Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ನವರಾತ್ರಿ ಉಪವಾಸಕ್ಕೆ ಎಣ್ಣೆ ಇಲ್ಲದ ಸಬುದಾನಾ ಖಿಚಡಿ: ತೂಕ ಇಳಿಯುತ್ತೆ, ಹೊಟ್ಟೆ ತುಂಬುತ್ತೆ
ನವರಾತ್ರಿ ಆರಂಭವಾಗುತ್ತಿದೆ. ಈ ವೇಳೆ ಬಹುತೇಕರು ಉಪವಾಸ ವ್ರತ (Navratri Fasting) ಕೈಗೊಳ್ಳುತ್ತಾರೆ. ಈ ಉಪವಾಸದ ಸಮಯದಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಸೇವಿಸುವುದು ಎಲ್ಲರ ಆಶಯ. ಆದರೆ, ಎಣ್ಣೆ ಬಳಸದೆ (Without Oil Food) ತಯಾರಿಸಿದ ಆಹಾರ ರುಚಿಸುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ನವರಾತ್ರಿಯಲ್ಲಿ (Navratri), ಆ ನಂಬಿಕೆಯನ್ನು ಬದಲಾಯಿಸಲು ಸಹಕಾರಿಯಾಗುವ ಎಣ್ಣೆ ರಹಿತ ಸಬುದಾನಾ ಅಥವಾ ಸಬ್ಬಕ್ಕಿ ಖಿಚಡಿ (Sabudana Khichdi) ರೆಸಿಪಿ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದು ಆರೋಗ್ಯಕರ ಮಾತ್ರವಲ್ಲದೆ, ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇಡುತ್ತದೆ.
ಎಣ್ಣೆ ರಹಿತ ಸಬ್ಬಕ್ಕಿ ಖಿಚಡಿ ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನವರಾತ್ರಿಯ ಉಪವಾಸದ ಸಮಯದಲ್ಲಿ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಉಪವಾಸವನ್ನು ಇನ್ನಷ್ಟು ವಿಶೇಷಗೊಳಿಸಿ. ಅದಕ್ಕೂ ಮೊದಲು ಎಣ್ಣೆ ರಹಿತ ಸಬ್ಬಕ್ಕಿ ಖಿಚಡಿ ಪ್ರಯೋಜನಗಳನ್ನು ತಿಳಿಯಿರಿ.

ಸುಲಭ ಜೀರ್ಣಕ್ರಿಯೆ: ಉಪವಾಸದ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ವಿಶ್ರಾಂತಿಯಲ್ಲಿರುವುದು ಮುಖ್ಯ. ಎಣ್ಣೆ ರಹಿತ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಯಾವುದೇ ಭಾರವಾದ ಅನುಭವ ನೀಡಲ್ಲ.
ಶಕ್ತಿ ಮತ್ತು ಚೈತನ್ಯ: ಎಣ್ಣೆಯುಕ್ತ ಆಹಾರಗಳು ತೂಕ ಹೆಚ್ಚಿಸುವ ಮತ್ತು ಆಲಸ್ಯ ಉಂಟು ಮಾಡುವ ಸಾಧ್ಯತೆ ಇದೆ. ಆದರೆ, ಎಣ್ಣೆರಹಿತ ಆಹಾರ ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತದೆ. ದಿನವಿಡೀ ಚೈತನ್ಯದಿಂದಿರಲು ಸಹಾಯ ಮಾಡುತ್ತದೆ.
ಆರೋಗ್ಯಕರ ಆಯ್ಕೆ: ಎಣ್ಣೆರಹಿತ ಆಹಾರವು ಹೃದಯದ ಆರೋಗ್ಯಕ್ಕೆ ಉತ್ತಮ. ಇದು ಅನಗತ್ಯ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಉಪವಾಸದ ಸಮಯದಲ್ಲಿ ದೇಹದ ತೂಕ ಕಂಟ್ರೋಲ್ ಮಾಡಲು ಸಹಾಯಕ.
ಎಣ್ಣೆರಹಿತ ಸಬ್ಬಕ್ಕಿ ಖಿಚಡಿ ಮಾಡಲು ಬೇಕಾಗುವ ಸಾಮಗ್ರಿಗಳು
• ಸಬ್ಬಕ್ಕಿ ಅಥವಾ ಸಬುದಾನ (ಸಾಗೋ)
• ಹುರಿದ ಕಡಲೆಕಾಯಿ
• ಆಲೂಗಡ್ಡೆ
• ಹಸಿರು ಮೆಣಸಿನಕಾಯಿ
• ರುಚಿಗೆ ತಕ್ಕಷ್ಟು ಉಪ್ಪು (ಕಲ್ಲು ಉಪ್ಪು)
ಎಣ್ಣೆರಹಿತ ಸಬ್ಬಕ್ಕಿ ಖಿಚಡಿ ತಯಾರಿಸುವ ವಿಧಾನ
ಮೊದಲಿಗೆ ಸಬ್ಬಕ್ಕಿ ಅಥವಾ ಸಬುದಾನವನ್ನು ಚೆನ್ನಾಗಿ ತೊಳೆಯಿರಿ. ಬಳಿಕ ಅದು ಮುಳುಗುವಷ್ಟು ಮಾತ್ರ ನೀರು ಹಾಕಿ 3 ರಿಂದ 4 ಗಂಟೆಗಳ ಕಾಲ ನೆನೆಸಿಡಿ. ಸಂಪೂರ್ಣವಾಗಿ ನೆನೆದ ನಂತರ, ನೀರನ್ನು ಪೂರ್ಣವಾಗಿ ಬಸಿಯಿರಿ. ಇದು ಖಿಚಡಿ ಅಂಟಿಕೊಳ್ಳದಂತೆ ಮತ್ತು ಉದುರುದುರಾಗಿ ಬರುವಂತೆ ಮಾಡುತ್ತದೆ. ಈಗ ಕಡಲೆಕಾಯಿ ಹುರಿದುಕೊಳ್ಳಿ. ಒಂದು ಬಾಣಲೆಯನ್ನು ಬಿಸಿ ಮಾಡಿ. ಎಣ್ಣೆ ಹಾಕದೆಯೇ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ, ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
ಈಗ ಆಲೂಗಡ್ಡೆ ಮತ್ತು ಮೆಣಸಿನಕಾಯಿ ಹುರಿಯಬೇಕು. ಅದೇ ಬಾಣಲೆಗೆ ಆಲೂಗಡ್ಡೆ ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಾಕಿ. ಎಣ್ಣೆ ಬಳಸದೆ ಮೆತ್ತಗಾಗುವವರೆಗೆ ಹುರಿಯಿರಿ. ನಾನ್‌ಸ್ಟಿಕ್ ಬಾಣಲೆ ಬಳಸಿದರೆ ಇದು ಸುಲಭವಾಗುತ್ತದೆ. ಬಳಿಕ ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಿ. ಈಗ ಬೇಯಿಸಿದ ಆಲೂಗಡ್ಡೆ, ಮೆಣಸಿನಕಾಯಿ, ಸಿದ್ಧಪಡಿಸಿದ ಸಬ್ಬಕ್ಕಿ ಮತ್ತು ಕಡಲೆಕಾಯಿ ಪುಡಿಯನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಕಲ್ಲು ಉಪ್ಪು ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಸಬ್ಬಕ್ಕಿ ಒಡೆಯದಂತೆ ನಿಧಾನವಾಗಿ ಕಲಸಿ.
ಅಂತಿಮವಾಗಿ, ಈಗ ಮಿಶ್ರಣವನ್ನು ಬಾಣಲೆಗೆ ಹಾಕಿ. ಸುಮಾರು 5 ರಿಂದ 7 ನಿಮಿಷಗಳ ಕಾಲ ಬೇಯಿಸಿ. ಸಬ್ಬಕ್ಕಿ ಪಾರದರ್ಶಕವಾಗಿ ಕಾಣುವವರೆಗೆ ಬೇಯಿಸಿ. ಆಗ ಅದು ಸಂಪೂರ್ಣವಾಗಿ ಬೆಂದಿದೆ ಎಂದು ಖಚಿತ. ರುಚಿಯನ್ನು ಇನ್ನಷ್ಟು ಹೆಚ್ಚಿಸಲು, ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಬಹುದು. ಖಿಚಡಿಗೆ ಮತ್ತೊಂದು ಸ್ವಾದವನ್ನು ನೀಡಲು ತುರಿದ ತೆಂಗಿನಕಾಯಿಯನ್ನು ಬಳಸಬಹುದು. ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.
ಈ ಮೇಲೆ ತಿಳಿಸಿದ ಸುಲಭ ವಿಧಾನದಿಂದ, ಎಣ್ಣೆ ಬಳಸದೆಯೇ ರುಚಿಕರವಾದ ಸಬ್ಬಕ್ಕಿ ಖಿಚಡಿಯನ್ನು ತಯಾರಿಸಿ. ನವರಾತ್ರಿ ಉಪವಾಸವನ್ನು ಸಂತೋಷದಿಂದ ಆಚರಿಸಿ. ಈ ಖಿಚಡಿಯು ನಿಮ್ಮ ಉಪವಾಸಕ್ಕೆ ಸಂಪೂರ್ಣ ಪೌಷ್ಟಿಕಾಂಶವನ್ನು ಒದಗಿಸುತ್ತದೆ.



Click it and Unblock the Notifications