Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿಗೆ ಸ್ಪೆಷಲ್ ರೆಸಿಪಿ: ಬೇವಿನ ಹೂವಿನ ಚಟ್ನಿ, ಒಂದು ವಾರ ಇಟ್ಟರೂ ಹಾಳಾಗಲ್ಲ
ಹೊಸತನ, ಹೊಸ ಸಂಭ್ರಮ ಹೊತ್ತು ಯುಗಾದಿ ಬರುತ್ತಿದೆ. ಯುಗಾದಿ ಅಂದರೆ ಬೇವಿನ ಎಲೆ, ಬೆಲ್ಲ, ಮಾವಿನಕಾಯಿ ಇರಲೇಬೇಕು. ಬೇವು- ಬೆಲ್ಲ ಕೊಟ್ಟು ಶುಭಾಶಯ ಕೋರುತ್ತೇವೆ. ಆರೋಗ್ಯದ ದೃಷ್ಟಿಯಿಂದ ಬೇವು ಬೆಲ್ಲ ತುಂಬಾನೇ ಒಳ್ಳೆಯದು. ನಾವಿಲ್ಲಿ ಬೇವಿನ ಹೂವಿನ ಚಟ್ನಿ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
1/2 ಕಪ್ ಕಹಿ ಬೇವಿನ ಗಿಡದ ಹೂ
10 ಒಣ ಮೆಣಸು
ಸ್ವಲ್ಪ ಹುಣಸೆಹಣ್ಣು(ಚಿಕ್ಕ ನಿಂಬೆಹಣ್ಣಿನ ಅರ್ಧದಷ್ಟು ಗಾತ್ರದ)
1 ಚಮಚ ಬೆಲ್ಲ
1 ಚಮಚ ಎಣ್ಣೆ
ಉಪ್ಪು
ಮಾಡುವ ವಿದಾನ
ಮೊದಲಿಗೆ ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಕಹಿ ಬೇವಿನ ಗಿಡದ
ಹೂವುಗಳನ್ನು ಹಾಕಿ ಫ್ರೈ ಮಾಡಿ. ಇದನ್ನು ಫ್ರೈ ಮಾಡಲು ಸ್ವಲ್ಪ ಸಮಯ ಹಿಡಿಯುತ್ತೆ,
ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಪ್ರೈ ಮಾಡಿ.
ನಂತರ ಅದನ್ನು ತಟ್ಟೆಗೆ ಹಾಕಿ ಅದೇ ಬಾಣಲೆ ಅಥವಾ ಪಾತ್ರೆಗೆ ಒಂದು ಚಮಚ ಎಣ್ಣೆ
ಹಾಕಿ ಅದರಲ್ಲಿ ಒಣ ಮೆಣಸುಗಳನ್ನು 2-3 ನಿಮಿಷ ರೋಸ್ಟ್ ಮಾಡಿ.
ನಂತರ ಒಂದು ತಟ್ಟೆಯಲ್ಲಿ ಹಾಕಿ
ಒಣಮೆಣಸು ತಣ್ಣಗಾದ ಮೇಲೆ ಉಪ್ಪು, ಬೆಲ್ಲ, ಹುಣಸೆಹಣ್ಣು ಸೇರಿಸಿ ಗಟ್ಟಿ ಚಟ್ನಿ
ಮಾಡಿ.
ಇತರ ರುಚಿಯಲ್ಲಿಯೂ ಟ್ರೈ ಮಾಡಿ
ನೀವು ಬೇಕಾದರೆ ತೆಂಗಿನ ತುರಿ ಹಾಕಿ ಟ್ರೈ ಮಾಡಬಹುದು
ತೆಂಗಿನತುರಿಗೆ ರೋಸ್ಟ್ ಮಾಡಿದ ಉದ್ದಿನ ಬೇಳೆ ಸೇರಿಸಿ ಮಾಡಬಹುದು.
ಹುಣಸೆಹಣ್ಣಿನ ಬದಲಿಗೆ ಮಾವಿನಕಾಯಿ ಹಾಕಿ ಮಾಡಬಹುದು.
ಇದನ್ನು ಎಷ್ಟು ಸಮಯ ಬಳಸಬಹುದು
ನೀವು ರೋಸ್ಟ್ ಮಾಡಿದ ಹೂ, ಒಣ ಮೆಣಸು ಹಾಕಿ ಮಾಡಿರುವ ಚಟ್ನಿಯನ್ನು ಒಂದು
ವಾರದವರೆಗೆ ಇಟ್ಟು ಬಳಸಬಹುದು.
ಫ್ರಿಡ್ಜ್ನಲ್ಲಿ ಆದರೆ ಒಂದು ತಿಂಗಳವರೆಗೆ ಇಟ್ಟು ಬಳಸಬಹುದು.
ಬೇವಿನ ಹೂವಿನ ಪ್ರಯೋಜನಗಳು
ಬೇವಿನ ಎಲೆ ತುಂಬಾನೇ ಕಹಿಯಾದರೆ ಬೇವಿನ ಹೂವು ಕಹಿ ಇರುವುದಿಲ್ಲ , ಈ ಹೂವು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದು ಮಲ್ಲಿಗೆಯಂತೆ ಸುವಾಸನೆಯಿಂದ ಕೂಡಿರುತ್ತದೆ. ಇದನ್ನು ಒಣಗಿಸಿಟ್ಟು ಬಳಸುತ್ತಾರೆ ಅಥವಾ ತಾಜಾ ಹೂವು ಕೂಡ ಬಳಸಬಹುದು, ಇದನ್ನು ಯುಗಾದಿ ಪಚಡಿಯಲ್ಲಿ ಬಳಸಲಾಗುವುದು.
ಈ ಬೇವಿನ ಹೂವು ಸುಸ್ತು, ಹೊಟ್ಟೆ ಹುಳು ಈ ಬಗೆಯ ಸಮಸ್ಯೆ ಬಗೆಹರಿಯಲು ಸಹಕಾರಿ. ಇದು ತ್ವಚೆ ಸಮಸ್ಯೆ, ತಲೆ ನೋವು ಈ ಬಗೆಯ ಸಮಸ್ಯೆಗೆ ರಾಮ ಬಾಣ, ಆಯುರ್ವೇದದ ಪ್ರಕಾರ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಇದನ್ನು ಸೇವಿಸುವುದರಿಂದ ಬೇವಿನ ಎಲೆಯಷ್ಟೇ ಪರಿಣಾಮ, ಈ ಹೂವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ದೇಹದ ರಕ್ತದಲ್ಲಿ ಮಧುಮೇಹ ನಿಯಂತ್ರಿಸಲು ಸಹಕಾರಿ.
- ಬೇವಿನ ಎಲೆ ಹೂವು ಹೊಟ್ಟೆಗೆ ಸೇರಿದಾಗ ಅಲರ್ಜಿ, ಹೊಟ್ಟೆ, ಕೈಯಲ್ಲಿ ತುರಿದ ಸಮಸ್ಯೆ ಈ ಬಗೆಯ ಸಮಸ್ಯೆ ಕಡಿಮೆ ಮಾಡಲು ಸಹಕಾರಿ. ತ್ವಚೆ ಆರೋಗ್ಯಕ್ಕೆ ಒಳ್ಳೆಯದು. ಕಜ್ಜಿ, ಗಾಯ ಈ ರೀತಿ ಏನಾದರೂ ಇದ್ದರೆ ಬೇಗನೆ ಗುಣಮುಖರಾಗಲು ಸಹಕಾರಿ.
- ಬೇವಿನ ಹೂವು ಅನ್ನು ಒನಣಸಿ ಪುಡಿ ಮಾಡಿಟ್ಟು ಇದನ್ನು ಜೇನು ಜೊತೆಗೆ ತೆಗೆದುಕೊಂಡರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
- ಮಕ್ಕಳು ಈ ಜಂಕ್ ಫುಡ್ ಹೆಚ್ಚು ತಿನ್ನುವುದರಿಂದ ಜಂತು ಹುಳು ಉಂಟಾಗಿರುತ್ತದೆ. ಈ ಹೂವನ್ನು ಸೇವಿಸುವುದರಿಂದ ಹೊಟ್ಟೆ ಹುಳು ಹೋಗಲಾಡಿಸಲು ಸಹಕಾರಿ. ಮಕ್ಕಳಿಗೆ ಈ ಹೂವನ್ನು ಒಣಗಿಸಿಟ್ಟು ಅದನ್ನು ಜೇನಿನಲ್ಲಿ ಬೆರೆಸಿ ತಿಂಗಳಿಗೊಮ್ಮೆ ಕೊಟ್ಟರೆ ತುಂಬಾನೇ ಒಳ್ಳೆಯದು.
- ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
- ಇದನ್ನು ತಿನ್ನುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುವುದು.



Click it and Unblock the Notifications