Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ವಿಶೇಷ: ನಿಪ್ಪಟ್ಟು ರೆಸಿಪಿ
ನಿಪ್ಪಟ್ಟು ದಕ್ಷಿಣ ಭಾರತದ ಒಂದು ಸಾಂಪ್ರದಾಯಿಕ ತಿನಿಸು. ಹಬ್ಬ, ಉತ್ಸವ ಹಾಗೂ ದೀಪಾವಳಿಯ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ತಮಿಳುನಾಡಿನಲ್ಲಿ ಇದನ್ನು ಥಟೈ ಎಂದು ಕರೆಯುತ್ತಾರೆ. ವಿಶೇಷ ಸಂದರ್ಭದಲ್ಲಿ ತಯಾರಿಸುವ ಈ ಕುರುಕಲು ತಿಂಡಿಗೆ ಆಂಧ್ರಪ್ರದೇಶದಲ್ಲಿ ಚೆಕ್ಕಲು ಎಂದು ಕರೆಯುತ್ತಾರೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ವಿವಾಹ ಹಾಗೂ ಉತ್ಸವಗಳ ಸಂದರ್ಭದಲ್ಲಿ ಒಂದು ಕಡ್ಡಾಯವಾದ ಲಘು ಆಹಾರವನ್ನಾಗಿ ತಯಾರಿಸುತ್ತಾರೆ. ಅಕ್ಕಿ, ಮಸಾಲೆ ಪದಾರ್ಥಗಳ ಮಿಶ್ರಣದಲ್ಲಿ ತಯಾರಿಸುವ ಈ ತಿಂಡಿನ್ನು ಸವಿದರೆ ಆಹ್ಲಾದಕರ ಅನುಭವ ಉಂಟಾಗುವುದು. ಇದನ್ನು ಒಮ್ಮೆ ತಯಾರಿಸಿಕೊಂಡರೆ ಬಹಳ ದಿನಗಳ ಕಾಲ ಸಂಗ್ರಹಿಸಿಡಬಹುದು.
ಹಿಟ್ಟನ್ನು ತಯಾರಿಸಿಕೊಂಡರೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹಬ್ಬದ ಸಂದರ್ಭದಲ್ಲಿ ಅಥವಾ ನಿತ್ಯದ ಚಹಾ-ಕಾಫಿ ಸವಿಯಲು ಏನಾದರೂ ಕುರುಕಲು ತಿಂಡಿಯನ್ನು ತಯಾರಿಸುವ ಹವಣಿಕೆಯಲ್ಲಿದ್ದರೆ ಇಲ್ಲಿದೆ ನೋಡಿ ವಿವವರವಾದ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆ.

Recipe By: ಕಾವ್ಯಶ್ರೀ ಎಸ್.
Recipe Type: ಕುರುಕಲು ತಿಂಡಿ
Serves: 12-14 ನಿಪ್ಪಟ್ಟು
-
ಹುರಿದ ಹುರಿಗಡಲೆ -1/2 ಕಪ್
ಶೇಂಗಾ/ಕಡಲೇಕಾಯಿ - 1/2 ಕಪ್
ಅಕ್ಕಿ ಹಿಟ್ಟು - 3/4 ಬೌಲ್
ಚಿರೋಟಿ/ಸೂಜಿ ರವಾ - 2 ಟೇಬಲ್ ಚಮಚ
ಮೈದಾ - 1 ಟೇಬಲ್ ಚಮಚ
ಖಾರದ ಪುಡಿ - 1, 1/2 ಟೇಬಲ್ ಚಮಚ
ಉಪ್ಪು - 3/4 ಟೇಬಲ್ ಚಮಚ
ಇಂಗು - 1/4 ಟೇಬಲ್ ಚಮಚ
ಎಣ್ಣೆ - 2 ಟೇಬಲ್ ಚಮಚ + ಕರಿಯಲು ಮತ್ತು ಸವರಲು
ನೀರು - 1,1/2 ಕಪ್
-
1. ಅರ್ಧ ಕಪ್ ಹುರಿದ ಹುರಿಗಡಲೆಯನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ.
2. ಅರ್ಧ ಕಪ್ ಕಡಲೇಬೀಜವನ್ನು ಸೇರಿಸಿ ಮತ್ತು ಒರಟಾಗಿ ರುಬ್ಬಿ, ಅದನ್ನು ಪಕ್ಕಕ್ಕೆ ಇಡಿ.
3. ಮಿಶ್ರಣದ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಹಾಕಿರಿ.
4. ಎರಡು ಟೇಬಲ್ ಚಮಚ ಸೂಜಿ ರವಾ ಮತ್ತು ಮೈದಾ ಹಿಟ್ಟನ್ನು ಸೇರಿಸಿ.
5. ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ.
6. ನಂತರ ಇಂಗನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
7. ಪುಡಿಮಾಡಿಕೊಂಡ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
8. ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.
9. ಎರಡು ನಿಮಿಷ ಎಣ್ಣೆಯನ್ನು ಬಿಸಿ ಮಾಡಿ.
10. ಇದನ್ನು ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
11. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ಹಿಟ್ಟನ್ನು ಕಲಸಿ, ಸಾಮಾನ್ಯ ಮೃದು ಪ್ರಮಾಣದಲ್ಲಿ ಹಿಟ್ಟನ್ನು ಕಲಸಿರಬೇಕು.
12. ಒಂದು ಪ್ಲಾಸ್ಟಿಕ್ ಶೀಟ್/ಪೇಪರ್ ತೆಗೆದುಕೊಂಡು, ಅದಕ್ಕೆ ಎಣ್ಣೆಯನ್ನು ಸವರಿ.
13. ಹಿಟ್ಟಿನ ಸಣ್ಣ ಸಣ್ಣ ಉಂಡೆಯನ್ನು ತೆಗೆದುಕೊಂಡು ಅವುಗಳನ್ನು ಪ್ಲಾಸ್ಟಿಕ್ ಶೀಟ್‍ಮೇಲಿಟ್ಟು, ವೃತ್ತಾಕಾರದಲ್ಲಿ ಲಟ್ಟಿಸಿ/ತಟ್ಟಿರಿ.
14. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
15. ಲಟ್ಟಿಸಿಕೊಂಡ ಹಿಟ್ಟನ್ನು ಪ್ಲಾಸ್ಟಿಕ್ ಶೀಟ್‍ನಿಂದ ನಾಜೂಕಾಗಿ ತೆಗೆದು, ಎಣ್ಣೆಯಲ್ಲಿ ಬಿಡಬೇಕು.
16. ಒಂದು ನಿಮಿಷಗಳ ಕಾಲ ಎರಡು ಭಾಗದಲ್ಲೂ ಚೆನ್ನಾಗಿ ಬೇಯುವಂತೆ ತಿರುಗಿಸಬೇಕು.
17. ಅವು ಹೊಂಬಣ್ಣಕ್ಕೆ ಬರುವ ತನಕ ಕರಿಯುತ್ತಲೇ ಇರಬೇಕು.
18. ಎಣ್ಣೆಯಿಂದ ತೆಗೆದು, ಅದು ಸ್ವಲ್ಪ ತಣ್ಣಗಾದಮೇಲೆ ಸವಿಯಲು ನೀಡಿ.
- 1. ಕಡಲೇಬೀಜದ ಅಲರ್ಜಿ ಇದ್ದರೆ ಕಡಲೇ ಬೀಜದ ಬದಲಿಗೆ ಬಾದಾಮಿಯನನ್ನು ಬಳಸಬಹುದು.
- 2. ಹಿಟ್ಟಿನ ಮಿಶ್ರಣದ ಮುದ್ದೆ ಅಕ್ಕಿ ರೊಟ್ಟಿಯ ಹಿಟ್ಟಿನ ಹದಕ್ಕೆ ಇರಬೇಕು.
- ಸರ್ವಿಂಗ್ ಸೈಜ್ - 1 ನಿಪ್ಪಟ್ಟು
- ಕ್ಯಾಲೋರಿ - 70 ಕ್ಯಾಲ್
- ಪ್ರೋಟೀನ್ - 2 ಗ್ರಾಂ.
- ಕಾರ್ಬೋಹೈಡ್ರೇಟ್ - 8 ಗ್ರಾಂ.
- ಸಕ್ಕರೆ - 3 ಗ್ರಾಂ.
ನಿಪ್ಪಟ್ಟು ರೆಸಿಪಿ
1. ಅರ್ಧ ಕಪ್ ಹುರಿದ ಹುರಿಗಡಲೆಯನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ.

2. ಅರ್ಧ ಕಪ್ ಕಡಲೇಬೀಜವನ್ನು ಸೇರಿಸಿ ಮತ್ತು ಒರಟಾಗಿ ರುಬ್ಬಿ, ಅದನ್ನು ಪಕ್ಕಕ್ಕೆ ಇಡಿ.

3. ಮಿಶ್ರಣದ ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ಹಾಕಿರಿ.

4. ಎರಡು ಟೇಬಲ್ ಚಮಚ ಸೂಜಿ ರವಾ ಮತ್ತು ಮೈದಾ ಹಿಟ್ಟನ್ನು ಸೇರಿಸಿ.

5. ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ.

6. ನಂತರ ಇಂಗನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

7. ಪುಡಿಮಾಡಿಕೊಂಡ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

8. ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.

9. ಎರಡು ನಿಮಿಷ ಎಣ್ಣೆಯನ್ನು ಬಿಸಿ ಮಾಡಿ.

10. ಇದನ್ನು ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

11. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ಹಿಟ್ಟನ್ನು ಕಲಸಿ, ಸಾಮಾನ್ಯ ಮೃದು ಪ್ರಮಾಣದಲ್ಲಿ ಹಿಟ್ಟನ್ನು ಕಲಸಿರಬೇಕು.

12. ಒಂದು ಪ್ಲಾಸ್ಟಿಕ್ ಶೀಟ್/ಪೇಪರ್ ತೆಗೆದುಕೊಂಡು, ಅದಕ್ಕೆ ಎಣ್ಣೆಯನ್ನು ಸವರಿ.

13. ಹಿಟ್ಟಿನ ಸಣ್ಣ ಸಣ್ಣ ಉಂಡೆಯನ್ನು ತೆಗೆದುಕೊಂಡು ಅವುಗಳನ್ನು ಪ್ಲಾಸ್ಟಿಕ್ ಶೀಟ್‍ಮೇಲಿಟ್ಟು, ವೃತ್ತಾಕಾರದಲ್ಲಿ ಲಟ್ಟಿಸಿ/ತಟ್ಟಿರಿ.

14. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

15. ಲಟ್ಟಿಸಿಕೊಂಡ ಹಿಟ್ಟನ್ನು ಪ್ಲಾಸ್ಟಿಕ್ ಶೀಟ್‍ನಿಂದ ನಾಜೂಕಾಗಿ ತೆಗೆದು, ಎಣ್ಣೆಯಲ್ಲಿ ಬಿಡಬೇಕು.

16. ಒಂದು ನಿಮಿಷಗಳ ಕಾಲ ಎರಡು ಭಾಗದಲ್ಲೂ ಚೆನ್ನಾಗಿ ಬೇಯುವಂತೆ ತಿರುಗಿಸಬೇಕು.

17. ಅವು ಹೊಂಬಣ್ಣಕ್ಕೆ ಬರುವ ತನಕ ಕರಿಯುತ್ತಲೇ ಇರಬೇಕು.

18. ಎಣ್ಣೆಯಿಂದ ತೆಗೆದು, ಅದು ಸ್ವಲ್ಪ ತಣ್ಣಗಾದಮೇಲೆ ಸವಿಯಲು ನೀಡಿ.

Click it and Unblock the Notifications