Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಊಟದ ರುಚಿ ಹೆಚ್ಚಿಸುವ ಆಲೂ ರಾಯತ
Palya
oi-Staff
By * ನಿವೇದಿತಾ ಪ್ರಭಾಕರ್, ಬೆಂಗಳೂರು

ಬಿಸಿಬಿಸಿ ತುಪ್ಪ ಅನ್ನದೊಡನೆ ಕಲಿಸಿ ತಿನ್ನಬಹುದಾದ ಆಲೂ ರಾಯತ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.
ಬೇಕಾದ ಪದಾರ್ಥಗಳು
ಆಲೂಗಡ್ಡೆ ಎರಡು
ಮೊಸರು ಎರಡು ಬಟ್ಟಲು
ಕೊತ್ತಂಬರಿ
ಒಗ್ಗರಣೆಗೆ ನಾಲ್ಕು ಚಮಚ ಎಣ್ಣೆ, ಹಸಿಮೆಣಸಿನಕಾಯಿ, ಜೀರಿಗೆ, ಐದು ಎಸಳು ಕರಿಬೇವು, ಇಂಗು
ರುಚಿಗೆ ಉಪ್ಪು
ತಯಾರಿಸುವ ವಿಧಾನ
ಆಲೂಗಡ್ಡೆಯನ್ನು ಕುಕ್ಕರಿನಲ್ಲಿಟ್ಟು ಚೆನ್ನಾಗಿ ಬೇಯಿಸಿಕೊಳ್ಳಿ. ಸ್ವಲ್ಪ ಆರಿದ ನಂತರ ಅದರ ಸಿಪ್ಪೆಯನ್ನು ಸುಲಿದು ಪುಡಿಪುಡಿ ಮಾಡಿಟ್ಟುಕೊಳ್ಳಿ. ಪೂರ್ತಿ ಆರಲು ಒಂದು ತಟ್ಟೆಯಲ್ಲಿ ಹರಿವಿಡಿ. ಅದಕ್ಕೆ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಒಗ್ಗರಣೆಯನ್ನು ತಯಾರಿಸಿ ಆಲೂ ಮೊಸರಿನ ಮಿಶ್ರಣದ ಮೇಲೆ ಹಾಕಿ ಮತ್ತೊಮ್ಮೆ ಕೈಯಾಡಿಸಿ.
ಅಷ್ಟೇ ಆಲೂ ರಾಯತ ತಯಾರ್. ಮೇಲೆ ತಿಳಿಸಿದಂತೆ ಬಿಸಿಬಿಸಿ ಅನ್ನಕ್ಕೆ ಎರಡು ಚಮಚ ತುಪ್ಪ ಸುರಿದು ಸಾರು ಅನ್ನ ಉಣ್ಣುವ ಮೊದಲು ಆಲೂ ರಾಯತದಿಂದ ಕಲಿಸಿ ಹೊಟ್ಟೆಗಿಳಿಸಿ ನೋಡಿ. ಜೊತೆಗೊಂದಿಷ್ಟು ಮಾವಿನಕಾಯಿ ಉಪ್ಪಿನಕಾಯಿ ಇದ್ದರಂತೂ ಕೇಳುವುದೇ ಬೇಡ.
Comments
Read more about: ಆಲೂ ರಾಯತ ಹೊಸರುಚಿ ನಿವೇದಿತಾ ಕರ್ನಾಟಕದ ಅಡುಗೆ ಮೊಸರು ಊಟಕ್ಕೆ ಮೊದಲು ಉಪ್ಪಿನಕಾಯಿ ಸೈಡ್ ಡಿಶ್ aloo raita curd pickle side dish karnataka kitchen niveditha prabhakar
Story first published: Saturday, December 19, 2009, 17:51 [IST]
Other articles published on Dec 19, 2009



Click it and Unblock the Notifications
