Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ ಪೂಜೆಗೆ ಮೃದುವಾದ ಸಜ್ಜಕ ಹೋಳಿಗೆ: ಮಾಡೋದು ತುಂಬಾ ಸುಲಭ
ನವರಾತ್ರಿ ಸ್ಪೆಷಲ್ ಸಿಹಿ ಇದು. ಬಾಯಲ್ಲಿ ಕರಗುವ ಸಜ್ಜಕ ಹೋಳಿಗೆ. ನವರಾತ್ರಿ ಪೂಜೆಗೆ (Navratri Special) ಈ ಹೋಳಿಗೆ ಒಮ್ಮೆ ಮಾಡಿ ನೋಡಿ. ಹಬ್ಬದ ದಿನಗಳಲ್ಲಿ ನಮ್ಮ ಮನಸ್ಸಿಗೆ ಮೊದಲು ಬರುವ ಸಿಹಿ ತಿಂಡಿ ಎಂದರೆ ಹೋಳಿಗೆ. ಇದಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ಸಜ್ಜಕ ಹೋಳಿಗೆ (Sajaka Holige) ತನ್ನ ವಿಶಿಷ್ಟ ರುಚಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹೋಳಿಗೆಯ ಹೂರಣವನ್ನು ರವೆಯಿಂದ ತಯಾರಿಸಲಾಗುತ್ತದೆ. ಇದು ಬಾಯಲ್ಲಿ ಕರಗುವಂತಹ ಮೃದುತ್ವ ಮತ್ತು ಅದ್ಭುತ ರುಚಿ ನೀಡುತ್ತದೆ.
ನವರಾತ್ರಿ, ದೀಪಾವಳಿ ಅಥವಾ ಯಾವುದೇ ವಿಶೇಷ ಹಬ್ಬದ ಸಂದರ್ಭಗಳಲ್ಲಿ ಈ ಸಜ್ಜಕದ ಹೋಳಿಗೆಯನ್ನು ತಯಾರಿಸಬಹುದು. ಈ ಮೂಲಕ ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಬಹುದು. ಇದನ್ನು ಮನೆಯಲ್ಲೇ ಸರಳ ಹಾಗೂ ಸುಲಭ ರೀತಿಯಲ್ಲಿ ತಯಾರಿಸುವ ವಿಧಾನವನ್ನು (Sajaka Holige Recipe) ಈ ಲೇಖನದಲ್ಲಿ ತಿಳಿಸಲಾಗಿದೆ.

ಸಜ್ಜಕ ಹೋಳಿಗೆಗೆ ಅಗತ್ಯವಿರುವ ಸಾಮಗ್ರಿಗಳು
• ಸಣ್ಣ ರವೆ
• ಸಕ್ಕರೆ
• ನೀರು
• ತುಪ್ಪ
• ಏಲಕ್ಕಿ ಪುಡಿ
• ಮೈದಾ ಹಿಟ್ಟು
• ರವೆ ಅಥವಾ ಸಣ್ಣ ರವೆ
• ಅರಿಶಿನ ಪುಡಿ
• ಉಪ್ಪು
• ಎಣ್ಣೆ ಅಥವಾ ತುಪ್ಪ
ಸಜ್ಜಕ ಹೋಳಿಗೆ ತಯಾರಿಸುವ ವಿಧಾನ
ಮೊದಲಿಗೆ ಹೂರಣ ತಯಾರಿಕೊಳ್ಳಿ. ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಬಿಸಿಯಾದ ನಂತರ ಸಣ್ಣ ರವೆ ಹಾಕಿ. ಅದು ಸುವಾಸನೆ ಬರುವವರೆಗೆ, ಅಂದರೆ ಸ್ವಲ್ಪ ಬಣ್ಣ ಚೇಂಜ್ ಆಗುವವರೆಗೆ ಹುರಿಯಿರಿ. ರವೆ ಬೇಗನೆ ಸೀದು ಹೋಗದಂತೆ ನೋಡಿಕೊಳ್ಳಿ. ಬಳಿಕ ನೀರನ್ನು ಹಾಕಿ, ಗಂಟುಗಳಾಗದಂತೆ ನಿರಂತರವಾಗಿ ಕಲಸಿ. ರವೆ ಗಟ್ಟಿಯಾಗಲು ಪ್ರಾರಂಭಿಸಿದಾಗ ಸಕ್ಕರೆ ಹಾಕಿ. ಸಕ್ಕರೆ ಸಂಪೂರ್ಣವಾಗಿ ಕರಗಿ, ಮಿಶ್ರಣವು ಮತ್ತೊಮ್ಮೆ ಗಟ್ಟಿಯಾಗುವವರೆಗೆ ಕಲಸಿ. ಬಳಿಕ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ತಟ್ಟೆಗೆ ಹಾಕಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಹೂರಣ ತಣ್ಣಗಾದ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
ಈಗ ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಹಿಟ್ಟು, ರವೆ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತಲೂ ಮೃದುವಾಗಿರಬೇಕು. ಈಗ ಹಿಟ್ಟಿಗೆ ಎಣ್ಣೆ ಅಥವಾ ತುಪ್ಪ ಹಾಕಿ ಮತ್ತೊಮ್ಮೆ ಚೆನ್ನಾಗಿ ನಾದಿ. ಇದು ಎಷ್ಟು ಮೃದುವಾಗುತ್ತದೆಯೋ, ಹೋಳಿಗೆ ಅಷ್ಟೇ ಮೃದು ಮತ್ತು ಮೆತ್ತಗೆ ಬರುತ್ತದೆ. ಇದನ್ನು ಕನಿಷ್ಠ ಒಂದು ಗಂಟೆಯವರೆಗೆ ನೆನೆಯಲು ಬಿಡಿ.

ಬಳಿಕ ಹೋಳಿಗೆ ಲಟ್ಟಿಸಿ. ಈಗ ಹೂರಣದ ಉಂಡೆಗಳಷ್ಟೇ ಗಾತ್ರದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಒಂದು ಉಂಡೆಯನ್ನು ತೆಗೆದುಕೊಂಡು, ಸ್ವಲ್ಪ ಚಪ್ಪಟೆ ಮಾಡಿ. ಅದರ ಮಧ್ಯದಲ್ಲಿ ಒಂದು ಹೂರಣದ ಉಂಡೆಯನ್ನು ಇಡಿ. ಹೂರಣ ಹೊರಗೆ ಕಾಣದಂತೆ ಮುಚ್ಚಿ. ಈ ಉಂಡೆಯನ್ನು ಸ್ವಲ್ಪ ಎಣ್ಣೆ ಅಥವಾ ಒಣ ಹಿಟ್ಟನ್ನು ಬಳಸಿ ನಿಧಾನವಾಗಿ ಚಪಾತಿ ಆಕಾರದಲ್ಲಿ ಲಟ್ಟಿಸಿ. ಹೂರಣ ಹೊರಬರದಂತೆ ನೋಡಿಕೊಳ್ಳಿ.
ಇದಾದ ಬಳಿಕ ಹೋಳಿಗೆ ಬೇಯಿಸಬೇಕು. ಈಗ ಒಂದು ತವಾವನ್ನು ಬಿಸಿ ಮಾಡಿ. ಲಟ್ಟಿಸಿದ ಹೋಳಿಗೆಯನ್ನು ತವಾ ಮೇಲೆ ಹಾಕಿ ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ. ಹೋಳಿಗೆಯ ಮೇಲೆ ಸ್ವಲ್ಪ ತುಪ್ಪ ಸವರಿ ಬೇಯಿಸಿದರೆ, ಅದು ಇನ್ನಷ್ಟು ರುಚಿಕರವಾಗುತ್ತದೆ. ಹೂರಣ ಮಾಡುವಾಗ ರವೆ ಗಟ್ಟಿಯಾದರೆ, ಸ್ವಲ್ಪ ಬಿಸಿನೀರು ಬಳಸಬಹುದು. ಹೋಳಿಗೆಯನ್ನು ತುಂಬಾ ತೆಳ್ಳಗೆ ಲಟ್ಟಿಸಿದರೆ ಒಡೆದುಹೋಗಬಹುದು. ಆದ್ದರಿಂದ, ಸ್ವಲ್ಪ ದಪ್ಪವಾಗಿ ಲಟ್ಟಿಸಿ. ಈ ಸರಳ ವಿಧಾನಗಳನ್ನು ಅನುಸರಿಸಿ, ಬಾಯಲ್ಲಿ ನೀರೂರಿಸುವ ಸಜ್ಜಕ ಹೋಳಿಗೆಯನ್ನು ತಯಾರಿಸಬಹುದು.



Click it and Unblock the Notifications