Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಂಬಾ ರುಚಿಯಾಗಿರುತ್ತೆ ಈ ಓಟ್ಸ್ ಮಸಾಲೆ ಇಡ್ಲಿ, ಮಧುಮೇಹಿಗಳಿಗಂತೂ ತುಂಬಾ ಒಳ್ಳೆಯದು
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಮಧುಮೇಹವನ್ನು ನಿಯಂತ್ರಿಸಲು ಇರುವ ಪ್ರಮುಖ ವಿಧಾನವೆಂದರೆ ಅದರಲ್ಲಿಯೂ ಆಹಾರ ಶೈಲಿ, ಮಧುಮೇಹವನ್ನು ನಿಯಮತ್ರಿಸಲು ಓಟ್ಸ್ ತುಂಬಾನೇ ಸಹಕಾರಿ.
ಆದರೆ ಓಟ್ಸ್ ರುಚಿಯಿರಲ್ಲ ಎಂದೇ ಭಾವಿಸುತ್ತಾರೆ, ಆದರೆ ಅದು ತಪ್ಪು ಆಲೋಚನೆ, ನೀವು ಓಟ್ಸ್‌ನಿಂದ ತುಂಬಾನೇ ರುಚಿಯಾದ ಬ್ರೇಕ್ ಫಾಸ್ಟ್ ತಯಾರಿಸಬಹುದು.
ಇಲ್ಲಿ ಓಟ್ಸ್ ಬಳಸಿ ಮಾಡುವ ಮಸಾಲೆ ಇಡ್ಲಿ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
1 ಕಪ್ ಓಟ್ಸ್
1/2 ಕಪ್ ಗೋಧಿ ರವೆ (ಸೂಜಿ ರವೆ ಬೇಕಾದರು ಬಳಸಬಹುದು)
1/4 ಕಪ್ ಮೊಸರು
1 ಕಪ್ ನೀರು\ ರುಚಿಗೆ ತಕ್ಕ ಉಪ್ಪು
1 ENO
2 ಚಮಸ ಕ್ಯಾರೆಟ್
ಸ್ವಲ್ಪ ಶುಂಠಿ ತುರಿದು ಹಾಕಿ
ಕ್ಯಾರೆಟ್ ತುರಿದು ಹಾಕಿ
ನಿಂಬೆರಸ (1/2 ಚಮಚ)
ಇದರ ಜೊತೆ ಕಪ್ ತರಕಾರಿ ಕೂಡ ಸೇರಿಸಬಹುದು
ಇತರ ಸಾಮಗ್ರಿ
ಸ್ವಲ್ಪ ಸಾಸಿವೆ
ಸ್ವಲ್ಪ ಜೀರಿಗೆ
1 ಚಮಚ ಉದ್ದಿನ ಬೇಳೆ
1/2 ಚಮಚ ಕಡ್ಲೆ ಬೇಳೆ
ಹಸಿ ಮೆಣಸು 2 ಚಿಕ್ಕದಾಗಿ ಕತ್ತರಿಸಿದ್ದು
ಚಿಟಿಕೆಯಷ್ಟು ಇಂಗು ಸ್ವಲ್ಪ ಕರಿಬೇವು
ಮಾಡುವ ವಿಧಾನ:
- ಮೊದಲಿಗೆ ಓಟ್ಸ್ ಬ್ಲೆಂಡರ್‌ನಲ್ಲಿ ಹಾಕಿ ಪುಡಿ ಮಾಡಿ.
- ನಂತರ ಅದನ್ನು ಒಂದು ಬೌಲ್‌ಗೆ ಹಾಕಿ ತರಕಾರಿ, ಮೊಸರು, ನಿಂಬೆರಸ ಎಲ್ಲಾ ಸೇರಿಸಿ ಮಿಕ್ಸ್ ಮಾಡಿ, ನಂತರ ಒಗ್ಗರಣೆ ಹಾಕಿ ಮಿಕ್ಸ್ ಮಾಡಿ.
- ನಂತರ ರವೆ ಸ್ವಲ್ಪ ಹುರಿದು ಸೇರಿಸಿ ನಂತರ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿ
- ನಂತರ ಇಡ್ಲಿ ಪಾತ್ರೆಗೆ ಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸಿದರೆ ಓಟ್ಸ್ ಇಡ್ಲಿ ರೆಡಿ.
ಸಲಹೆ : ನೀವು ENO ಇಲ್ಲದಿದ್ದರೆ ಅಡುಗೆ ಸೋಡಾ ಬಳಸಬಹುದು.
ಇನ್ನು ಕಲೆಸುವಾಗ ಬಿಸಿ ನೀರು ಹಾಕಿ.
ಬೇಗನೆ ಮಾಡಬಹುದು: ನೀವು ಈ ಇಡ್ಲಿ ಬೆಳಗ್ಗೆ ಮಾಡುವುದಾದರೆ ಮಾಡುವ ಒಂದು ಅರ್ಧ ಗಂಟೆಯ ಮೊದಲು ತಯಾರಿ ಪ್ರಾರಂಭಿಸಿದರೆ ಸಾಕು. ಇದನ್ನು ಹುದುಗು ಬರಿಸಿ ಇಡಬೇಕಾಗಿಲ್ಲ. ಬೆಳಗ್ಗೆ ಸುಲಭವಾಗಿ ಮಾಡಬಹುದಾದ ರೆಸಿಪಿ ಇದಾಗಿದೆ.
ಓಟ್ಸ್ ಬ್ರೇಕ್‌ಫಾಸ್ಟ್‌ಗೆ ಬಳಸುವುದರಿಂದ ದೊರೆಯುವ
ಪ್ರಯೋಜನಗಳು:
ಓಟ್ಸ್‌ನಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಿರುತ್ತದೆ: ಹೀಗಾಗಿ ಬ್ರೇಕ್‌ಫಾಸ್ಟ್‌ಗೆ
ತುಂಬಾ ಒಳ್ಳೆಯದು. ಇದನ್ನು ಮಾಡುವುದರಿಂದ ಮಕ್ಕಳ ಆರೋಗ್ಯಕ್ಕೆ ತುಂಬಾನೇ
ಒಳ್ಳೆಯದು. ಇದನ್ನು ಮಾಡುವುದರಿಂದ ಮನೆಯಲ್ಲಿ ಮಧುಮೇಹಿಗಳಿದ್ದರೆ ಅವರಿಗೆ ಬೇರೆ
ಬ್ರೇಕ್‌ಪಾಸ್ಟ್ ಮಾಡಬೇಕಾಗಿಲ್ಲ.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು,
ಮಲಬದ್ಧತೆ ಸಮಸ್ಯೆ ದೂರಾಗುವುದು.
ಕೆಟ್ಟ ಕೊಲೆಸ್ಟ್ರಾಲ್ ತಡೆಗಟ್ಟುತ್ತದೆ
ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು
ತುಂಬಾನೇ ಸಹಕಾರಿ, ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿದ್ದರೆ
ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತೂಕ ನಿಯಂತ್ರಣಕ್ಕೆ ಒಳ್ಳೆಯದು
ಓಟ್ಸ್ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿಯಾಗಿದೆ. ತೂಕ
ನಿಯಂತ್ರಣದಲ್ಲಿರುವುದರು ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಕ್ಕಳಲ್ಲಿ ಕಂಡು ಬರುವ ಅಸ್ತಮಾ ತಡೆಗಟ್ಟಲು ಸಹಕಾರಿ
ಚಿಕ್ಕ ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿ. ಮಕ್ಕಳ ಆರೋಗ್ಯ ವೃದ್ಧಿಸಲು ಈ ಓಟ್ಸ್ ತುಂಬಾನೇ ಸಹಕಾರಿಯಾಗಿದೆ.



Click it and Unblock the Notifications