Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಸಾಲೆ ದೋಸೆ ಅಲ್ಲ ಮಸಾಲೆ ಇಡ್ಲಿ ಮಾಡಿದ್ದೀರಾ? 2 ನಿಮಿಷದಲ್ಲಿ ರೆಡಿ ಮಾಡಿ!!
ನೀವು ಬೆಳಗ್ಗೆ ತಿಂಡಿಗೆ ಎಷ್ಟು ವಿಧವಾದ ಖಾದ್ಯಗಳ ಮಾಡಿರುತ್ತೀರಿ. ಅದರಲ್ಲೂ ಬ್ರೇಕ್‌ಫಾಸ್ಟ್‌ಗೆ ಇಡ್ಲಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಫೈಬರ್ ಹೆಚ್ಚಿರುವ ಇಡ್ಲಿ ಬೆಳಗ್ಗೆ ಸವಿಯುವುದು ಆರೋಗ್ಯಕ್ಕೂ ಬಹಳ ಉತ್ತಮ. ಆದರೆ ಇಡ್ಲಿಗೆ ರುಚಿಕರ ಇಡ್ಲಿ ಅಥವಾ ಸಾಂಬಾರ್ ಇಲ್ಲದಿದ್ದರೆ ಇಡ್ಲಿ ಸವಿಯುವುದು ಬಹಳ ಕಷ್ಟವಾಗುತ್ತೆ. ಆದ್ರೆ ನಾವಿಂದು ಈ ದೂರನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಇಡ್ಲಿಯನ್ನು ಹೊಸ ವಿಧಾನದಲ್ಲಿ ಮಾಡಿ ನೋಡೋಣ. ಅದರಲ್ಲು ಮಸಾಲ ಇಡ್ಲಿ ಫ್ರೈ ಎಂದಾದ್ರು ನೀವು ಪ್ರಯತ್ನಿಸಿದ್ದೀರಾ? ಇಡ್ಲಿಯನ್ನು ಮಸಾಲೆ ಭರಿತವಾಗಿ ರೆಡಿ ಮಾಡಿ ಸವಿಯಲು ನೀಡಿದರೆ ಆ ರುಚಿಗೆ ನೀವು ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಈ ಮಸಾಲೆ ಇಡ್ಲಿಯನ್ನು ಮಾಡೋದು ಕೂಡ ತುಂಬಾನೆ ಸುಲಭ. ಹಾಗೆ ಇದನ್ನು ಸವಿಯಲು ಚಟ್ನಿ ಸಾಂಬಾರ್ ಇಲ್ಲದಿದ್ದರೂ ರುಚಿ ದುಪ್ಪಟ್ಟಾಗುತ್ತೆ.

ಇಷ್ಟೊಂದು ರುಚಿಕರವಾದ ಮಸಾಲೆ ಇಡ್ಲಿ ಫ್ರೈ ಅನ್ನು ಮಾಡೋದು ಹೇಗೆ? ಅದಕ್ಕೆ ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಇಡ್ಲಿ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಇಡ್ಲಿಗಳು
- ಬೆಳ್ಳುಳ್ಳಿ
- ಶುಂಠಿ
- ಹಸಿರು ಮೆಣಸಿನಕಾಯಿ
- ಈರುಳ್ಳಿ
- ಕ್ಯಾಪ್ಸಿಕಂ
- ಕ್ಯಾರೆಟ್
- ಗರಂ ಮಸಾಲ ಪುಡಿ
- ಕರಿಮೆಣಸಿನ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆ ಇಡ್ಲಿ ಫ್ರೈ ಮಾಡುವ ವಿಧಾನವೇನು?
ಮೊದಲು ಮಸಾಲೆ ಇಡ್ಲಿ ಮಾಡಲು ಸಣ್ಣ ಇಡ್ಲಿಗಳನ್ನು ಮಾಡಿಟ್ಟುಕೊಳ್ಳಬೇಕು. ನೀವು ಕಾಯಿನ್ ಇಡ್ಲಿ, ಬಟನ್ ಇಡ್ಲಿ ಅಂತಲೂ ಇದನ್ನು ಕರೆಯುತ್ತಾರೆ. ಅತ್ಯಂತ ಚಿಕ್ಕದಾದ ಇಡ್ಲಿ. ಈ ಇಡ್ಲಿ ಅಚ್ಚು ಕೂಡ ಅಂಗಡಿಗಳಲ್ಲಿ ಸಿಗುತ್ತದೆ. ಅದನ್ನು ಖರೀದಿಸಿ ತಂದು ಮಾಡಿಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಬೆಳ್ಳುಳ್ಳು ಹಾಗೂ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಹೆಚ್ಚಿದ 2 ಹಸಿ ಮೆಣಸು, ಈರುಳ್ಳಿ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ. ಈಗ ಸ್ವಲ್ಪ ಕ್ಯಾಪ್ಸಿಕಂ, ಕ್ಯಾರೆಟ್ ತುರಿ, ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ.
ಹಾಗೆ ರುಚಿಗೆ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ, ಬಳಿಕ ಇದಕ್ಕೆ ಗರಂ ಮಸಾಲೆ, ಕಾಳು ಮೆಣಸಿನ ಪುಡಿ ಹಾಕಿ ಬಳಿಕ ರೆಡಿ ಮಾಡಿಕೊಂಡಿರುವ ಇಡ್ಲಿಯನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಇಡ್ಲಿ ಒಡೆಯದಂತೆ ನೋಡಿಕೊಂಡು ತಿರುಗಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಇಡ್ಲಿ ರೆಡಿಯಾಗುತ್ತೆ. ನೀವು ಕೂಡ ಮಾಡಿ ನೋಡಿ. ನೀವು ಈ ಮಸಾಲೆ ಇಡ್ಲಿಯನ್ನು ಸಾಮಾನ್ಯ ಇಡ್ಲಿ ಬಳಸಿಯೂ ಮಾಡಬಹುದು. ದೊಡ್ಡ ಇಡ್ಲಿಯನ್ನು 4 ಭಾಗವಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡು ಮಾಡಬಹುದು.



Click it and Unblock the Notifications