Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಬಟರ್ ಚಿಕನ್‌ನಷ್ಟೇ ಟೇಸ್ಟಿ ಈ ಪಾಲಾಕ್ ಚಿಕನ್
ಚಿಕನ್ ಸಾರು ಪಾಲಾಕ್ ಹಾಕಿ ಮಾಡಿದ್ದೀರಾ? ಇಲ್ಲ ಅಂದ್ರೆ ನೀವೊಮ್ಮೆ ಟ್ರೈ ಮಾಡಿ ನೋಡಿ, ಖಂಡಿತ ಆ ಟೇಸ್ಟ್ ತುಂಬಾನೇ ಇಷ್ಟವಾಗುವುದು.
ಇದರ ರೆಸಿಪಿ ತುಂಬಾ ಸರಳವಾಗಿದೆ.

ಅಲ್ಲದೆ ಚಿಕನ್ ತಿಂದ್ರೆ ಕೆಲವರಿಗೆ ಹೀಟ್ ಆಗುತ್ತೆ, ಅದೇ ಸಾರಿಗೆ ಪಾಲಾಕ್ ಮತ್ತು ಮೊಸರು ಸೇರಿಸಿದರೆ ಹೀಟ್ ಕೂಡ ಬ್ಯಾಲೆನ್ಸ್ ಮಾಡಬಹದು. ಇನ್ನು ನಿಮಗೆ ಈ ಪಾಲಾಕ್ ಚಿಕನ್ ಬಟರ್ ಚಿಕನ್‌ನಷ್ಟೇ ರುಚಿಕರವಾಗಿರುತ್ತೆ. ಬನ್ನಿ ಇದನ್ನು ಮಾಡುವ ವಿಧಾನ ನೋಡೋಣ:
Recipe By: Reena TK
Recipe Type: Curry
Serves: 6
-
ಬೇಕಾಗುವ ಸಾಮಗ್ರಿ
ಚಿಕನ್ 1 ಕೆಜಿ
1 ಚಿಕ್ಕ ಕಟ್ಟು ಪಾಲಾಕ್ ಸೊಪ್ಪು
ಈರುಳ್ಳಿ 1+1
ಹಸಿ ಮೆಣಸು 2
ಟೊಮೆಟೊ2+1
ಬೆಳ್ಳುಳ್ಳಿ 5-6 ಎಸಳು
ಸ್ವಲ್ಪ ಶುಂಠಿ
2 ಲವಂಗ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
1/2 ಚಮಚ ಅರಿಶಿಣ ಪುಡಿ
3 ಚಮಚ ಕೊತ್ತಂಬರಿ ಪುಡಿ
1/4 ಚಮಚ ಗರಂ ಮಸಾಲ
ಒಂದೂವರೆ ಚಮಚ ಖಾರದ ಪುಡಿ
ರುಚಿಗೆ ತಕ್ಕ ಉಪ್ಪು
2 ಚಮಚ (1+1)
1/2 ಚಮಚ ಸಾಸಿವೆ
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಿದ್ದರೆ)
-
ಮಾಡುವ ವಿಧಾನ
* ಮೊದಲಿಗೆ ಚಿಕನ್ ಅನ್ನು ಸ್ವಚ್ಛವಾಗಿ ತೊಳೆದಿಕೊಳ್ಳಿ. ಪಾಲಾಕ್ ಸ್ವಚ್ಛ ಮಾಡಿಟ್ಟುಕೊಳ್ಳಿ.
* 2 ಟೊಮೆಟೊ, 1 ಈರುಳ್ಳಿ, ಹಸಿ ಮೆಣಸು ಕತ್ತರಿಸಿಟ್ಟುಕೊಳ್ಳಿ.
* ಈಗ ಪ್ಯಾನ್‌ಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ, ಟೊಮೆಟೊ , ಸ್ವಚ್ಛ ಮಾಡಿಟ್ಟ ಪಾಲಾಕ್ ಸೊಪ್ಪು ಹಾಕಿ ಸೌಟ್‌ನಿಂದ 3-4 ನಿಮಿಷ ಆಡಿಸಿ. ಸೊಪ್ಪು, ಟೊಮೆಟೊ ಬೆಂದು, ಈರುಳ್ಳಿ ಬಣ್ಣ ಸ್ವಲ್ಪ ಬದಲಾದಾಗ ಸ್ಟೌವ್ ಆಫ್ ಮಾಡಿ, ಸ್ವಲ್ಪ ತಣ್ಣಗಾದ ಮೇಲೆ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
*ಈಗ ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಅಂತ ಶಬ್ದ ಮಾಡುವಾಗ ಕರಿಬೇವು, ಕತ್ತರಿಸಿದ ಈರುಳ್ಳಿ, ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಸೌಟ್‌ನಿಂದ ಆಡಿಸಿ.
* ನಂತರ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲೆ ಪುಡಿ, ಅರಿಶಿಣ ಪುಡಿ ಹಾಕಿ ಎಣ್ಣೆ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು(5-6 ನಿಮಿಷ) ಸೌಟ್‌ನಿಂದ ಆಡಿಸಿ. ನಂತರ ಚಿಕನ್ ಹಾಕಿ ಉಪ್ಪು ಹಾಕಿ ಮಿಶ್ರ ಮಾಡಿ ಬೇಯಿಸಿ, ಚಿಕನ್ ಅರ್ಧ ಭಾಗ ಬೇಯುವಾಗ ರುಬ್ಬಿದ ಪಾಲಾಕ್ ಪೇಸ್ಟ್ ಹಾಕಿ ಮಿಶ್ರ ಮಾಡಿ ಬೇಯಿಸಿ, ಸ್ವಲ್ಪ ಸಾರು ರೀತಿ ಬೇಕಿದ್ದರೆ ಅರ್ಧ ಲೋಟ ನೀರು ಸೇರಿಸಿ, ಇಲ್ಲದಿದ್ದರೆ ಚಿಕನ್‌ನಿಂದ ಬಿಡುವ ನೀರು ಸಾಕು, ಗ್ರೇವಿಯಾಗುತ್ತದೆ. ಚಿಕನ್ ಬೆಂದ ಮೇಲೆ ಉಪ್ಪು ಸರಿಯಾಗಿದೆಯೇ ನೋಡಿ, ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪಾಲಾಕ್ ಚಿಕನ್ ರೆಡಿ.
- ಪಾಲಾಕ್ ಚಿಕನ್ ಮಾಡುವಾಗ ಅರ್ಧ ಲೋಟದಷ್ಟು ಗಟ್ಟಿ ಮೊಸರು ಬೇಕಿದ್ದರೆ ಸೇರಿಸಬಹುದು. *ಪಾಲಾಕ್ ಚಿಕನ್‌ಗೆ 4-5 ಗೋಡಂಬಿ ಮತ್ತು ಬಾದಾಮಿ ಪುಡಿ ಮಾಡಿ ಫ್ರೈ ಮಾಡುವಾಗಲೇ ಹಾಕಿದರೆ ಮತ್ತಷ್ಟು ರುಚಿಕರವಾಗಿರುತ್ತದೆ
- ಸರ್ವ್ - 1 ಕೆಜಿ
- ಕ್ಯಾಲೋರಿ - 288ಕ್ಯಾ
- ಪ್ರೊಟೀನ್ - 33ಗ್ರಾಂ
- ಕಾರ್ಬ್ಸ್ - 12ಗ್ರಾಂ
- ನಾರಿನಂಶ - 2ಗ್ರಾಂ



Click it and Unblock the Notifications