪಳವನ್ನೇ ಆರಿಸಿ. ಲಿಜ್ಜತ್ ಪಾಪಡ್ ಉತ್ತಮ ಆಯ್ಕೆ. ಚಿಕ್ಕ ಉದ್ದಿನ ಹಪ್ಪಳ ಸೂಕ್ತವಲ್ಲ.
*ಈ ವಿಧಾನವನ್ನು ಮನೆಯಲ್ಲಿ ತಯಾರಿಸಿದ ಸಂಡಿಗೆಗೂ ಅಳವಡಿಸಬಹುದು.

English summary

Masala Papad Recipe

A crispy masala papad topped with deliciously tangy spicy salad makes a very refreshing appetiser. Today we are here to share the recipe of masala papad. Masala Papad has a tangy twist. It is filled with different flavors and is very tempting. This masala papad recipe is very simple and easy to make. Check our tasty recipe of masala papad here..
X
Desktop Bottom Promotion