Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶಿಷ್ಟ ಹೊಸ ರೀತಿಯ ಪುಳಿಯೋಗರೆ ರೆಸಿಪಿ..! ಸಖತ್ ಟೇಸ್ಟಿ..!
ನೀವು ಸಾಮಾನ್ಯವಾಗಿ ಅನ್ನ ಉಳಿದರೆ ಇಲ್ಲವೆ ಹೆಚ್ಚಾಗಿದ್ದರೆ ಅದರಿಂದ ಬೆಳಗ್ಗೆ ಇಲ್ಲವೆ ಸಂಜೆ ಖಾದ್ಯಗಳ ಮಾಡುತ್ತೀರಿ. ಅದರಲ್ಲಿ ಚಿತ್ರಾನ್ನ, ಪುಳಿಯೋಗರೆ ಹೆಚ್ಚು ಫೇಮಸ್. ಇಲ್ಲದಿದ್ದರೆ ಸಮಯ ಉಳಿಸಲು ಇಲ್ಲವೆ ಬೆಳಗ್ಗೆ ಗಡಿಬಿಡಿಯಾಗುವ ಹಿನ್ನೆಲೆ ಬೇಗ ತಿಂಡಿ ಮಾಡಲು ಚಿತ್ರಾನ್ನ, ಪುಳಿಯೋಗರೆ ಮಾಡುತ್ತೇವೆ.
ಈ ಪುಳಿಯೋಗರೆ ಮಾಡುವಾಗ ನಾವು ಮನೆಯಲ್ಲಿ ಅದರ ಗೊಜ್ಜು ಮಾಡಕೊಳ್ಳುವುದು ಬಹಳ ಅಪರೂಪ ಏಕೆಂದರೆ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಪುಳಿಯೋಗರೆ ಪೌಡರ್ ಇಂದು ಸಿಗುತ್ತಿವೆ. ಹೀಗಾಗಿ ಈ ಪೌಡರ್‌ಗಳ ಬಳಸಿಕೊಂಡು ನಾವು ಪುಳಿಯೋಗರೆ ಮಾಡುತ್ತೇವೆ. ಪುಳಿಯೋಗರೆ ಒಗ್ಗರಣೆ ಹಾಕಿ ಮಾಡುವುದರಿಂದ ಹಾಗೂ ಅದರ ಮಾಸಾಲೆ ಪದಾರ್ಥಗಳ ಕಾರಣಕ್ಕೆ ತುಂಬಾ ರುಚಿ ಎನಿಸುತ್ತೆ.

ಹಾಗಾದರೆ ನಾವಿಂದು ಹೊಸ ವಿಧದ ಪುಳಿಯೋಗರೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಈ ಹೊಸ ರೀತಿಯ ಪುಳಿಯೋಗರೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಪುಳಿಯೋಗರೆ ಮಾಡುವ ಪಾಕವಿಧಾನವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಹೊಸ ರೀತಿಯ ಪುಳಿಯೋಗರೆ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ- 3 ಕಪ್
- ಸಾಸಿವೆ
- ಕರಿಬೇವಿನ ಸೊಪ್ಪು- ಅರ್ಧ ಕಪ್
- ಕಡಲೆ ಬೀಜ- ಅರ್ಧ ಕಪ್
- ಕಡಲೆ ಬೇಳೆ
- ಉದ್ದಿನ ಬೇಳೆ
- ಹಸಿ ಮೆಣಸು
- ಅರಶಿನ ಪುಡಿ
- ಹುಣಸೆ ಹುಳಿ
- ಉಪ್ಪು
- ಒಣ ಮೆಣಸು
- ಬೆಳ್ಳುಳ್ಳಿ
ಹೊಸ ರುಚಿಯ ಪೊಳಿಯೋಗರೆ ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಅದಕ್ಕೆ ಕರಬೇವಿನ ಸೊಪ್ಪು ಹಾಕಿ ಫ್ರೈ ಮಾಡಿ. ಕರಿಬೇವಿನ ಸೊಪ್ಪು ಜಾಸ್ತಿ ತೆಗೆದುಕೊಳ್ಳಿ. ಅದನ್ನು ಚೆನ್ನಾ ಫ್ರೈ ಮಾಡಿದ ಬಳಿಕ ಅದನ್ನು ತೆಗೆದು ಬದಿಗೆ ಇಟ್ಟುಕೊಳ್ಳಿ. ಬಳಿಕ ಇದೇ ಪಾತ್ರೆಗೆ ಕಡಲೆ ಬೀಜ ಹಾಕಿ ಡ್ರೈ ಮಾಡಿ ಎತ್ತಿಟ್ಟುಕೊಳ್ಳಿ.
ನಂತರ ಅದೇ ಪಾತ್ರೆಗೆ ಒಗ್ಗರಣೆ ಹಾಕಿಕೊಳ್ಳಿ. ಇದಕ್ಕಾಗಿ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಹಸಿಮೆಣಸು, ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅರಶಿನ ಹಾಕಿ ಮಿಶ್ರಣ ಮಾಡಿ. ನೆನೆಸಿಟ್ಟಿರುವ ಹುಣಸೆ ಹುಳಿಯನ್ನು ಅದಕ್ಕೆ ಹಾಕಿ (ಒಂದು ದೊಡ್ಡ ನಲ್ಲಿಕಾಯಿ ಗಾತ್ರದ ಹುಳಿ).
ಇನ್ನೊಂದು ಕಡೆ ಸಣ್ಣ ಮಿಕ್ಸರ್ ಜಾರ್‌ಗೆ ಈ ಮೊದಲು ಫ್ರೈ ಮಾಡಿ ಇಟ್ಟಿದ್ದ ಕರಿಬೇವು, ಬೆಳ್ಳುಳ್ಳಿ, ಸ್ವಲ್ಪ ಸಾಸಿವೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇನ್ನು ಒಲೆ ಮೇಲೆ ಕುದಿಯುತ್ತಿರುವ ಗೊಜ್ಜಿಗೆ ಈ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು 5 ರಿಂದ 6 ನಿಮಿಷಗಳ ಕಾಲ ಮಿಶ್ರಣ ಮಾಡುತ್ತಾ ಇರಿ. ಈ ಗೊಜ್ಜನ್ನು ಅಷ್ಟೂ ಪುಳಿಯೋಗರೆಗೆ ಬಳಸಬೇಕೆಂದಿಲ್ಲ. ಬೇಕಾದರೆ ಈ ಗೊಜ್ಜನ್ನು ಎತ್ತಿಡಬಹುದು.
ಸದ್ಯ ಈಗ ರೆಡಿಯಾಗಿರುವ ಗೊಜ್ಜಿಗೆ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ನೋಡಿಕೊಂಡು ಹಾಕಿಕೊಳ್ಳಿ. ಈ ಖಾದ್ಯವನ್ನು ಸಂಜೆ, ಬೆಳಗ್ಗೆ ಯಾವಾಗ ಬೇಕಾದರು ಸವಿಯಬಹುದು. ಗೊಜ್ಜು ಸ್ವಲ್ಪ ಹೆಚ್ಚಾಗಿ ಮಾಡಿಕೊಂಡರೆ ಯಾವಾಗ ಬೇಕಾದರೂ ಈ ಪುಳಿಯೋಗರೆ ಸವಿಯಬಹುದು. ಗೊಜ್ಜನ್ನು ಫ್ರಿಡ್ಜ್‌ನಲ್ಲಿಟ್ಟು ಮತ್ತೆ ಮತ್ತೆ ಈ ಪುಳಿಯೋಗರೆ ಮಾಡಬಹುದು.
ಈ ಕರಿಬೇವಿನ ಪುಳಿಯೋಗರೆಯ ಜೊತೆಗೆ ಚಟ್ನಿ, ಗೊಜ್ಜು, ಪಲ್ಯ ಹಾಕಿಕೊಂಡು ಸವಿಯಬಹುದು. ಇದರ ಜೊತೆ ಟೊಮೆಟೋ ಇಲ್ಲವೆ ತೆಂಗಿನಕಾಯಿ ಚಟ್ನಿ ಸವಿಯಲು ಬಹಳ ರುಚಿ ನೀಡುತ್ತದೆ.



Click it and Unblock the Notifications