Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ದಿನದ ಸ್ಪೆಷೆಲ್- ಎಗ್ ಬಿರಿಯಾನಿ

ಬೇಕಾಗುವ ಸಾಮಾಗ್ರಿಗಳು:
4-5 ಬೇಯಿಸಿದ ಮೊಟ್ಟೆ
2 ಈರುಳ್ಳಿ
1 ಟೊಮೆಟೊ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಎಲೆ
2 ಚಮಚ ತುಪ್ಪ
ಒಂದೂವರೆ ಚಮಚ ಎಣ್ಣೆ
ಮುಕ್ಕಾಲು ಕಪ್ ಮೊಸರು
5 ಹಸಿಮೆಣಸಿನ ಕಾಯಿ (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಚಮಚ ಶುಂಠಿ ಪೇಸ್ಟ್
ಕಾಲು ಚಮಚ ಕೆಂಪು ಮೆಣಸಿನ ಪುಡಿ
ಕಾಲು ಚಮಚ ಕೊತ್ತಂಬರಿ ಪುಡಿ
2 ಚಮಚ ನಿಂಬೆರಸ
ರುಚಿಗೆ ತಕ್ಕ ಉಪ್ಪು
ಒಂದು ಚಮಚ ಬಿಸಿ ಹಾಲಿನಲ್ಲಿ ಚಿಟಿಕೆಯಷ್ಟು ಹಾಕಿದ ಕೇಸರಿ
ಬಿರಿಯಾನಿಗೆ ಮಸಾಲೆ:
4 ಲವಂಗ
ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ
1 ನಕ್ಷತ್ರ ಮೊಗ್ಗು(anise)
5 ಕರಿಮೆಣಸಿನ ಕಾಳು
ಇವುಗಳನ್ನು ಪುಡಿ ಮಾಡಿಡಬೇಕು.
ಬಿರಿಯಾನಿ ಅನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು:
ಎರಡೂವರೆ ಕಪ್ ಬಾಸುಮತಿ ಅಕ್ಕಿ
3 ಬೆಳ್ಳುಳ್ಳಿ ಎಸಳು
3 ಲವಂಗ
ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ
2 ಪಲಾವ್ ಎಲೆ
5-6 ಪುದೀನಾ ಎಲೆ
ಒಂದು ಚಮಚ ಎಣ್ಣೆ
ನೀರು
ತಯಾರಿಸುವ ವಿಧಾನ:
1. ಬಿರಿಯಾನಿ ಅನ್ನ ಮಾಡಲು ಹೇಳಿರುವ ಸಾಮಾಗ್ರಿಗಳನ್ನು ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ಅನ್ನ ಮಾಡಿ ಒಂದು ಪಾತ್ರೆಯಲ್ಲಿ ಆರಲು ಇಡಬೇಕು.
2. ಈಗ ಒಂದೂವರೆ ಚಮಚ ಎಣ್ಣೆ ಮತ್ತು ಒಂದೂವರೆ ಚಮಚ ತುಪ್ಪ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಅದರಲ್ಲಿ ಹುರಿದ ಈರುಳ್ಳಿಯ ಅರ್ಧದಷ್ಟು ಭಾಗವನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಬೇಕು.
3. ಉಳಿದ ಅರ್ಧ ಭಾಗ ಈರುಳ್ಳಿಗೆ ಹಸಿ ಮೆಣಸಿನ ಕಾಯಿ, ಟೊಮೆಟೊ, ಪುದೀನಾ, ಕೊತ್ತಂಬರಿ ಸೊಪ್ಪುಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಬಿಸಿ ಮಾಡಬೇಕು. ನಂತರ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಬಿರಿಯಾನಿ ಮಸಾಲೆ ಪುಡಿ ಮತ್ತು ಟೊಮೆಟೊ, ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಮೊಸರು ಹಾಕಿ ಚೆನ್ನಾಗಿ ಕುದಿಸಿ, ನಂತರ ಅದರಲ್ಲಿ ಮೊಟ್ಟೆಯನ್ನು ಹಾಕಬೇಕು.
4. ಈಗ ಸ್ವಲ್ಪ ಅಗಲವಿರುವ ಪಾತ್ರೆ ತೆಗೆದುಕೊಂಡು ತಳಭಾಗದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದಾಗ ಎಗ್ ಮಸಾಲ ನಂತರ ಬಿರಿಯಾನಿ ಅನ್ನ , ನಂತರ ಎಗ್ ಮಸಾಲ ಅದರ ಮೇಲೆ ಬಿರಿಯಾನಿ ಅನ್ನ ಹಾಕಿ ಈಗ ಒಂದು ಚಮಚ ತುಪ್ಪ ಹಾಕಿ ನಂತರ ಹುರಿದಿಟ್ಟ ಈರುಳ್ಳಿ ಹಾಕಿ ಒಮ್ಮೆ ಮಿಶ್ರಣ ಮಾಡಿ, ಹಾಲಿನಲ್ಲಿ ಹಾಕಿಟ್ಟ ಕೇಸರಿಯನ್ನು ಹಾಕಿ ಪಾತ್ರೆಯ ತಟ್ಟೆ ಮುಚ್ಚಿ, ಅದರ ಮೇಲೆ ಸ್ವಲ್ಪ ಭಾರವಾದ ವಸ್ತುವನ್ನು ಇಟ್ಟು ಕಡಿಮೆ ಉರಿಯಲ್ಲಿ 5 ನಿಮಿಷ ಬಿಸಿ ಮಾಡಿದರೆ ತುಂಬಾ ರುಚಿಯಾದ ಎಗ್ ಬಿರಿಯಾನಿ ರೆಡಿ.



Click it and Unblock the Notifications
