Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೀಪಾವಳಿ ವಿಶೇಷ: ಈರುಳ್ಳಿ ಪಕೋಡ ರೆಸಿಪಿ
ಭಾರತದ ಜನಪ್ರಿಯ ಕುರುಕಲು ತಿಂಡಿಯಲ್ಲಿ ಈರುಳ್ಳಿ ಪಕೋಡವೂ ಒಂದು. ಭಾರತದ ವಿವಿಧೆಡೆ ತಯಾರಿಸುವ ಈ ತಿಂಡಿ ಕಾಫಿ-ಟೀ ಸವಿಯುವಾಗ ಒಳ್ಳೆಯ ಸಾಥ್ ನೀಡುತ್ತದೆ. ತಮಿಳುನಾಡಿನಲ್ಲಿ ಇದನ್ನು ವೆಂಗಾಯಾ ಪಕೋಡ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಈರುಳ್ಳಿ ಪಕೋಡ ಎಂದು ಪ್ರಸಿದ್ಧಿ ಪಡೆದ ಈ ತಿನಿಸನ್ನು ನಾಲಿಗೆ ಒಮ್ಮೆ ಚಪ್ಪರಿಸಿದರೆ ಮತ್ತೆ ಮತ್ತೆ ಬೇಕೆನಿಸುವ ಬಯಕೆಯನ್ನು ಹುಟ್ಟಿಸುತ್ತದೆ.
ಅಕ್ಕಿ ಹಿಟ್ಟು, ಕಡ್ಲೆ ಹಿಟ್ಟು, ತೆಳುವಾದ ಈರುಳ್ಳಿಯ ತುಂಡುಗಳು ಹಾಗೂ ರುಚಿಕರ ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಎಣ್ಣೆಯಲ್ಲಿ ಕರಿದು ತೆಗೆಯಲಾಗುವ ಈ ತಿನಿಸು ಗರಿಗರಿಯಾಗಿ, ಈರುಳ್ಳಿಯೊಂದಿಗೆ ಖಾರ ರುಚಿಯನ್ನು ನೀಡುತ್ತದೆ. ಉತ್ತಮವಾದ ಪರಿಮಳ ಹಾಗೂ ರುಚಿಯೊಂದಿಗೆ ಮನಗೆಲ್ಲುತ್ತದೆ.
ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ತಕ್ಷಣಕ್ಕೆ ತಯಾರಿಸಬಹುದು. ಈರುಳ್ಳಿ ಪಕೋಡ ಪಾಕವಿಧಾನವನ್ನು ನೀವು ಅರಿಯಬೇಕು ಎನ್ನುವ ಬಯಕೆ ಹೊಂದಿದ್ದರೆ ಈ ಕೆಳಗೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Recipe By: ಕಾವ್ಯಶ್ರೀ ಎಸ್
Recipe Type: ಕುರುಕಲು ತಿಂಡಿ
Serves: 15 ಪಕೋಡ
-
ಸಿಪ್ಪೆ ತೆಗೆದ ಈರುಳ್ಳಿ - 2
ಕಡ್ಲೇ ಹಿಟ್ಟು - 1/4 ಬೌಲ್
ಖಾರದ ಪುಡಿ - 1,1/2 ಟೀ ಚಮಚ
ಅಕ್ಕಿ ಹಿಟ್ಟು - 1 ಟೇಬಲ್ ಚಮಚ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 3/4 ಕಪ್
ಇಂಗು - 1/4 ಟೀ ಚಮಚ
ಉಪ್ಪು- ರುಚಿಗೆ ತಕ್ಕಟ್ಟು
ನೀರು -1/2 ಕಪ್
ಎಣ್ಣೆ - 2 ಟೇಬಲ್ ಚಮಚ+ ಕರಿಯಲು
-
1. ಈರುಳ್ಳಿಯನ್ನು ತೆಗೆದುಕೊಂಡು ಮೇಲ್ಭಾಗ ಮತ್ತು ಕೆಳಭಾಗವನ್ನು ಕತ್ತರಿಸಿ ತೆಗೆಯಿರಿ.
2. ಈರುಳ್ಳಿಯ ಮೇಲ್ಭಾಗದ ಒರಟಾಗಿರುವ ಸಿಪ್ಪೆಯನ್ನು ತೆಗೆಯಿರಿ. ಈರುಳ್ಳಿಯ ಮೇಲೆ ಕಪ್ಪು ಕಲೆಗಳಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ.
3. ಈರುಳ್ಳಿಯ ಅರ್ಧ ಭಾಗಮಾಡಿಕೊಂಡು ಕತ್ತರಿಸಿ.
4. ತೆಳುವಾಗಿ ಹಾಗೂ ಉದ್ದುದ್ದವಾಗಿ ಕತ್ತರಿಸಿ.
5. ಮಿಶ್ರಣದ ಪಾತ್ರೆಗೆ ವರ್ಗಾಯಿಸಿ.
6. ಈರುಳ್ಳಿ ಚೂರುಗಳ ಪದರವನ್ನು ಬಿಡಿಸಿಕೊಳ್ಳಿ.
7. ಕಡ್ಲೆ ಹಿಟ್ಟನ್ನು ಮಿಶ್ರಣದ ಪಾತ್ರೆಗೆ ಸೇರಿಸಿ.
8. ಅಕ್ಕಿ ಹಿಟ್ಟು ಮತ್ತು ಖಾರದ ಪುಡಿಯನ್ನು ಸೇರಿಸಿ.
9. ನಂತರ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಇಂಗನ್ನು ಸೇರಿಸಿ.
10. ಚೆನ್ನಾಗಿ ಮಿಶ್ರಗೊಳಿಸಿ.
11. ಸ್ವಲ್ಪ ಸ್ವಲ್ಪ ನೀರನ್ನು ಬೆರೆಸುತ್ತ ದಪ್ಪದಾದ ಹಿಟ್ಟಿನ ಮಿಶ್ರಣವನ್ನಾಗಿ ಮಾಡಿ.
12. ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ.
13. 2 ನಿಮಿಷಗಳಕಾಲ ಎಣ್ಣೆಯನ್ನು ಬಿಸಿ ಮಾಡಿ.
14. ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
15. ಕರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ, ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
16. ಎಣ್ಣೆ ಬಿಸಿ ಆಗಿದೆಯೇ ಎಂದು ಪರೀಕ್ಷಿಸಲು ಚಿಕ್ಕ ಈರುಳ್ಳಿ ತುಂಡನ್ನು ಬಿಡಿ.
17. ಎಣ್ಣೆಯಲ್ಲಿ ಬಿಟ್ಟ ಚೂರು ಗುಳ್ಳೆಗಳೊಂದಿಗೆ ಮೇಲೆ ಬಂದರೆ, ಎಣ್ಣೆ ಕರಿಯಲು ಸಿದ್ಧವಾಗಿದೆ ಎಂದರ್ಥ.
18. ಒಂದು ಚಮಚದ ಸಹಾಯದಿಂದ ಹಿಟ್ಟನ್ನು ಎಣ್ಣೆಯಲ್ಲಿ ಒಂದಾದ ಮೇಲೊಂದರಂತೆ ಬಿಡಬೇಕು. ನಿಮ್ಮ ಕೈಯಿಂದಲೂ ಸಹಹಿಟ್ಟನ್ನು ಎಣ್ಣೆಗೆ ಬಿಡಬಹುದು.
19. ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿ.
20. ಎರಡು ಭಾಗದಲ್ಲೂ ಚೆನ್ನಾಗಿ ಬೇಯಲು ಸರಿಯಾಗಿ ತಿರುವಿ.
21. ಎರಡು ಭಾಗದಲ್ಲೂ ಹೊಂಬಣ್ಣ ಬರುವವರೆಗೂ ಬೇಯಿಸಿ.
22. ಎಣ್ಣೆಯಿಂದ ತೆಗೆದು, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ಪಕೋಡ ಗರಿಗರಿಯಾಗುವ ಉದ್ದೇಶಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಲಾಗುವುದು.
- 2. ಈರುಳ್ಳಿಗೆ ಮಿಶ್ರಣ ಅಂಟಿಕೊಳ್ಳುವಷ್ಟು ನೀರನ್ನು ಸೇರಿಸಿ ಮಿಶ್ರಗೊಳಿಸಬೇಕು.
- 3. ಮರಿಮಳಕ್ಕೆ ಬೇಕಾದರೆ ಕ್ಯಾರಂ ಬೀಜಗಳನ್ನು ಸೇರಿಸಿಕೊಳ್ಳಬಹುದು.
- ಸರ್ವಿಂಗ್ ಸೈಜ್ - 4 ಪಕೋಡ
- ಕ್ಯಾಲೋರಿ - 315 ಕ್ಯಾಲ್
- ಫ್ಯಾಟ್ - 10 ಗ್ರಾಂ.
- ಪ್ರೋಟೀನ್ - 4 ಗ್ರಾಂ.
- ಕಾರ್ಬೋಹೈಡ್ರೇಟ್ - 10 ಗ್ರಾಂ.
ಈರುಳ್ಳಿ ಪಕೋಡ ಮಾಡುವ ವಿಧಾನ
1. ಈರುಳ್ಳಿಯನ್ನು ತೆಗೆದುಕೊಂಡು ಮೇಲ್ಭಾಗ ಮತ್ತು ಕೆಳಭಾಗವನ್ನು ಕತ್ತರಿಸಿ ತೆಗೆಯಿರಿ.

2. ಈರುಳ್ಳಿಯ ಮೇಲ್ಭಾಗದ ಒರಟಾಗಿರುವ ಸಿಪ್ಪೆಯನ್ನು ತೆಗೆಯಿರಿ. ಈರುಳ್ಳಿಯ ಮೇಲೆ ಕಪ್ಪು ಕಲೆಗಳಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ.

3. ಈರುಳ್ಳಿಯ ಅರ್ಧ ಭಾಗಮಾಡಿಕೊಂಡು ಕತ್ತರಿಸಿ.

4. ತೆಳುವಾಗಿ ಹಾಗೂ ಉದ್ದುದ್ದವಾಗಿ ಕತ್ತರಿಸಿ.

5. ಮಿಶ್ರಣದ ಪಾತ್ರೆಗೆ ವರ್ಗಾಯಿಸಿ.

6. ಈರುಳ್ಳಿ ಚೂರುಗಳ ಪದರವನ್ನು ಬಿಡಿಸಿಕೊಳ್ಳಿ.

7. ಕಡ್ಲೆ ಹಿಟ್ಟನ್ನು ಮಿಶ್ರಣದ ಪಾತ್ರೆಗೆ ಸೇರಿಸಿ.

8. ಅಕ್ಕಿ ಹಿಟ್ಟು ಮತ್ತು ಖಾರದ ಪುಡಿಯನ್ನು ಸೇರಿಸಿ.

9. ನಂತರ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಇಂಗನ್ನು ಸೇರಿಸಿ.

10. ಚೆನ್ನಾಗಿ ಮಿಶ್ರಗೊಳಿಸಿ.

11. ಸ್ವಲ್ಪ ಸ್ವಲ್ಪ ನೀರನ್ನು ಬೆರೆಸುತ್ತ ದಪ್ಪದಾದ ಹಿಟ್ಟಿನ ಮಿಶ್ರಣವನ್ನಾಗಿ ಮಾಡಿ.

12. ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ.

13. 2 ನಿಮಿಷಗಳಕಾಲ ಎಣ್ಣೆಯನ್ನು ಬಿಸಿ ಮಾಡಿ.

14. ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

15. ಕರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ, ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.

16. ಎಣ್ಣೆ ಬಿಸಿ ಆಗಿದೆಯೇ ಎಂದು ಪರೀಕ್ಷಿಸಲು ಚಿಕ್ಕ ಈರುಳ್ಳಿ ತುಂಡನ್ನು ಬಿಡಿ.

17. ಎಣ್ಣೆಯಲ್ಲಿ ಬಿಟ್ಟ ಚೂರು ಗುಳ್ಳೆಗಳೊಂದಿಗೆ ಮೇಲೆ ಬಂದರೆ, ಎಣ್ಣೆ ಕರಿಯಲು ಸಿದ್ಧವಾಗಿದೆ ಎಂದರ್ಥ.

18. ಒಂದು ಚಮಚದ ಸಹಾಯದಿಂದ ಹಿಟ್ಟನ್ನು ಎಣ್ಣೆಯಲ್ಲಿ ಒಂದಾದ ಮೇಲೊಂದರಂತೆ ಬಿಡಬೇಕು. ನಿಮ್ಮ ಕೈಯಿಂದಲೂ ಸಹಹಿಟ್ಟನ್ನು ಎಣ್ಣೆಗೆ ಬಿಡಬಹುದು.

19. ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿ.

20. ಎರಡು ಭಾಗದಲ್ಲೂ ಚೆನ್ನಾಗಿ ಬೇಯಲು ಸರಿಯಾಗಿ ತಿರುವಿ.

21. ಎರಡು ಭಾಗದಲ್ಲೂ ಹೊಂಬಣ್ಣ ಬರುವವರೆಗೂ ಬೇಯಿಸಿ.

22. ಎಣ್ಣೆಯಿಂದ ತೆಗೆದು, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Click it and Unblock the Notifications