Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೈಸೂರು ಸ್ಟೈಲ್ ಗೋಲಿ ಬಜೆ ಮನೆಯಲ್ಲೇ ಮಾಡಿ! ಹೊರಗಡೆ ಕ್ರಿಸ್ಪಿ, ಒಳಗಡೆ ಸಾಫ್ಟ್.. ಕಡಿಮೆ ಎಣ್ಣೆಯಲ್ಲಿ ಸಕ್ಕತ್ ಟೇಸ್ಟ್!
ಹೊರಗಡೆ ಕ್ರಿಸ್ಪಿ, ಒಳಗಡೆ ಸಾಫ್ಟ್.. ಮನೆಯಲ್ಲೇ ಮಾಡಿ ಮೈಸೂರು ಸ್ಟೈಲ್ 'ಗೋಲಿ ಬಜೆ'! ಅತಿಥಿಗಳಿಗಂತೂ ಇದು ಫೇವರೆಟ್ ಆಗೋದು ಗ್ಯಾರಂಟಿ. ಹೌದು, ಸಂಜೆ ಕಾಫಿ, ಚಹಾದೊಂದಿಗೆ ಗರಿಗರಿಯಾದ ತಿಂಡಿಯಿದ್ದರೆ ಮಜವೇ ಬೇರೆ. ಸಾಮಾನ್ಯ ಸಮೋಸಾ, ಬಜ್ಜಿ ಅಥವಾ ಸ್ಯಾಂಡ್ವಿಚ್ಗಳನ್ನು ದಿನವೂ ತಿಂದು ಬೇಸರಗೊಂಡಿದ್ದರೆ, ದಕ್ಷಿಣ ಭಾರತದ ಜನಪ್ರಿಯ 'ಮೈಸೂರು ಬೋಂಡಾ'ವನ್ನು (Mysuru Bonda) ಮನೆಯಲ್ಲೇ ಸಿದ್ಧಪಡಿಸಿ ಸಂಜೆಗೆ ಹೊಸ ಮೆರುಗು ನೀಡಿ.
ಹೋಟೆಲ್ ರುಚಿಯ ಮೃದುವಾದ ಬೋಂಡಾ ಈಗ ನಿಮ್ಮ ಮನೆಯಲ್ಲೇ ಸಿದ್ಧವಾಗುತ್ತದೆ. ಮೈಸೂರು ಬೋಂಡಾ ಕೇವಲ ತಿಂಡಿಯಲ್ಲ, ಅದೊಂದು ವಿಶಿಷ್ಟ ರುಚಿಯ ಅನುಭವ. ಮೈದಾ ಹಿಟ್ಟಿನಿಂದ ತಯಾರಾಗುವ ಇದು ಹೊರಗೆ ಗರಿಗರಿಯಾಗಿದ್ದರೆ, ಒಳಗೆ ಹತ್ತಿಯಂತೆ ಮೃದುವಾಗಿರುತ್ತದೆ. ಮೈಸೂರು ಭಾಗದಲ್ಲಿ 'ಗೋಲಿ ಬಜೆ' (Goli Baje) ಎಂದೂ ಪ್ರಚಲಿತದಲ್ಲಿರುವ ಈ ತಿಂಡಿ ಅತಿಥಿಗಳಿಗೆ ಅಥವಾ ಮಳೆಯ ಸಂಜೆಗೆ ಹೇಳಿ ಮಾಡಿಸಿದ ಆಯ್ಕೆ.
ಇದನ್ನು ತಯಾರಿಸುವುದು ಅತ್ಯಂತ ಸುಲಭ. ಇದಕ್ಕೆ ಬೇಕಾದ ಸಾಮಗ್ರಿಗಳು ಸಾಮಾನ್ಯವಾಗಿ ನಮ್ಮ ಅಡುಗೆಮನೆಯಲ್ಲೇ ಲಭ್ಯ. ಈ ಸರಳ ರೆಸಿಪಿ ನಿಮ್ಮ ಸಂಜೆಯನ್ನು ಇನ್ನಷ್ಟು ಸ್ವಾದಿಷ್ಟವಾಗಿಸುವುದು ಖಚಿತ. ಹೋಟೆಲ್ ಶೈಲಿಯ ಮೃದು ಮತ್ತು ಗರಿಗರಿಯಾದ ಬೋಂಡಾ ಮಾಡುವ ವಿಧಾನ (Mysore Bonda Recipe) ಇಲ್ಲಿದೆ.
ಮೈಸೂರು ಬೋಂಡಾಗೆ ಬೇಕಾಗುವ ಸಾಮಗ್ರಿಗಳು
• ಮೊಸರು (ಹುಳಿಯಾದ ಮೊಸರು ರುಚಿ ಹೆಚ್ಚಿಸುತ್ತದೆ)
• ಮೈದಾ
• ಉಪ್ಪು
• ಅಡುಗೆ ಸೋಡಾ
• ಹಸಿ ಮೆಣಸಿನಕಾಯಿ
• ಶುಂಠಿ
• ಕರಿಬೇವು
• ತೆಂಗಿನಕಾಯಿ ಚೂರು
• ಕೊತ್ತಂಬರಿ ಸೊಪ್ಪು
• ಜೀರಿಗೆ
• ಎಣ್ಣೆ
ಮೈಸೂರು ಬೋಂಡಾ ತಯಾರಿಸುವ ವಿಧಾನ
- ಮೊದಲಿಗೆ ಒಂದು ದೊಡ್ಡ ಬೌಲ್ನಲ್ಲಿ ಮೊಸರು, ಉಪ್ಪು ಮತ್ತು ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸೋಡಾ ಮೊಸರಿನೊಂದಿಗೆ ಬೆರೆತಾಗ ನೊರೆ ಬರಲಾರಂಭಿಸುತ್ತದೆ. ಇದು ಬೋಂಡಾ ಮೃದುವಾಗಲು ಅತ್ಯಗತ್ಯವಾದ ಪ್ರಕ್ರಿಯೆ.
- ಈಗ ಈ ಮಿಶ್ರಣಕ್ಕೆ ಎರಡು ಕಪ್ ಮೈದಾ ಸೇರಿಸಿ. ಗಂಟಿಲ್ಲದಂತೆ ಚೆನ್ನಾಗಿ ಬೆರೆಸಿ, ವಡೆ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿಯಾಗಿಯೂ ಇರಬಾರದು, ತೆಳುವಾಗಿಯೂ ಇರಬಾರದು ಎಂಬುದನ್ನು ನೆನಪಿಡಿ.
- ನಂತರ, ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ಚೂರು ಮತ್ತು ಜೀರಿಗೆಯನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಸಾಲೆಗಳು ಬೋಂಡಾಗೆ ಹೋಟೆಲ್ ಶೈಲಿಯ ಪರಿಮಳ ಮತ್ತು ವಿಶಿಷ್ಟ ಸ್ವಾದ ನೀಡುತ್ತವೆ.
- ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿದ ಬಳಿಕ ಕನಿಷ್ಠ ನಾಲ್ಕು ಗಂಟೆಗಳ ಕಾಲ ಮುಚ್ಚಿಡಿ. ಹಿಟ್ಟು ಚೆನ್ನಾಗಿ ನೆನೆದಷ್ಟೂ ಬೋಂಡಾ ಅತ್ಯಂತ ಮೃದುವಾಗಿ ಬರುತ್ತದೆ. ಒಂದು ವೇಳೆ ಸಮಯದ ಅಭಾವವಿದ್ದರೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನೆನೆಯಲು ಬಿಡಿ.
- ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಹಿಟ್ಟು ನೆನೆದ ನಂತರ, ಕೈಯಿಂದ ಮತ್ತೊಮ್ಮೆ ಒಂದು ನಿಮಿಷ ಚೆನ್ನಾಗಿ ನಾದಿಕೊಳ್ಳಿ. ಎಣ್ಣೆ ಕಾದ ಬಳಿಕ, ಕೈಯನ್ನು ಸ್ವಲ್ಪ ನೀರಿನಲ್ಲಿ ಅದ್ದಿ ಸಣ್ಣ ಸಣ್ಣ ಉಂಡೆಗಳ ರೂಪದಲ್ಲಿ ಹಿಟ್ಟನ್ನು ಎಣ್ಣೆಗೆ ಬಿಡಿ.
- ಮಧ್ಯಮ ಉರಿಯಲ್ಲಿ ಬೋಂಡಾಗಳನ್ನು ಕರಿಯಿರಿ. ಅವು ಉಬ್ಬಿ ಮೇಲೆ ಬಂದ ನಂತರ, ಸುವರ್ಣ ಕಂದು ಬಣ್ಣಕ್ಕೆ ತಿರುಗುವವರೆಗೆ ತಿರುಗಿಸುತ್ತಾ ಬೇಯಿಸಿ. ಇದು ಬೋಂಡಾ ಒಳಗಡೆ ಸಮವಾಗಿ ಬೇಯಲು ಸಹಕರಿಸುತ್ತದೆ.
ಸವಿಯುವ / ಬಡಿಸುವ ವಿಧಾನ
ಬಿಸಿಬಿಸಿ ಮೈಸೂರು ಬೋಂಡಾವನ್ನು ಈಗ ಸವಿಯಿರಿ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಕೆಂಪು ಚಟ್ನಿಯೊಂದಿಗೆ ಬಡಿಸಿ. ಸಂಜೆಯ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಈ ಸ್ವಾದಿಷ್ಟ ಬೋಂಡಾ ಅತ್ಯುತ್ತಮವಾಗಿರುತ್ತದೆ.
ಈ ಟ್ರಿಕ್ಸ್ ಬಳಸಿ
ಬೋಂಡಾ ಒಳಗಡೆ ಹಸಿ ಉಳಿಯದಂತೆ, ಯಾವಾಗಲೂ ಮಧ್ಯಮ ಉರಿಯಲ್ಲಿ ಕರಿಯಲು ಗಮನ ನೀಡಿ. ಹಾಗೆಯೇ, ಹಿಟ್ಟನ್ನು ಚೆನ್ನಾಗಿ ನಾದಿ, ಮಿಶ್ರಣ ಮಾಡುವುದರಿಂದ ಬೋಂಡಾ ಇನ್ನಷ್ಟು ಮೃದುವಾಗಿ ಬರುತ್ತದೆ. ಹೊಸ ರುಚಿ ಬಯಸುವವರು ಮೈಸೂರು ಬೋಂಡಾವನ್ನು ಮಿಸ್ ಮಾಡ್ದೇ ಟ್ರೈ ಮಾಡಿ.



Click it and Unblock the Notifications
