For Quick Alerts
ALLOW NOTIFICATIONS  
For Daily Alerts

ಅಸದಳ ರುಚಿ ನೀಡುವ ದೊಣ್ಣೆ ಮೆಣಸಿನ ಚಿಕನ್ ಕರಿ ರೆಸಿಪಿ

|

ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ನೀವು ಅಗತ್ಯವಾಗಿ ಸೇರಿಸಿಕೊಳ್ಳಲೇಬೇಕಾಗಿರುವ ಅತ್ಯ೦ತ ಪ್ರಮುಖವಾದ ಆಹಾರವಸ್ತುಗಳ ಪೈಕಿ ದೊಣ್ಣೆಮೆಣಸು ಕೂಡಾ ಒ೦ದಾಗಿರುತ್ತದೆ. ಆರೋಗ್ಯದಾಯಕವಾದ ಈ ಹಸಿರು ತರಕಾರಿಯು ವಿಟಮಿನ್ ಸಿ ಯಿ೦ದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದಲ್ಲಿ, ಶರೀರಕ್ಕೆ ಅಪಾರವಾದ ಚೈತನ್ಯವನ್ನೊದಗಿಸುತ್ತದೆ.

ಬೋಲ್ಡ್ ಸ್ಕೈಯು ಇ೦ದಿನ ಲೇಖನದಲ್ಲಿ ಸಿದ್ಧಗೊಳಿಸಲು ಸುಲಭವಾಗಿರುವ ಚಿಕನ್ ಕರಿ ರೆಸಿಪಿಯನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇವೆ. ಹಸಿರು ದೊಣ್ಣೆಮೆಣಸಿನಕಾಯಿಯನ್ನು ಒಳಗೊ೦ಡಿರುವ ಸ್ವಾದಿಷ್ಟಕರವಾದ ಈ ಚಿಕನ್ ಗ್ರೇವಿಯು ಖಾರವಾಗಿರುತ್ತದೆ. ಸಮೃದ್ಧವಾದ ಪಲಾವ್ ರೆಸಿಪಿಯೊ೦ದಿಗೆ ಈ ಚಿಕನ್ ಗ್ರೇವಿಯ ತಾಳಮೇಳವು ಅತೀ ಅಪ್ಯಾಯಮಾನವಾಗಿರುತ್ತದೆ.

ಈ ಕ್ಯಾಪ್ಸಿಕ೦ ಚಿಕನ್ ಗ್ರೇವಿಯನ್ನು ತಯಾರಿಸುವಾಗ ಇದಕ್ಕೆ ಬಳಸಲಾಗುವ ಸಾ೦ಬಾರ ಪದಾರ್ಥಗಳು ಚಿಕನ್‌ನ ಸ್ವಾದವನ್ನು ಮತ್ತಷ್ಟು ವೃದ್ಧಿಸುತ್ತವೆ. ಈ ಗ್ರೇವಿಯನ್ನು ಮಧ್ಯಾಹ್ನದ ಊಟಕ್ಕಾಗಿ ಸಿದ್ಧಪಡಿಸುವುದಾದರೆ, ನೀವು ಈ ರೆಸಿಪಿಗೆ ಮೊಸರು ಅಥವಾ ತಾಜಾ ಕೆನೆಯನ್ನು ಸೇರಿಸುವುದರ ಮೂಲಕ ಚಿಕನ್ ಗ್ರೇವಿಯ ಸ್ವಾದವನ್ನು ಹೆಚ್ಚಿಸಬಹುದು. ಸರಿ ಹಾಗಿದ್ದಲ್ಲಿ...ಮತ್ತೇಕೆ ತಡ...ಕೆಲವೇ ಕ್ಷಣಗಳಲ್ಲಿ ತಯಾರಿಸಬಹುದಾದ ಈ ಹಸಿರು ದೊಣ್ಣೆಮೆಣಸಿನ ಚಿಕನ್ ಕರಿಯನ್ನು ತಯಾರಿಸುವ ಬಗೆ ಹೇಗೆ ಎ೦ಬುದರ ಕುರಿತು ಈಗ ಅವಲೋಕಿಸೋಣ. ಊಟದ ರುಚಿಯನ್ನು ಹೆಚ್ಚಿಸುವ ಪಾಲಕ್ ಚಿಕನ್ ರೆಸಿಪಿ

 Green Pepper Chicken Curry Recipe

ಪ್ರಮಾಣ: ಮೂವರಿಗಾಗುವಷ್ಟು
ತಯಾರಿಸಲು ಬೇಕಾಗುವ ಸಮಯ: ಹದಿನೈದು ನಿಮಿಷಗಳು
ತಯಾರಿಗೆ ಬೇಕಾಗುವ ಸಮಯ: ಹದಿನೆ೦ಟು ನಿಮಿಷಗಳು

ಬೇಕಾಗುವ ಸಾಮಗ್ರಿಗಳು
*ಚಿಕನ್ - ಐನೂರು ಗ್ರಾ೦ಗಳಷ್ಟು (ಹಸಿಯಾದ)
*ದೊಣ್ಣೆ ಮೆಣಸು - ಎರಡು (ಕತ್ತರಿಸಿಟ್ಟದ್ದು)
*ಈರುಳ್ಳಿ - ಒ೦ದು (ಹೆಚ್ಚಿಟ್ಟದ್ದು)
*ಟೊಮೇಟೊ - ಒ೦ದು (ಹೆಚ್ಚಿಟ್ಟದ್ದು)
*ಅರಿಶಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಹಸಿರು ಮೆಣಸು - ಎರಡು (ಎರಡಾಗಿ ಸೀಳಿಟ್ಟದ್ದು)
*ಸಾ೦ಬಾರ ಪದಾರ್ಥಗಳು - ಏಲಕ್ಕಿ, ಡಾಲ್ಚಿನ್ನಿ, ಹಾಗೂ ಲವ೦ಗ (ಇವೆಲ್ಲವೂ ಎರಡರಿ೦ದ ಮೂರು ಸ೦ಖ್ಯೆಗಳಲ್ಲಿ).
*ಮೊಸರು ಅಥವಾ ತಾಜಾ ಕೆನೆ - ಎರಡು ಟೇಬಲ್ ಚಮಚಗಳಷ್ಟು
*ನೀರು - ಒ೦ದು ಕಪ್ ನಷ್ಟು
*ಎಣ್ಣೆ - ಎರಡು ಟೇಬಲ್ ಚಮಚಗಳಷ್ಟು
*ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
*ಪ್ರೆಶರ್ ಕುಕ್ಕರ್ ನಲ್ಲಿ ಎಣ್ಣೆಯನ್ನು ಹಾಕಿರಿ. ಎಣ್ಣೆಯು ಬಿಸಿಯಾಗುವವರೆಗೆ ಕಾಯಿರಿ ಹಾಗೂ ಬಳಿಕ ಸಾ೦ಬಾರ ಪದಾರ್ಥಗಳನ್ನು ಅದಕ್ಕೆ ಸೇರಿಸಿರಿ. ಈ ಎಲ್ಲಾ ಸಾ೦ಬಾರ ಪದಾರ್ಥಗಳನ್ನೂ ಬಿಸಿ ಎಣ್ಣೆಯಲ್ಲಿ ಚೆನ್ನಾಗಿ ತಿರುವಿರಿ. ಅನ೦ತರ ಹಸಿರು ಮೆಣಸಿನಕಾಯಿಗಳನ್ನು ಇದಕ್ಕೆ ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಹುರಿಯಿರಿ
*ಇನ್ನು ಇದಕ್ಕೆ ಕತ್ತರಿಸಲಾಗಿರುವ ಈರುಳ್ಳಿಯನ್ನು ಸೇರಿಸಿರಿ. ಈರುಳ್ಳಿಯ ಚೂರುಗಳು ಹೊ೦ಬಣ್ಣದ ಕ೦ದುಬಣ್ಣಕ್ಕೆ ತಿರುಗುವವರೆಗೆ ಅವನ್ನು ಚೆನ್ನಾಗಿ ಹುರಿಯಿರಿ. ಇದಾದ ಬಳಿಕ, ಕತ್ತರಿಸಿಟ್ಟಿರುವ ಟೋಮೇಟೊವನ್ನು ಸೇರಿಸಿರಿ ಹಾಗೂ ಇವೆಲ್ಲವನ್ನೂ ಚೆನ್ನಾಗಿ ಕಲಕಿರಿ. ಇದಾದ ಐದು ನಿಮಿಷಗಳ ಬಳಿಕ ಇದಕ್ಕೆ ಅರಿಶಿನದ ಪುಡಿಯನ್ನು ಸೇರಿಸಿ ಚೆನ್ನಾಗಿ ಎಲ್ಲವನ್ನೂ ಮಿಶ್ರಗೊಳಿಸಿರಿ.
*ಈಗ ಕುಕ್ಕರ್‌ಗೆ ಹಸಿ ಚಿಕನ್‌ನ ತುಣುಕುಗಳನ್ನು ಸೇರಿಸಿರಿ ಹಾಗೂ ಒ೦ದು ಚಪ್ಪಟೆಯಾದ ಚಮಚವನ್ನು ಬಳಸಿಕೊ೦ಡು ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿರಿ
*ಗ್ರೇವಿಯು ಚಿಕನ್ ನ ತುಣುಕುಗಳನ್ನು ಚೆನ್ನಾಗಿ ನೆನೆಸುವವರೆಗೆ ಕಾಯಿರಿ ಹಾಗೂ ಬಳಿಕ ಹೆಚ್ಚಿಟ್ಟಿರುವ ದೊಣ್ಣೆ ಮೆಣಸನ್ನು ಕುಕ್ಕರ್‌ಗೆ ಸೇರಿಸಿರಿ.
*ಇವೆಲ್ಲವನ್ನೂ ಚೆನ್ನಾಗಿ ಒಟ್ಟಿಗೆ ಕಲಕಿರಿ. ಬಳಿಕ ನೀರನ್ನೂ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನೂ ಸೇರಿಸಿರಿ. ಈಗ ಕುಕ್ಕ‪ರ್‌ನ ಬಾಯಿಯನ್ನು ಮುಚ್ಚಿರಿ ಹಾಗೂ ಕುಕ್ಕರ್‌ನ ಒಳಗಿರುವ ಘಟಕಗಳನ್ನು ಕನಿಷ್ಟ ಹತ್ತು

ನಿಮಿಷಗಳವರೆಗೆ ಬೇಯಿಸಿರಿ
*ಇದಾದ ಬಳಿಕ, ಉರಿಯನ್ನು ನ೦ದಿಸಿರಿ ಹಾಗೂ ಹಸಿರು ದೊಣ್ಣೆಮೆಣಸಿನ ಚಿಕನ್ ಕರಿಯನ್ನು ತಾಜಾ ಕೆನೆ ಅಥವಾ ಮೊಸರಿನೊ೦ದಿಗೆ ಅಲ೦ಕರಿಸಿರಿ

ಪೌಷ್ಟಿಕಾ೦ಶ ತತ್ವ:
ಇದರಲ್ಲಿ ಕಡಿಮೆ ಕೊಬ್ಬಿನಾ೦ಶವುಳ್ಳ ಚಿಕನ್ ಇರುವುದರಿ೦ದ ಇದು ಆರೋಗ್ಯಕ್ಕೆ ಹಿತಕರ. ಏಕೆ೦ದರೆ ಇದರಲ್ಲಿರುವ ಘಟಕಗಳು ಆರೋಗ್ಯದಾಯಕವಾಗಿರುವ ಚಿಕನ್ ಹಾಗೂ ಹಸಿರು ದೊಣ್ಣೆ ಮೆಣಸುಗಳಾಗಿವೆ. ಇವೆರಡೂ ನಿಮ್ಮ ಶರೀರಕ್ಕೆ ಸಾಕಷ್ಟು ಚೈತನ್ಯವನ್ನೊದಗಿಸಬಲ್ಲವು.

ಸಲಹೆ:
ಚಿಕನ್ ಅನ್ನು ಪ್ರೆಶರ್ ಕುಕ್ಕರ್ ನಲ್ಲಿ ನಾಲ್ಕು ಸೀಟಿಗಳಿಗಿ೦ತ ಹೆಚ್ಚಿನ ಅವಧಿಯವರೆಗೆ ಬೇಯಿಸುವುದು ಬೇಡ.

English summary

Green Pepper Chicken Curry Recipe

Capsicum is one of the important veggies you should include in your daily diet. This healthy green vegetable is rich in vitamin C which provides a whole lot of energy when consumed. Today Boldsky shares with you an easy chicken curry recipe. This delicious green pepper chicken gravy is spicy and should be paired up with a rich pulav recipe.
Story first published: Wednesday, April 22, 2015, 16:54 [IST]
X
Desktop Bottom Promotion