Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಮಸಾಲೆ ದೋಸೆಗಾಗಿ ಆಲೂಗಡ್ಡೆ ಪಲ್ಯ

* ನಾಗು ಶಂಕರ್
ಬೇಕಾಗುವ ಪದಾರ್ಥಗಳು
ಸಿಪ್ಪೆ ತೆಗೆದು ಬೇಯಿಸಿದ 3 ಬಿಳಿ ಆಲೂಗಡ್ಡೆ, ಉದ್ದುದ್ದ ಕೊಯ್ದ ಎರಡು ಈರುಳ್ಳಿ, ಉದ್ದುದ್ದ ಹೆಚ್ಚಿದ 5 ಹಸಿ ಮೆಣಸಿನಕಾಯಿ, 1 ಟೀ ಚಮಚದಷ್ಟು ಶುಂಠಿ, , 1 ಟೀ ಚಮಚ ಕೊತ್ತಂಬರಿ ಬೀಜದ ಪುಡಿ, 1 ಟೀ ಚಮಚ ಸಾಸಿವೆ, 1 ಟೀ ಚಮಚ ಬಿಳಿ ಉದ್ದಿನ ಬೇಳೆ, 1 ಟೀ ಚಮಚ ಚೆನ್ನ ದಾಲ್, 8 ಬಿಡಿಸಿದ ಗೋಡಂಬಿ, 2 ಟೇಬಲ್ ಚಮಚ ಎಣ್ಣೆ, ಅರ್ಧ ಟೀ ಚಮಚ ಅರಿಶಿನ, 1 ಟೇಬಲ್ ಚಮಚ ಲಿಂಬೆ ರಸ, 2 ಟೀ ಚಮಚ ಉಪ್ಪು.
ಪಲ್ಯ ಮಾಡುವ ವಿಧಾನ
ಆಲೂಗಡ್ಡೆಯನ್ನು 20 ನಿಮಿಷ ಚೆನ್ನಾಗಿ ಬೇಯಿಸಿ. ಎಣ್ಣೆಯನ್ನು ನಾನ್‌ಸ್ಟಿಕ್ ಬಾಣಲೆಯಲ್ಲಿಟ್ಟು ಮಧ್ಯಮ ಉರಿಯಲ್ಲಿ ಕಾಯಿಸಿ. ಗೋಡಂಬಿಯನ್ನು ಹಾಕಿ, ಕಂದು ಬಣ್ಣಕ್ಕೆ ಬರುವಂತೆ ಬಾಡಿಸಿ. ಸಾಸಿವೆ ಮತ್ತು ಬೇಳೆಗಳನ್ನು ಹಾಕಿ. ಸಾಸಿವೆ ಚಿಟಿಗುಟ್ಟಲಿ. ಐದೆಂಟು ಸೆಕೆಂಡುಗಳ ನಂತರ ಒಲೆಯ ಉರಿಯನ್ನು ಕಡಿಮೆ ಮಾಡಿ. ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಈರುಳ್ಳಿಯನ್ನು ಬಾಣಲೆಗೆ ಹಾಕಿ. ಸ್ವಲ್ಪ ಹೊತ್ತು ಹುರಿದಂತೆ ಮಾಡಿ. ಅರಿಶಿನ, ಧನಿಯಾ ಪುಡಿ ಹಾಗೂ ಉಪ್ಪನ್ನು ಹಾಕಿ.
ಇದಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ ಅಥವಾ ಪುಡಿ ಮಾಡಿ ಸೇರಿಸಿ. ಚಿನ್ನಗಂದು ಬಣ್ಣ ಬರುವವರೆಗೆ ಕೈಯಾಡಿಸಿ. ಇದಕ್ಕೆ 12ರಿಂದ 15 ನಿಮಿಷ ಬೇಕಾಗಬಹುದು. ಆಮೇಲೆ ಲಿಂಬೆರಸ ಹಾಕಿ. ಮೂರ್ನಾಲ್ಕು ಚಮಚ ನೀರು ಹಾಕಿ. ನೀರು ಆವಿಯಾಗುವವರೆಗೆ ಹುರಿಯುವುದನ್ನು ಮುಂದುವರೆಸಿ.
ಆಲೂಗಡ್ಡೆ ಪಲ್ಯಕ್ಕೆ ಬೇಕಿದ್ದರೆ ಹುರಿಯುವಾಗಲೇ ತುರಿದ ಹಸಿಕೊಬ್ಬರಿ ಹಾಕಬಹುದು. ರುಚಿಯೂ ದುಪ್ಪಟ್ಟಾಗುತ್ತದೆ. ಹೀಗೆ ತಯಾರಾದ ಪಲ್ಯವನ್ನು ಕಾವಲಿ ಮೇಲಿಟ್ಟ ಸಾದಾ ದೋಸೆಯ ಮಧ್ಯಭಾಗದಲ್ಲಿ ಹಾಕಿ. ದೋಸೆಯನ್ನು ಮಡಿಸಿ. ಮಸಾಲೆ ದೋಸೆ ರೆಡಿ.
ವಿ.ಸೂ. : ಈ ರೆಸಿಪಿ ಎಂದೂ ಆಲೂಗಡ್ಡೆ ಪಲ್ಯ ಮಾಡಿರದ ಅಥವಾ ಸರಿಯಾಗಿ ಮಾಡಲು ಬಾರದ ಬಾಣಸಿಗರಿಗೆ ಮಾತ್ರ.



Click it and Unblock the Notifications
