Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕರಿಬೇವು ಸೊಪ್ಪಿನ ಚಟ್ನಿಪುಡಿ.. ಆಹಾ!

* ಕರುಣಾ, ಮಣಿಪಾಲ.
ಬೇಕಾಗುವ ಪದಾರ್ಥಗಳು
ಬಲಿತ ಕರಿಬೇವಿನ ಸೊಪ್ಪು - 3 ಹಿಡಿ
ಉದ್ದಿನಬೇಳೆ - 150 ಗ್ರಾಂ
ಕಡಲೆಬೇಳೆ - 200 ಗ್ರಾಂ
ಒಣ ಕೊಬ್ಬರಿ - 150 ಗ್ರಾಂ
ಒಣಮೆಣಸಿನಕಾಯಿ - 75 ಗ್ರಾಂ
ತುಪ್ಪ - 2 ಟೀ ಚಮಚ
ಉಪ್ಪು - ರುಚಿಗೆ ಸಮನಾದಷ್ಟು
ಇಂಗು - ಚಿಟಿಕೆ
ಹುಣಿಸೇಹಣ್ಣು - ಎರಡು ತೊಲೆ
ಬೆಲ್ಲ - ಸಣ್ಣ ಉಂಡೆ ಗಾತ್ರದ್ದು
ವಿಧಾನ : ಒಳ್ಳೆ ಗರಿಗರಿ ಬ್ಯಾಡಗಿ ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆಯನ್ನು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಚೆನ್ನಾಗಿ ಬಲಿತ ಕರಿಬೇವಿನ ಸೊಪ್ಪನ್ನು ತೊಳೆದು ಒಣಗಿಸಿದ ನಂತರ ಕಾದ ತವಕ್ಕೆ ತುಪ್ಪ ಹಾಕಿ ಸೊಪ್ಪನ್ನು ಸುರಿದು ಬಾಡಿಸಿಬೇಕು. ಸೊಪ್ಪು ಸೀಯಬಾರದು ಎಚ್ಚರ. ಆನಂತರ ಇವಿಷ್ಟಕ್ಕೂ ಹುಣಿಸೇಹಣ್ಣು, ಉಪ್ಪು, ಒಣ ಕೊಬ್ಬರಿ ತುರಿ, ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಪುಡಿಪುಡಿ ಮಾಡಬೇಕು. ಪುಡಿ ತೀರಾ ನುಣ್ಣಗೆ ಆಗಬಾರದು. ಸ್ಪಲ್ಪ ತರಿತರಿ ಇರಲಿ.
ಆಮೇಲೆ, ಪ್ರತ್ಯೇಕವಾಗಿ ತುಪ್ಪ ಸಾಸಿವೆ ಬ್ಯಾಡಗಿ ಮೆಣಸಿನಕಾಯಿ ಒಗ್ಗರಣೆ ಮಾಡಿಕೊಂಡು ಪುಡಿಗೆ ಬೆರೆಸಿರಿ. ಶ್ರದ್ಧೆಯಿಂದಲೂ, ಒಳ್ಳೆ ಪದಾರ್ಥಗಳಿಂದಲೂ ತಯಾರಿಸಿದ ಕರಿಬೇವಿನ ಚಟ್ನಿಪುಡಿ ಊಟದ ಜತೆ, ತಿಂಡಿಯ ಜತೆ ನೆಂಚಲು ಚೆನ್ನಾಗಿರತ್ತೆ ಮಾತ್ರವಲ್ಲ, ನಾಲಗೆ ಕೆಟ್ಟಿದೆ ಎನ್ನುವವರು ಒಂದು ಚಮಚ ಹಾಗೆ ಬಾಯಿಗೆ ಹಾಕಿಕೊಂಡರೆ ನವನವೋನ್ಮೇಷಶಾಲಿನಿ ಆಗಿರುತ್ತದೆ.



Click it and Unblock the Notifications
