Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾಲಾಕ್ ಸೊಪ್ಪಿನ ಪಲ್ಯ ರೆಸಿಪಿ: ಗರ್ಭಿಣಿಯರಿಗೆ ತುಂಬಾನೇ ಒಳ್ಳೆಯದು
ಗರ್ಭವತಿಯಾಗಿದ್ದೇವೆ ಎಂದು ತಿಳಿದ ತಕ್ಷಣ ಮಹಿಳೆಯರನ್ನು ಕಾಡುವ ಮೊದಲ ಪ್ರಶ್ನೆಯೇ ನಾವು ಯಾವ ಆಹಾರ ಸೇವಿಸಿದರೆ ಗರ್ಭದಲ್ಲಿರುವ ತನ್ನ ಕಂದಮ್ಮನಿಗೆ ಒಳ್ಳೆಯದು ಎಂದು. ವೈದ್ಯರು ಕೂಡ ಗರ್ಭಿಣಿಯರಿಗೆ ಸಾಕಷ್ಟು ಹಸಿರು ತರಕಾರಿಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.
ಅದರಲ್ಲೂ ಗರ್ಭವತಿಯಾದ ಸಂದರ್ಭದಲ್ಲಿ ಪಾಲಾಕ್ ಸೊಪ್ಪನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.

ಗರ್ಭಿಣಿಯರಿಗೆ ಪಾಲಕ್ ಸೇವನೆಯಿಂದ ಲಾಭ :
ಪಾಲಕ್ ಸೊಪ್ಪು ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ಹೀಗಾಗಿ ಮೊದಲ
ತ್ರೈಮಾಸಿಕದಿಂದಲೇ ಗರ್ಭಿಣಿಯರು ಪಾಲಕ್ ಸೊಪ್ಪನ್ನು ಸೇವನೆ ಮಾಡಬಹುದು. ಪಾಲಕ್
ಸೊಪ್ಪಿನಲ್ಲಿ ಇರುವ ನೈಟ್ರೇಟ್ ಅಂಶವು ಗರ್ಭಿಣಿಯರಲ್ಲಿ ರಕ್ತದೊತ್ತಡವನ್ನು
ನಿಯಂತ್ರಿಸುವ ಕಾರ್ಯವನ್ನು ಮಾಡುತ್ತದೆ. ಅಲ್ಲದೇ ಸಾಕಷ್ಟು ಮಹಿಳೆಯರು
ಗರ್ಭವತಿಯಾದ ಸಂದರ್ಭದಲ್ಲಿ ಮಲಬದ್ಧತೆಯಿಂದ ಬಳಲುತ್ತಾರೆ. ಇಂಥಹ ಸಂದರ್ಭದಲ್ಲಿ
ಪಾಲಕ್ ಸೊಪ್ಪು ಸೇವನೆಯಿಂದ ಮಲಬದ್ಧತೆ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ಗರ್ಭಿಣಿಯಾದ ಸಂದರ್ಭದಲ್ಲಿ ಸಮನಾದ ತೂಕವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಪಾಲಕ್ ಸೊಪ್ಪು ಇದಕ್ಕೆ ಪೂರಕವಾಗಿದೆ.
ಪಾಲಕ್ ಸೊಪ್ಪು ಕಬ್ಬಿಣಾಂಶದ ಜೊತೆಯಲ್ಲಿ ಮೆಗ್ನಿಷಿಯಂ ಅಂಶವನ್ನೂ ಹೊಂದಿದ್ದು
ಇದು ಕೂಡ ಮಗುವಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮೊದಲ ತ್ರೈಮಾಸಿಕದಲ್ಲಿ ವೈದ್ಯರು ಫಾಲಿಕ್ ಅಂಶ ಹೆಚ್ಚಿರುವ ಆಹಾರ ಸೇವನೆಗೆ ಸಲಹೆ
ನೀಡುತ್ತಾರೆ. ಫಾಲಿಕ್ ಆಮ್ಲವು ಮಹಿಳೆಯರಲ್ಲಿ ಕಿರಿಕಿರಿ ಭಾವವನ್ನು ಕಡಿಮೆ
ಮಾಡುತ್ತದೆ ಎನ್ನಲಾಗಿದೆ. ಪಾಲಕ್ ಸೊಪ್ಪು ಈ ಆಮ್ಲವನ್ನು ಹೊಂದಿದ್ದು
ಗರ್ಭಿಣಿಯರಿಗೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
ಗರ್ಭಿಣಿಯಾದ ಐದನೇ ವಾರದಿಂದ ಗರ್ಭದಲ್ಲಿ ಮಗುವಿನ ಶ್ವಾಸಕೋಶಗಳ ಬೆಳವಣಿಗೆ
ಅರಂಭವಾಗುತ್ತಾ ಹೋಗುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಬೆಟಾ ಕ್ಯಾರೊಟಿನ್ ಎಂಬ
ಅಂಶವು ಮಗುವಿನಲ್ಲಿ ಶ್ವಾಸಕೋಶದ ಆರೋಗ್ಯಕರ ಬೆಳವಣಿಗೆಗೆ ಕೊಡುಗೆ
ನೀಡುತ್ತದೆ.
ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪಾಲಕ್ ಸೊಪ್ಪಿನ ಸಿಂಪಲ್ ಪಲ್ಯ ತಯಾರಿಸುವುದು ಹೇಗೆ ನೋಡೋಣ :
ಬೇಕಾಗುವ ಸಾಮಗ್ರಿಗಳು : ಸಣ್ಣಗೆ ಕತ್ತರಿಸಿದ ಪಾಲಕ್ ಸೊಪ್ಪು : 3 ಕಪ್, ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ 1, ಸಾಸಿವೆ 1/4 ಚಮಚ, ಜೀರಿಗೆ 1/2 ಚಮಚ, ಅರಿಶಿಣ ಒಂದು ಚಿಟಿಕೆ, ಅಡುಗೆ ಎಣ್ಣೆ 1 ಚಮಚ, ಹಸಿ ಮೆಣಸಿನಕಾಯಿ 1, ಕೊತ್ತಂಬರಿ ಸೊಪ್ಪು 1/4 ಕಪ್, ಬೇವಿನಸೊಪ್ಪು 1 ಎಸಳು, ಕಾಯಿ ತುರಿ 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮೊದಲು ಕತ್ತರಿಸಿದ ಪಾಲಾಕ್ ಸೊಪ್ಪನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಉಪ್ಪನ್ನು ಸೇರಿಸಿ ಮಣ್ಣಿನ ಅಂಶ ಸಂಪೂರ್ಣವಾಗಿ ಹೋಗುವವರೆಗೂ ತೊಳೆದು ಇಟ್ಟುಕೊಳ್ಳಿ. ಒಂದು ಬಾಣಲೆ ತೆಗೆದುಕೊಂಡು ಇದಕ್ಕೆ ಅಡುಗೆ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ ಹಾಗೂ ಜೀರಿಗೆಯನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಹಾಗೂ ಅರಿಶಿಣವನ್ನು ಹಾಕಿ ಈರುಳ್ಳಿ ಹೊಂಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.
ಈಗ ಬೇವಿನಸೊಪ್ಪು ಹಾಗೂ ಮೆಣಸಿನಕಾಯಿಯನ್ನು ಹಾಕಿ ಕೆಲ ಕಾಲ ಹುರಿದುಕೊಳ್ಳಿ. ಈಗ ತೊಳೆದು ಇಟ್ಟುಕೊಂಡ ಪಾಲಕ್ ಸೊಪ್ಪನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಮುಚ್ಚಳ ಮುಚ್ಚಿ. ಪಾಲಕ್ನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ನೀರಿನಂಶ ಆವಿಯಾಗುತ್ತಿದ್ದಂತೆಯೇ ಕಾಯಿ ತುರಿಯನ್ನು ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಗರ್ಭಿಣಿಯರಿಗೆ ಸವಿಯಲು ನೀಡಿ .



Click it and Unblock the Notifications