Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅರೇ... ಓವನ್,ಮೊಟ್ಟೆ, ಇಲ್ಲದೆಯೂ ಪಿಜ್ಜಾ ಇಷ್ಟು ಸುಲಭದಲ್ಲಿ ಮಾಡಬಹುದಾ?
ಕ್ವಾರೆಂಟೈನ್ ಟೈಮ್ ಬಳಿಕ ಎಲ್ಲರೂ ಮನೆಯಲ್ಲಿಯೇ ಸವಿರುಚಿಯ ಅಡುಗೆಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೊರಗಡೆಯಿಂದ ತರುವ ಆಹಾರ ಎಷ್ಟು ಸುರಕ್ಷಿತವೆಂದು ಹೇಳಲು ಸಾಧ್ಯವಿಲ್ಲ, ಮನೆಯಲ್ಲಿಯೇ ಮಾಡುವುದು ಒಳ್ಳೆಯದು.
ಇಲ್ಲಿ ನಾವು ಅಂಜಲಿ ರಾವ್ ನಮಗೆ ತಿಳಿಸಿಕೊಟ್ಟಿರುವ ವೆಜ್ ಪಿಜ್ಜಾ ರೆಸಿಪಿ ನೀಡಿದ್ದೇವೆ. ನಿಮ್ಮ ಮನೆಯಲ್ಲಿ ಓವನ್ ಇಲ್ಲದಿದ್ದರೂ ಕೂಡ ತಯಾರಿಸಬಹುದಾದ ಪಿಜ್ಜಾ ಇದಾಗಿದೆ.
ಇದನ್ನು ಮಾಡುವ ವಿಧಾನ ನೋಡಿದ ಮೇಲೆ ಇಷ್ಟು ಸುಲಭದಲ್ಲಿ ಪಿಜ್ಜಾ ಮಾಡಬಹುದಾದರೆ ಇವತ್ತೇ ಮಾಡುತ್ತೇನೆ ಎಂದು ಹೊರಟರು ಆಶ್ಚರ್ಯವಿಲ್ಲ, ಅಷ್ಟೊಂದು ಸುಲಭವಾಗಿದೆ ಹಾಗೂ ರುಚಿಯಲ್ಲೂ ಪಿಜ್ಜಾ ರೆಸ್ಟೋರೆಂಟ್ಗಳಲ್ಲಿ ದೊರೆಯುವಂತೆಯೇ ಇದೆ.

ಈ ಪಿಜ್ಜಾ ಮಾಡುವ ವಿಧಾನ ಸುಲಭವಾಗಿದ್ದು ಇಲ್ಲಿ ಇದನ್ನು ಮಾಡುವ ವಿಧಾನವನ್ನು ಸುಲಭವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ:
Recipe By: Reena TK
Recipe Type: Pizza
Serves: 2
-
ಬೇಕಾಗುವ ಸಾಮಗ್ರಿ
2 ಕಪ್ ಮೈದಾ
1ಕಪ್ ಹದ ಬಿಸಿ ಹಾಲು
1 ಚಮಚ ಸಕ್ಕರೆ
ಅರ್ಧ ಚಮಚ ಉಪ್ಪು
2 ಚಮಚ ಯೀಸ್ಟ್
1 ಚಮಚ ಬೆಣ್ಣೆ
ತರಕಾರಿಗಳು(ನಿಮಗೆ ಇಷ್ಟವಿರುವುದು ಬಳಸಬಹುದು)
ಕೆಂಪು, ಹಸಿರು, ಹಳದಿ ಬಣ್ಣ ದುಂಡು ಮೆಣಸು
ಈರುಳ್ಳಿ
ಮಿಶ್ರವಾದ ಹರ್ಬ್ಸ್ ಅಥವಾ ಪಿಜ್ಜಾ ಸೀಸನಿಂಗ್ (Optional)
ರುಚಿಗೆ ತಕ್ಕ ಉಪ್ಪು
ಎಷ್ಟು ಸುಲಭವಾಗಿದೆ ಅಲ್ವಾ....ಇದನ್ನು ಮನೆಯಲ್ಲಿ ಒಮ್ಮೆ ಮಾಡಿದರೆ ಮತ್ತೆ ಹೊರಗಡೆಯ ಪಿಜ್ಜಾ ಬೇಕೆಂದು ಅನಿಸುವುದೂ ಇಲ್ಲ, ಅಲ್ಲದೆ ಯಾವುದೇ ಕೊರೊನಾವೈರಸ್ ಭಯವಿಲ್ಲದೆ ಇದನ್ನು ಸವಿಯಬಹುದು.
-
ಮಾಡುವುದು ಹೇಗೆ?
* ಮೊದಲಿಗೆ ಹಾಲು, ಸಕ್ಕರೆ, ಯೀಸ್ಟ್ ಅನ್ನು ಒಂದು ಬೌಲ್ಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ 5 ನಿಮಿಷ ಇಡಿ.
* 5 ನಿಮಿಷ ನಂತರ ಯೀಸ್ಟ್, ಹಾಲು, ಸಕ್ಕರೆ ಮಿಶ್ರಣವನ್ನು ಒಂದು ದೊಡ್ಡ ಬೌಲ್ಗೆ ಹಾಕಿ ಅದಕ್ಕೆ ಮೈದಾ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
*ಮೃದುವಾದಾಗ ಈ ಹಿಟ್ಟಿಗೆ ಒಂದು ಅಥವಾ 2 ಚಮಚ ಬೆಣ್ಣೆ ಹಾಕಿ ಪುನಃ ಮಿಶ್ರ ಮಾಡಿ, ಹೀಗೆ 3 ನಿಮಿಷ ಚೆನ್ನಾಗಿ ಮಿಶ್ರ ಮಾಡಿ, ಒಂದು ಗಂಟೆ ಕಾಲ ಬಿಡಿ.
* ಅದೇ ಸಮಯದಲ್ಲಿ ಪಿಜ್ಜಾ ಟಾಪಿಂಗ್ ರೆಡಿ ಮಾಡಿಟ್ಟುಕೊಳ್ಳಿ.
* ಪ್ಯಾನ್ಗೆ 2 ಚಮಚ ಬೆಣ್ಣೆ ಹಾಕಿ, ತರಕಾರಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಪಿಜ್ಜಾ ಸೀಸನಿಂಗ್
* ಮತ್ತೊಂದು ಬೌಲ್ನಲ್ಲಿ ಟೊಮೆಟೊ ಕೆಚಪ್ ಹಾಕಿ ಅದಕ್ಕೆ ಹಬ್ಸ್ ಹಾಕಿ ಮಿಕ್ಸ್ ಮಾಡಿ ಇಡಿ.
* ಒಂದು ಗಂಟೆಯ ಬಳಿಕ ಪಿಜ್ಜಾ ಹಿಟ್ಟು ತೆಗೆದು ಅದನ್ನು ಒಂದು ತಟ್ಟೆಯಲ್ಲಿ ಹಾಕಿ ಚೆನ್ನಾಗಿ ತಟ್ಟಿ, ನಂತರ ಫೋರ್ಕ್ ಸ್ಪೂನ್ ಬಳಸಿ ರಂಧ್ರಗಳನ್ನು ಮಾಡಿ.
* ಇದರ ಮೇಲೆ ಕೆಚಪ್ ಹಾಕಿ ಹರಡಿ, ನಂತರ ಫ್ರೈ ಮಾಡಿಟ್ಟ ತರಕಾರಿ ಹರಡಿ.
* ಈಗ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದರಲ್ಲಿ ಒಂದು ಚಿಕ್ಕ ಸ್ಟೀಲ್ ಬೌಲ್ ಉಲ್ಟಾ ಹಾಕಿ ಅದರ ಮೇಲೆ ಪಿಜ್ಜಾ ಬೇಸ್ ಇಟ್ಟು40-45 ನಿಮಿಷ ಪ್ಯಾನ್ ಬಾಯಿ ಮುಚ್ಚಿ ಬೇಯಿಸಬೇಕು. ಇಷ್ಟಾದರೆ ಪಿಜ್ಜಾ ರೆಡಿ.
ಎಷ್ಟು ಸುಲಭವಾಗಿದೆ ಅಲ್ವಾ....ಇದನ್ನು ಮನೆಯಲ್ಲಿ ಒಮ್ಮೆ ಮಾಡಿದರೆ ಮತ್ತೆ ಹೊರಗಡೆಯ ಪಿಜ್ಜಾ ಬೇಕೆಂದು ಅನಿಸುವುದೂ ಇಲ್ಲ, ಅಲ್ಲದೆ ಯಾವುದೇ ಕೊರೊನಾವೈರಸ್ ಭಯವಿಲ್ಲದೆ ಇದನ್ನು ಸವಿಯಬಹುದು.
- * ಇಲ್ಲಿ ತರಕಾರಿ ಬಳಸಿ ಪಿಜ್ಜಾ ಮಾಡಿದ್ದಾರೆ. ನೀವು ಬೇಕಿದ್ದರೆ, ಮಶ್ರೂಮ್, ಚಿಕನ್ನಿಂದಲೂ ಪಿಜ್ಜಾ ತಯಾರಿಸಬಹುದು.
- ಸರ್ವ್ - 2
- ಕ್ಯಾಲೋರಿ - 102 ಕ್ಯಾ
- ಕೊಬ್ಬು - 11.52ಗ್ರಾಂ
- ಕಾರ್ಬ್ಸ್ - 31ಗ್ರಾಂ
- ನಾರಿನಂಶ - 3 ಗ್ರಾಂ




Click it and Unblock the Notifications