Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಟಿ ಕೋಳಿ ಸಾರು ಹೀಗೆ ಮಾಡಿ ನೋಡಿ ರುಚಿ ಸೂಪರ್
ನಾಟಿ ಕೋಳಿ ಸಾರು ಮಾಡುವುದಾದರೆ ಅದರ ಮಸಾಲೆ ಸರಿಯಾಗಿರಬೇಕು, ಈ ರೀತಿ ಮಾಡಿ ನೋಡಿ ಖಂಡಿತ ನಾಟಿ ಕೋಳಿ ರುಚಿ ಮತ್ತಷ್ಟು ಸ್ಪೆಷಲ್ ಅನಿಸುವುದು:

ಬೇಕಾಗುವ ಸಾಮಗ್ರಿ
ಒಂದು-ಒಂದೂವರೆ ಕೆಜಿಯ ನಾಟಿ ಕೋಳಿ
ಅರ್ಧ ತೆಂಗಿನ ತುರಿ
ಒಣ ಮೆಣಸು(3-4)
ಬ್ಯಾಡಗಿ ಮೆಣಸು 5-6
( ನೀವು ಖಾರದ ಪುಡಿ ಬೇಕಾದರೆ ಬಳಸಬಹುದು)
ಕೊತ್ತಂಬರಿ ಬೀಜ ಒಂದು ಮುಷ್ಠಿಯಷ್ಟು
ಕೊತ್ತಂಬರಿ ಪುಡಿಯಾದರೆ 3 ಚಮಚ
ಅರಿಶಿಣ ಪುಡಿ 1/2 ಚಮಚ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
4-5 ಲವಂಗ, 2 ಏಲಕ್ಕಿ
ಈರುಳ್ಳು 1 +1
ಸೋಂಪು 1 ಚಮಚ
ಬೆಳ್ಳುಳ್ಳಿ ಎಸಳು 3-4 2
2 ಚಮಚ ಎಣ್ಣೆ
ಸ್ವಲ್ಪ ಕರಿಬೇವು
ರುಚಿಗೆ ತಕ್ಕ ಉಪ್ಪು
ನಿಂಬೆರಸ 1 ಚಮಚ
ಮಸಾಲೆ ತಯಾರಿ
ಸ್ವಲ್ಪ ಎಣ್ಣೆ ಹಾಕಿ ಕೊತ್ತಂಬರಿ ಬೀಜ ಹಾಗೂ ಒಣಮೆಣಸು ಹುರಿಯಿರಿ, ಚಕ್ಕೆ, ಲವಂಗ
ಕೂಡ ಹುರಿಯಿರಿ
ತೆಂಗಿನ ತುರಿ ಹಾಕಿ ಅದರಲ್ಲಿ 1 ಈರುಳ್ಳಿ, ಬೆಲ್ಳುಳ್ಳಿ ಹಾಕಿ ತೆಮಗಿನ ತುರಿ
ಕೆಂಪಗೆ ಬರುವವರೆಗೆ ಹುರಿಯಿರಿ
ಸೋಂಪು, ಚಕ್ಕೆ, ಲವಂಗ ಹಾಕಿ 1 ನಿಮಿಷ ಹುರಿಯಿರಿ
ಈಗ ಎಲ್ಲಾ ಸಾಮಗ್ರಿ ಮಿಕ್ಸಿ ಜಾರ್‌ನಲ್ಲಿ ಹಾಕಿ ಅದಕ್ಕೆ ಏಲಕ್ಕಿ, ಅರಿಶಿಣ
ಸೇರಿಸಿ, ಸ್ವಲ್ಪ ನೀರು ಸೇರಿಸಿ ರುಬ್ಬಿ.
ನಾಟಿ ಕೋಳಿ ಸಾರು ಮಾಡುವ ವಿಧಾನ
- ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಎಣ್ಣೆ ಬಿಸಿಯಾದಾಗ, ಕರಿಬೇವಿನ ಎಲೆ ಬೆಳ್ಳುಳ್ಳಿ, ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ
- ನಂತರ ಚಿಕನ್ ಹಾಕಿ, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್ ಮಾಡಿ 5-10 ನಿಮಿಷ ಸಾಧಾರಣ ಉರಿಯಲ್ಲಿ ಬೇಯಿಸಬೇಕು, ಈಗ ರುಬ್ಬಿದ ಮಸಾಲೆ ಹಾಕಿ, ಗ್ರೇವಿ ಹದ ನಿಮಗೆ ಸ್ವಲ್ಪ ತೆಳು ಬೇಕೆಂದರೆ 1 ಕಪ್ ಅಥವಾ ಒಂದೂವರೆ ಕಪ್ ನೀರು, ಇಲ್ಲದಿದ್ದರೆ ಅರ್ಧ ಕಪ್ ನೀರು ಸೇರಿಸಿ ಬೇಯಿಸಿ.
- ಕುಕ್ಕರ್‌ನಲ್ಲಿ ಬೇಯಿಸುವುದಾದರೆ 3-4 ವಿಶಲ್ ಬರುವವರೆಗೆ ಬೇಯಿಸಿ, ನಂತರ ಉಪ್ಪು ಸರಿಯಾಗಿದೆಯೇ ನೋಡಿ.
- ಸವಿ ರುಚಿಯ ನಾಟಿ ಕೋಳಿ ಸಾರು ರೆಡಿ.
ಅನ್ನ, ತುಪ್ಪದನ್ನ, ರೊಟ್ಟಿ, ಮುದ್ದೆ ಹೀಗೆ ಯಾವುದೇ ಆಹಾರಕ್ಕೂ ಸೂಪರ್ ಕಾಂಬಿನೇಷನ್.
ಇತರ ಸಲಹೆ
ಟೈಸನ್ ಕೋಳಿನ ದೊರೆಯುತ್ತದೆ, ನಾಟಿ ಕೋಳಿಯತಂತೆ ಈ ಕೋಳಿಯೂ ಸ್ವಲ್ಪ ಗಟ್ಟಿ
ಇರುತ್ತದೆ, ಹಾಗಾಗಿ ಇದೇ ಮಸಾಲೆ ಈ ಟೈಸನ್ ಕೋಳಿ ಹಾಕಿದರೂ ಕೋಳಿ ಸಾರು ನಾಟಿ ಕೋಳಿ
ಸಾರಿನಂತೆಯೇ ಸೂಪರ್ ಆಗಿರುತ್ತದೆ.



Click it and Unblock the Notifications