For Quick Alerts
ALLOW NOTIFICATIONS  
For Daily Alerts

ವಿಜಯದಶಮಿಗೆ ಜೋಳದ ಉಸುಳಿ ಸ್ಪೆಷಲ್

By Staff
|

ನವರಾತ್ರಿಗೆ ಕೋಸಂಬರಿ ಮಾಡೋದು ರೂಢಿ. ಆದರೆ ಬದಲಾವಣೆ ಬಯಸುವವರು ಈ ಬಾರಿ ಉತ್ತರ ಭಾರತದ ಸ್ಪೆಷಲ್ ಜೋಳದ ಉಸುಳಿಯನ್ನು ಮಾಡಬಹುದು. ಈ ಬಾರಿ ಹಬ್ಬದ ಅಡುಗೆ ವೈವಿಧ್ಯತೆಯಿಂದ ಕೂಡಿರಬೇಕೆನ್ನುವವರು ಜೋಳದ ಉಸುಳಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಜೋಳದ ಉಸುಳಿ ಮಾಡೋದಕ್ಕೆ ಇಷ್ಟು ರೆಡಿಯಿರಲಿ: 2-3 ಕಪ್ ಜೋಳದ ಕಾಳು (ಸ್ವಲ್ಪ ಉಪ್ಪಿನೊಂದಿಗೆ ಬೇಯಿಸಿರಬೇಕು), ಜೇನು (ಬೇಕಿದ್ದರೆ), ದ್ರಾಕ್ಷಿ ಅಥವಾ ಬೀಜವಿಲ್ಲದ ಕರ್ಜೂರ ಅಥವಾ ಒಂದು ಚಮಚ ಸಕ್ಕರೆ, ತುರಿದ ಕ್ಯಾರೆಟ್, ಕತ್ತರಿಸಿದ ಟೊಮೆಟೊ, ಈರುಳ್ಳಿ ಮತ್ತು ಕೊತ್ತಂಬರಿ, ನಿಂಬೆರಸ.

ಜೋಳದ ಉಸುಳಿ ಹೀಗೆ ಮಾಡಬೇಕು: ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ 5-10 ನಿಮಿಷ ಬಿಟ್ಟರೆ ಜೋಳದ ಉಸುಳಿ ಸುಲಭವಾಗಿ ರೆಡಿಯಾಗಿರುತ್ತೆ. ಹಬ್ಬದ ಸಂದರ್ಭದಲ್ಲಿ ರುಚಿಕಟ್ಟಾದ ಈ ಜೋಳದ ಉಸುಳಿಯನ್ನು ಸಮಯ ವ್ಯಯಿಸದೆ ಬೇಗ ಮಾಡಿ ಮುಗಿಸಬಹುದು.

English summary

Sweet Corn Recipe | Corn Sundal for Navratri | ಜೋಳದ ಉಸುಳಿ ರೆಸಿಪಿ | ನವರಾತ್ರಿಗೆ ಜೋಳದ ಉಸುಳಿ ಸ್ಪೆಷಲ್

For Vijayadashami, generally the south indians prepare kosambari (very similar to sundal) but for a change they can taste the north indian sweet corn sundal recipe prepared for navratri fast. Take a look to know how to go about with the nutritious navratri recipe.
X
Desktop Bottom Promotion