ವಾವ್! 'ಚಿಲ್ಲಿ ಚಿಕನ್', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

Posted By: Arshad
Subscribe to Boldsky

ಚೀನಾದಲ್ಲಿ ಪ್ರಾರಂಭವಾಗಿ ಬಹಳೇ ವರ್ಷಗಳೇ ಆಗಿದ್ದರೂ ಇತ್ತೀಚೆಗೆ ಭಾರತಕ್ಕೆ ಬಂದ ಬಳಿಕ ಶೀಘ್ರವೇ ಹೆಚ್ಚಿನ ಜನಪ್ರಿಯತೆ ಪಡೆದ ಚೈನೀಸ್ ಖಾದ್ಯಗಳಲ್ಲಿ ಪ್ರಮುಖವಾದುದು ಚಿಲ್ಲಿ ಚಿಕನ್. ಇದನ್ನು ತಯಾರಿಸುವುದು ಸುಲಭವೂ, ಕಡಿಮೆ ಸಮಯವೂ ತಗಲುವುದು ಮಾತ್ರವಲ್ಲದೇ ರುಚಿಯಲ್ಲಿಯೂ ಅಪ್ರತಿಮವಾಗಿದೆ.

ಈ ವರ್ಷದ ರಂಜಾನ್ ತಿಂಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಪವಾಸವನ್ನು ಸಂಪನ್ನಗೊಳಿಸುವ ಇಫ್ತಾರ್ ಸಮಯದಲ್ಲಿ ಸೇವಿಸಲು ಸ್ವಾದಿಷ್ಟವೂ ಪೌಷ್ಟಿಕರವೂ ಆದ ಈ ಖಾದ್ಯ ದಿನದಲ್ಲಿ ಕಳೆದುಕೊಂಡಿದ್ದ ಶಕ್ತಿಯನ್ನು ಮರುಪೂರೈಸಲು ಉತ್ತಮ ಆಯ್ಕೆಯಾಗಿದೆ. ಎಲ್ಲರ ಮನಮೆಚ್ಚುವ ಅಡುಗೆಯಾಗಿರುವ ಈ ಚಿಲ್ಲಿ ಚಿಕನ್ ವಿಶೇಷವಾಗಿ ಯುವಜನರಿಗೆ ಹೆಚ್ಚು ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ.  

ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ

ಇವರು ಇನ್ನಷ್ಟು ಬೇಕು ಎಂದು ಬೇಡಿಕೆ ಇರಿಸಿದರೆ ಮತ್ತೊಮ್ಮೆ ಮಾಡಿ ಕೊಡುವೆ ಎಂಬ ನೆಪ ನೀಡದೇ ಬೇರೆ ನಿರ್ವಾಹವುಳಿಯುವುದಿಲ್ಲ. ಬನ್ನಿ, ಈ ಸುಲಭ ಹಾಗೂ ರುಚಿಕಟ್ಟಾದ ಖಾದ್ಯವನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ....  

Boneless Chilli Chicken Recipe
 

ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಐದು ನಿಮಿಷಗಳು

ತಯಾರಿಕಾ ಸಮಯ: ಮೂವತ್ತೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಮೂಳೆರಹಿತ ಕೋಳಿಮಾಂಸ - 350 ಗ್ರಾಂ (ಚಿಕ್ಕ ಚೌಕಾಕಾರದಲ್ಲಿ ಕತ್ತರಿಸಿದ್ದು)

*ಮೆಕ್ಕೆಜೋಳದ ಹಿಟ್ಟು (Corn flour)- ½ ಕಪ್

*ಮೊಟ್ಟೆ- 1 (ಗೊಟಾಯಿಸಿದ್ದು)

*ಶುಂಠಿ ಪೇಸ್ಟ್ - ½ ಚಿಕ್ಕಚಮಚ

*ಬೆಳ್ಳುಳ್ಳಿ ಪೇಸ್ಟ್ - ½ ಚಿಕ್ಕ ಚಮಚ

*ಎಣ್ಣೆ : ಹುರಿಯಲು ಅಗತ್ಯವಿರುವಷ್ಟು

*ಉಪ್ಪು ರುಚಿಗನುಸಾರ

*ಈರುಳ್ಳಿ - ಎರಡು ಕಪ್ (ದಪ್ಪನಾಗಿ ಹೆಚ್ಚಿದ್ದು)

*ಸೋಯಾ ಸಾಸ್ : ಒಂದು ದೊಡ್ಡ ಚಮಚ

*ಹಸಿಮೆಣಸು : ಎರಡು : ಮೊದಲು ನಡುವೆ ಸೀಳಿ ಬೀಜಗಳನ್ನೆಲ್ಲಾ ನಿವಾರಿಸಿ ದೊಡ್ಡದಾಗಿ ತುಂಡುಮಾಡಿ.

*ಶಿರ್ಕಾ: ಎರಡು ದೊಡ್ಡಚಮಚ

*ನೀರು: ಅಗತ್ಯಕ್ಕೆ ತಕ್ಕಷ್ಟು   

ಬರೀ 15 ನಿಮಿಷದಲ್ಲಿ ಗರಿ ಗರಿಯಾದ ಕರಿದ ಚಿಕನ್ ಖಾದ್ಯ!

ವಿಧಾನ:

* ಮೊದಲು ಮೆಕ್ಕೆಜೋಳದ ಹಿಟ್ಟು, ಶುಂಟಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೊಟ್ಟೆ ಮತ್ತು ಕೊಂಚ ನೀರನ್ನು ಚೆನ್ನಾಗೆ ಬೆರೆಸಿ. ಈ ಮಿಶ್ರಣವನ್ನು ದಪ್ಪನಾಗಿ ಎಲ್ಲಾ ಕೋಳಿಮಾಂಸದ ತುಂಡುಗಳ ಎಲ್ಲಾ ಬದಿಗಳಿಗೆ ದಪ್ಪನಾಗಿ ಮೆತ್ತಿಕೊಳ್ಳುವಂತೆ ಹಚ್ಚಿ.

* ಒಂದು ದಪ್ಪತಳದ ಬಾಣಲೆಯಲ್ಲಿ ಎಣ್ಣೆಯನ್ನು ಸುರಿದು ಬಿಸಿಮಾಡಿ. ಎಣ್ಣೆ ಹುರಿಯಲು ಸಾಕಷ್ಟು ಬಿಸಿಯಾದ ಬಳಿಕ ಉರಿಯನ್ನು ಮಧ್ಯಮಕ್ಕಿಳಿಸಿ ಇದರಲ್ಲಿ ಕೋಳಿ ಮಾಂಸದ ತುಂಡುಗಳನ್ನು ನಿಧಾನವಾಗಿ ಇಳಿಬಿಟ್ಟು ಹುರಿಯಿರಿ. ನಡುನಡುವೆ ತಿರುವುತ್ತಾ ಎಲ್ಲಾ ಬದಿಗಳು ಚೆನ್ನಾಗಿ ಹುರಿದ ಬಳಿಕ ಎಣ್ಣೆಯಿಂದ ಹೊರತೆಗೆದು ಎಣ್ಣೆಯನ್ನು ಬಸಿಯಿರಿ. ಬಳಿಕ ಬಿಳಿ ಹೀರುಕಾಗದದ ಮೇಲೆ ಹರಡಿ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಿ.

* ಬಳಿಕ ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಎರಡು ದೊಡ್ಡಚಮಚ ಎಣ್ಣೆ ಹಾಕಿ ಬಿಸಿಮಾಡಿ. ಇದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ. ಬಳಿಕ ಹಸಿಮೆಣಸು ಹಾಕಿ ಮೃದುವಾಗುವವರೆಗೆ ತಿರುವಿ.

*ಇದಕ್ಕೆ ಸೋಯಾ ಸಾಸ್, ಶಿರ್ಕಾ ಹಾಗೂ ಹುರಿದಿಟ್ಟ ಕೋಳಿಮಾಂಸದ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಒಂದು ವೇಳೆ ನಿಮಗೆ ರೊಟ್ಟಿಯೊಡನೆ ನಂಜಿಕೊಳ್ಳಲು ಆಗುವಂತೆ ಇರಬೇಕಿದ್ದರೆ ಕೊಂಚ ಹೆಚ್ಚು ನೀರು ಬೆರೆಸಿ ನಡುನಡುವೆ ತಿರುವುತ್ತಾ ಒಂದೆರಡು ನಿಮಿಷ ಕುದಿಸಿ. ಬಿಸಿ ಬಿಸಿ ಇರುವಂತೆಯೇ ಬಡಿಸಿ.

For Quick Alerts
ALLOW NOTIFICATIONS
For Daily Alerts

    English summary

    Chilli Chicken Recipe For Ramzan

    If you want to eat something spicy during the Ramzan time, especially during Iftar, we'd suggest this amazing Chilli Chicken dish. This variation from the other authentic chicken recipes can be tried and this would surely leave the younger generation asking for more. So, have a quick look at the ingredients required and the procedure to follow.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more