Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್ಮುಂದೆ ಹೋಟೆಲ್ ಬೇಕಿಲ್ಲ! ಮನೆಯಲ್ಲೇ ಪಕ್ಕಾ ಮೈಸೂರು ಮಸಾಲ ದೋಸೆ ಮಾಡಿ.. ಈ ಟಿಪ್ಸ್ ಸಾಕು
ಪಕ್ಕಾ ಮೈಸೂರು ಮಸಾಲ ದೋಸೆ ಸವಿಯಲು ಇನ್ಮುಂದೆ ಹೋಟೆಲ್‌ಗೆ ಹೋಗಬೇಕಿಲ್ಲ! ಮನೆಯಲ್ಲೇ ಮಾಡುವ ಸೀಕ್ರೆಟ್ ಇಲ್ಲಿದೆ. ಈ ಟಿಪ್ಸ್ ಫಾಲೋ ಮಾಡಿದ್ರೆ ದೋಸೆ ಸೂಪರ್ ಕ್ರಿಸ್ಪಿ. ಹೌದು, ನಮ್ಮಲ್ಲಿ ದೋಸೆಗೆ ಅಗ್ರಸ್ಥಾನವಿದೆ. ಅದರಲ್ಲೂ 'ಮೈಸೂರು ಮಸಾಲ ದೋಸೆ'ಯ (Mysuru Masala Dosa) ವಿಶೇಷ ರುಚಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
ಹೊರಗಿನಿಂದ ಹೊಂಬಣ್ಣದ ಕುರುಕುಲು ಮೇಲ್ಪದರ, ಒಳಭಾಗದಲ್ಲಿ ಬೆಣ್ಣೆಯಂತಹ ಮೃದುತ್ವ, ನಾಲಿಗೆಗೆ ರುಚಿ ನೀಡುವ ಖಾರವಾದ ಕೆಂಪು ಚಟ್ನಿ ಮತ್ತು ಘಮಘಮಿಸುವ ಆಲೂಗೆಡ್ಡೆ ಪಲ್ಯ.. ಇವುಗಳ ಸಮ್ಮಿಲನವೇ ಅದ್ಭುತ ಮೈಸೂರು ಮಸಾಲ ದೋಸೆ. ಈ ವಿಶಿಷ್ಟ ರುಚಿ ಹೋಟೆಲ್‌ಗಳಲ್ಲಿ ಮಾತ್ರ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ, ಇಲ್ಲಿದೆ ನಿಮಗೆ ಸಿಹಿ ಸುದ್ದಿ.
ಮನೆಯಲ್ಲಿಯೇ ಹೋಟೆಲ್ ಶೈಲಿಯ ಅಸಲಿ ಮೈಸೂರು ಮಸಾಲ ದೋಸೆ (Mysore Masala Dosa) ತಯಾರಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಹೊರಭಾಗ ಕುರುಕುಲಾಗಿ, ಒಳಭಾಗದಲ್ಲಿ ಖಾರವಾದ ಕೆಂಪು ಚಟ್ನಿಯೊಡನೆ ಇದನ್ನೇಕೆ ಪ್ರಯತ್ನಿಸಬಾರದು? ನಿಮ್ಮ ಅಡುಗೆಮನೆಯಲ್ಲೇ ಆಲೂಗೆಡ್ಡೆ ಪಲ್ಯ ಹಾಗೂ ವಿಶೇಷ ಕೆಂಪು ಚಟ್ನಿ ಮತ್ತು ಅಸಲಿ ಮೈಸೂರು ಮಸಾಲ ದೋಸೆ (Masala Dosa Recipe) ಸಿದ್ಧಪಡಿಸಬಹುದು.
ಮೈಸೂರು ಮಸಾಲ ದೋಸೆಗೆ ಬೇಕಾಗುವ ಸಾಮಗ್ರಿಗಳು
ದೋಸೆ ಹಿಟ್ಟು
• ಅಕ್ಕಿ (ದೋಸೆ ಅಕ್ಕಿ ಅಥವಾ ಸೋನಾ ಮಸೂರಿ)
• ಉದ್ದಿನ ಬೇಳೆ
• ಮೆಂತ್ಯ ಕಾಳು
• ಉಪ್ಪು
ಮೈಸೂರು ಕೆಂಪು ಚಟ್ನಿ
• ಒಣ ಕೆಂಪು ಮೆಣಸಿನಕಾಯಿ
• ಬೆಳ್ಳುಳ್ಳಿ ಎಸಳು
• ಕಾಯಿತುರಿ
• ಹುಣಸೆಹಣ್ಣು
• ಉಪ್ಪು
ಆಲೂಗೆಡ್ಡೆ ಪಲ್ಯ
• ಬೇಯಿಸಿ ಪುಡಿ ಮಾಡಿದ ಆಲೂಗೆಡ್ಡೆ
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಸಾಸಿವೆ
• ಕರಿಬೇವು
• ಅರಿಶಿನ
• ಎಣ್ಣೆ
• ಉಪ್ಪು
ಮೈಸೂರು ಮಸಾಲ ದೋಸೆ ತಯಾರಿಸುವ ವಿಧಾನ
- ಮೊದಲು ಅಕ್ಕಿ, ಉದ್ದಿನಬೇಳೆ ಮತ್ತು ಮೆಂತ್ಯ ಕಾಳನ್ನು ಚೆನ್ನಾಗಿ ತೊಳೆಯಿರಿ. 6 ರಿಂದ 7 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
- ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು 8 ರಿಂದ 10 ಗಂಟೆಗಳ ಕಾಲ ಚೆನ್ನಾಗಿ ಹುದುಗಬೇಕು. ಹಿಟ್ಟು ಎಷ್ಟು ಚೆನ್ನಾಗಿ ಉಬ್ಬುತ್ತದೋ ದೋಸೆ ಅಷ್ಟೇ ರುಚಿಯಾಗಿ ಬರುತ್ತದೆ.
- ಮರುದಿನ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹದ ಮಾಡಿಕೊಳ್ಳಿ.
- ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ.
- ಈರುಳ್ಳಿ ಕೆಂಪಾದ ನಂತರ ಅರಿಶಿನ ಮತ್ತು ಪುಡಿ ಮಾಡಿದ ಆಲೂಗೆಡ್ಡೆ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಬೆರೆಸಿ 2 ನಿಮಿಷ ಬೇಯಿಸಿ, ನಂತರ ಪಕ್ಕಕ್ಕೆ ಇಡಿ.
- ನಂತರ ಮೈಸೂರು ಸ್ಪೆಷಲ್ ಕೆಂಪು ಚಟ್ನಿ. ಇದು ಮೈಸೂರು ಮಸಾಲ ದೋಸೆಯ ಜೀವಾಳ.
- ಒಣ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಕಾಯಿತುರಿ, ಹುಣಸೆಹಣ್ಣು ಮತ್ತು ಉಪ್ಪನ್ನು ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
- ಈ ಚಟ್ನಿ ದೋಸೆಯ ಒಳಭಾಗಕ್ಕೆ ಸವರುವಾಗ ಸುಲಭವಾಗಿ ಹರಡುವಂತೆ ಹದವಾಗಿರಲಿ.
- ಈಗ ದೋಸೆ ತವಾವನ್ನು ಕಾಯಿಸಿ, ಒಂದು ಸೌಟು ಹಿಟ್ಟು ಹಾಕಿ ತೆಳ್ಳಗೆ ಹರಡಿ. ದೋಸೆ ಸ್ವಲ್ಪ ಬೇಯಲು ಶುರುವಾದಾಗ, ಅದರ ಮೇಲೆ ಒಂದು ಚಮಚ ಕೆಂಪು ಚಟ್ನಿಯನ್ನು ಹಾಕಿ ದೋಸೆಯ ಪೂರ್ತಿ ಭಾಗಕ್ಕೆ ತೆಳ್ಳಗೆ ಸವರಿ. ನಂತರ ಮೇಲೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ.
- ದೋಸೆ ಹೊಂಬಣ್ಣಕ್ಕೆ ತಿರುಗಿ ಕುರುಕುಲಾದಾಗ, ಮಧ್ಯದಲ್ಲಿ ಸ್ವಲ್ಪ ಆಲೂಗೆಡ್ಡೆ ಪಲ್ಯ ಇಟ್ಟು ದೋಸೆಯನ್ನು ಮಡಚಿ. ಬಿಸಿಬಿಸಿ ದೋಸೆ ಸವಿಯಲು ಸಿದ್ಧ!
ಈ ಟ್ರಿಕ್ಸ್ ಬಳಿಸಿ
• ಬೆಳ್ಳುಳ್ಳಿಯ ಪ್ರಮಾಣ ಸ್ವಲ್ಪ ಹೆಚ್ಚಿದ್ದರೆ ಚಟ್ನಿಗೆ ಉತ್ತಮ ಪರಿಮಳ ಬರುತ್ತದೆ.
• ಹೋಟೆಲ್ ಶೈಲಿಯ ಗಾಢ ಹೊಂಬಣ್ಣ ಬೇಕೆಂದರೆ, ದೋಸೆ ಹಿಟ್ಟಿಗೆ ಒಂದು ಚಮಚ ಸಕ್ಕರೆ ಅಥವಾ ಸ್ವಲ್ಪ ತೊಗರಿಬೇಳೆ ಹಾಕಿ ರುಬ್ಬಬಹುದು.
• ಮೈಸೂರು ದೋಸೆಗೆ ಬೆಣ್ಣೆ ಬಳಸಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ.
• ತೆಂಗಿನಕಾಯಿ ಚಟ್ನಿ ಮತ್ತು ಬಿಸಿಬಿಸಿ ಸಾಂಬಾರ್ ಜೊತೆ ಇದನ್ನು ಬಡಿಸಿದರೆ ಅದರ ಮಜವೇ ಬೇರೆ.



Click it and Unblock the Notifications
