Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕ್ಕೆ ಪುಷ್ಠಿ ನೀಡುವ ಪಾಲಕ್ ಪಲ್ಯ..! ಮಾಡುವ ವಿಧಾನ ಇಲ್ಲಿದೆ..!
ನಿತ್ಯವೂ ಹೊಸ ಹೊಸ ಖಾದ್ಯಗಳ ಸೇವಿಸುವುದು ಹಲವರ ಅಭ್ಯಾಸವಾಗಿರುತ್ತದೆ. ಅದರಲ್ಲೂ ಆರೋಗ್ಯಕರ ರೆಸಿಪಿಗಳ ಮಾಡುವುದು ಅತ್ಯುತ್ತಮ ಆರೋಗ್ಯಕರ ಅಂಶವಾಗಿದೆ. ಅದರಲ್ಲೂ ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಸೊಪ್ಪು ತರಕಾರಿ ಸೇವನೆ ಬಹಳ ಮುಖ್ಯ. ಹಾಗೆ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಹಲವು ರೀತಿಯ ಆರೋಗ್ಯಕರ ಅಂಶಗಳಿಂದ ಕೂಡಿದೆ.
ಪಾಲಕ್‌ನಲ್ಲಿ ಪ್ರತಿ 100ಗ್ರಾಮ್‌ಗೆ ಬರೋಬ್ಬರಿ 23ರಷ್ಟು ಕ್ಯಾಲೋರಿ ಸಿಗಲಿದೆ. ಜೊತೆಗೆ 2.6 ಗ್ರಾಮ್ ಪ್ರೋಟೀನ್ ಸಹ ಸಿಗಲಿದೆ. ಹೀಗಾಗಿ ಇದೊಂದು ಪೋಷಕಾಂಶ ಭರಿತ ನೆಚ್ಚಿನ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅಲ್ಲದೆ ಪಾಲಕ್‌ನಿಂದ ಮಾಡಲಾದ ಖಾದ್ಯಗಳು ಹೆಚ್ಚು ಬೆಲೆಯನ್ನೂ ಹೊಂದಿರುತ್ತವೆ.

ಹಾಗಾದರೆ ನಾವಿಂದು ಇಂತಹ ಆರೋಗ್ಯಕರ ಗುಣಗಳ ಹೊಂದಿರುವ ಪಾಲಕ್‌ನಿಂದ ಮಾಡಬಹುದಾದ ಪಲ್ಯದ ರೆಸಿಪಿ ಬಗ್ಗೆ ತಿಳಿದುಕೊಳ್ಳೋಣ. ಪಾಲಕ್ ಪಲ್ಯ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳ ಅಗತ್ಯವಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗಾದರೆ ಇನ್ನೇಕೆ ತಡ? ಬನ್ನಿ ಪಾಲಕ್ ಸೊಪ್ಪಿನ ಪಲ್ಯ ಮಾಡುವ ವಿಧಾನವನ್ನು ಪ್ರಯತ್ನಿಸಿ.
ಬೇಕಾಗುವ ಸಾಮಗ್ರಿಗಳು
- ಪಾಲಕ್ ಸೊಪ್ಪು ಒಂದು ಅಥವಾ ಎರಡು ಕಟ್ಟು,
- ಈರುಳ್ಳಿ - 1 (ಕತ್ತರಿಸಿಕೊಳ್ಳಿ)
- ಟೊಮೆಟೊ- 1 (ಕತ್ತರಿಸಿಕೊಳ್ಳಿ)
- ಹಸಿಮೆಣಸಿನಕಾಯಿ - 1 (ಕತ್ತರಿಸಲಾಗಿರುವ)
- ರಸಂ ಪುಡಿ - ಸ್ವಲ್ಪ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ- ಸ್ವಲ್ಪ
- ಜೀರಿಗೆ - 1 ಸ್ಪೂನ್
- ಸಾಸಿವೆ- 1 ಸ್ಪೂನ್ (ಒಗ್ಗರಣೆಗೆ)
- ಕೊತ್ತೊಂಬರಿ ಸೊಪ್ಪು- ಸ್ವಲ್ಪ (ಕತ್ತರಿಸಲಾಗಿರುವ)
ಮಕ್ಕಳ ವಿಶೇಷ ರೆಸಿಪಿ ಆಲೂ ಪೂರಿ!
ಮಾಡುವ ವಿಧಾನ:
1.ಪಾಲಕ್ ಚೆನ್ನಾಗಿ ಶುಚಿಗೊಳಿಸಿ,ತೊಳೆದು ನಂತರ ಸಣ್ಣಗೆ ಹೆಚ್ಚಿಕೊಳ್ಳಿ
2 ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಸಾಸಿವೆ ಹಾಕಿ, ಇನ್ನು ಕತ್ತರಿಸಲಾಗಿರುವ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ
3. ತದನಂತರ ಕತ್ತರಿಸಲಾಗಿರುವ ಟೊಮೆಟೊವನ್ನು ಹಾಕಿ, 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಇನ್ನು ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಅದರಲ್ಲಿಯೇ ಬೆರೆಸಿ,
4. ಇನ್ನು ರುಚಿಗೆ ತಕ್ಕಷ್ಟು ಉಪ್ಪು, ಕತ್ತರಿಸಿರುವ ಹಸಿಮೆಣಸಿನಕಾಯಿ ಮತ್ತು ರಸಂ ಪುಡಿಯನ್ನು ಹಾಕಿ, ನಂತರ ಅರ್ಧ ಗ್ಲಾಸ್ ನೀರು ಹಾಕಿ 5 ನಿಮಿಷ ಮುಚ್ಚಿಡಿ, ಬಾಣಲೆಗೆ ಪಾತ್ರೆಯಿಂದ ಮುಚ್ಚಿದಾಗ, ಅದು ಆವಿಯಲ್ಲಿಯೇ ಬೇಯುತ್ತದೆ.
5. ನಂತರ ಕತ್ತರಿಸಲಾಗಿರುವ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ, ರುಚಿ ರುಚಿಯಾದ ಪಾಲಕ್ ಸೊಪ್ಪಿನ ಪಲ್ಯ ಸವಿಯಲು ರೆಡಿಯಾಗಿದೆ.

ಪಾಲಕ್ ಸೇವನೆಯಿಂದ ಮುಖ್ಯವಾಗಿ ಮೂರು ಅಂಶಗಳು ನಮ್ಮ ದೇಹ ಸೇರುತ್ತವೆ.
ಕ್ಯಾಲ್ಸಿಯಂ
ಹಸಿರು ಪಾಲಕ್ ಎಲೆಗಳಲ್ಲಿ ಪ್ರತಿ ಕಪ್‌ಗೆ 250 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಇದು ನಿಮ್ಮ ಹಲ್ಲುಗಳನ್ನು ಒಳಗೊಂಡಂತೆ ನಿಮ್ಮ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಮೆಗ್ನೀಸಿಯಮ್
ಮೆಗ್ನೀಸಿಯಮ್ ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ, ನಿಮ್ಮ ಹೃದಯದ ಲಯವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳುತ್ತದೆ. ಹೀಗಾಗಿ, ಪಾಲಕ್‌ನಲ್ಲಿ ಮೆಗ್ನೀಸಿಯಮ್‌ನ ಸಮೃದ್ಧ ಮೂಲವನ್ನು ಹೊಂದಿದ್ದು ಅದು ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
ಕಬ್ಬಿಣ
ದೇಹದ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಲು ನಿಮ್ಮ ದೇಹಕ್ಕೆ ಕಬ್ಬಿಣಾಂಶ ಬೇಕು. ಕಬ್ಬಿಣದ ಅಂಶದಿಂದ ಉತ್ತಮವಾದದನ್ನು ಪಡೆಯಲು, ನೀವು ಸಿಟ್ರಸ್ ಹಣ್ಣುಗಳಂತಹ ಕೆಲವು ವಿಟಮಿನ್ ಸಿ ಆಹಾರಗಳನ್ನು ಪಾಲಕ್ ಜೊತೆ ಸೇರಿಸಬಹುದು ಮತ್ತು ಕಬ್ಬಿಣದ ಅಂಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ.



Click it and Unblock the Notifications