Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮನೆಯಲ್ಲಿಯೇ ಮೈಸೂರು ಪಾಕ್ ಮಾಡುವುದು ಹೇಗೆ?
ಮೈಸೂರಿನಲ್ಲಿ ಹುಟ್ಟಿ, ಮೈಸೂರಿನಿಂದ ಪ್ರಖ್ಯಾತಿಯನ್ನು ಪಡೆದು, ಇಂದು ವಿಶ್ವಾದ್ಯಂತ ಫೇಮಸ್ ಆಗಿರುವ ಮೈಸೂರು ಪಾಕ್ ಅತ್ಯಂತ ರುಚಿಕರ ಖಾದ್ಯ ಎನಿಸಿಕೊಂಡಿದೆ. ಇಂದು ಅಂತಹ ಮೈಸೂರುಪಾಕ್ ಒಂದನ್ನು ತಯಾರಿಸುವ ವಿಧಾನವನ್ನ ನೋಡೋಣ.

ಮೈಸೂರ್ ಪಾಕ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು
ಕಡಲೆ ಹಿಟ್ಟು ಒಂದು ಬೌಲ್
ಅಡುಗೆ ಎಣ್ಣೆ ಅರ್ಧ ಬೌಲ್
ಒಂದು ದೊಡ್ಡ ಸ್ಪೂನ್ ತುಪ್ಪ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)
ಚಿಟಿಕೆ ಉಪ್ಪು
ಸಕ್ಕರೆ ಮುಕ್ಕಾಲು ಬೌಲ್
ಮೈಸೂರು ಪಾಕ್ ತಯಾರಿಸುವ ವಿಧಾನ!
ಮೊದಲಿಗೆ ಒಂದು ಬೌಲ್ ಕಡಲೆ ಹಿಟ್ಟನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಜರಡಿ
ಹಿಡಿದುಕೊಳ್ಳಬೇಕು ಕಡಲೆ ಹಿಟ್ಟು ನುಣುಪಾಗಿದ್ದರೆ ಮಾತ್ರ ಮೈಸೂರ್ ಪಾಕ್
ಚೆನ್ನಾಗಿ ಬರುತ್ತದೆ. ಈಗ ಜರಡಿ ಹಿಡಿದ ಕಡಲೆ ಹಿಟ್ಟನ್ನು ಒಂದು ಅಗಲವಾದ
ಪಾತ್ರೆಗೆ ಹಾಕಿ ಗ್ಯಾಸ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಹುರಿಯಬೇಕು. ಕಡಲೆ
ಹಿಟ್ಟು ಸ್ವಲ್ಪ ಬಣ್ಣ ಬದಲಾಗುವವರೆಗೆ ಅಥವಾ ಕಡಲೆಹಿಟ್ಟಿನ ಹಸಿ ವಾಸನೆ
ಹೋಗುವವರೆಗೆ ಹುರಿದುಕೊಳ್ಳಬೇಕು.
ನಂತರ ಹುರಿದ ಕಡಲೆ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಈಗ ಅದೇ ಕಡಲೆ ಹಿಟ್ಟು ಉಳಿದ ಪಾತ್ರೆಗೆ ಮುಕ್ಕಾಲು ಬೌಲ್ ನಷ್ಟು ಸಕ್ಕರೆ ಹಾಕಿ ಆ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಂದು ಎಳೆ ಪಾಕ ತರಿಸಿಕೊಳ್ಳಬೇಕು. ಇಲ್ಲಿ ಪಾಕ ಹೆಚ್ಚು ಗಟ್ಟಿ ಆಗದಂತೆ ನೋಡಿಕೊಳ್ಳಿ.
ಸಕ್ಕರೆ ಪಾಕ ಸಿದ್ದವಾಗುತ್ತಿದ್ದ ಹಾಗೆ ಪಕ್ಕದಲ್ಲಿ ಇನ್ನೊಂದು ಗ್ಯಾಸ್ ಮೇಲೆ ಅರ್ಧ ಬೌಲ್ ನಷ್ಟು ಎಣ್ಣೆ ಹಾಕಿ, ಅಗತ್ಯ ಇದ್ದರೆ ತುಪ್ಪವನ್ನು ಸೇರಿಸಿ ಬಿಸಿ ಆಗುವುದಕ್ಕೆ ಇಡಿ. ಮೈಸೂರ್ ಪಾಕ್ ಸಂಪೂರ್ಣವಾಗಿ ಆಗುವ ವರೆಗೂ ನೀವು ಗ್ಯಾಸ್ ಫ್ಲೇಮ್ ಆಫ್ ಮಾಡದೆ ಎಣ್ಣೆ ಬಿಸಿ ಮಾಡುತ್ತಲೇ ಇರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಸಕ್ಕರೆ ಪಾಕ ಸಿದ್ಧವಾದ ನಂತರ ಇದಕ್ಕೆ ಹುರಿದಿಟ್ಟುಕೊಂಡ ಕಡಲೆ ಹಿಟ್ಟನ್ನು ಸೇರಿಸಿ. ಕಡಲೆ ಹಿಟ್ಟು ಬೇಗ ಗಂಟಾಗುವುದರಿಂದ ಸ್ವಲ್ಪ ಸ್ವಲ್ಪವೇ ಕಡಲೆ ಹಿಟ್ಟು ಸೇರಿಸಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಚೆನ್ನಾಗಿ ಮಿಕ್ಸ್ ಆದ ನಂತರ ಇದಕ್ಕೆ ಒಂದೊಂದು ಸೌಟ್ನಂತೆ ಬಿಸಿಯಾಗಿರುವ ಎಣ್ಣೆ ಹಾಕಿಕೊಳ್ಳಲು ಆರಂಭಿಸಬೇಕು. ಎಣ್ಣೆಯನ್ನು ಹಾಕಿ ತಕ್ಷಣ ಸೌಟ್ ನಿಂದ ಸಕ್ಕರೆ ಪಾಕ ಹಾಗೂ ಕಡಲೆಹಿಟ್ಟಿನ ಮಿಶ್ರಣವನ್ನು ಕಲಕಿ. ಈ ಪ್ರೊಸೆಸ್ ನಲ್ಲಿ ಫ್ಲೇಮ್ ಜಾಸ್ತಿ ಮಾಡಿಕೊಳ್ಳಬೇಡಿ ಇಲ್ಲವಾದರೆ ಕಡಲೆ ಹಿಟ್ಟು, ಸೀದು ಹೋಗುತ್ತದೆ.
ಕಡಲೆ ಹಿಟ್ಟು ಹಾಗೂ ಸಕ್ಕರೆ ಪಾಕ ಒಂದಕ್ಕೊಂದು ಬೆರೆತು ನೀವು ಎಣ್ಣೆ ಹಾಕುವ ಪ್ರೋಸೆಸ್ ನಲ್ಲಿ ಎಣ್ಣೆಯನ್ನು ಹೀರಿಕೊಳ್ಳಲು ಆರಂಭಿಸುತ್ತದೆ. ಯಾವಾಗ ಮಿಕ್ಸ್ ಮಾಡುತ್ತಿರುವಾಗ ಎಣ್ಣೆ ಹಾಕಿದಾಗ ಎಣ್ಣೆ ಬಿಟ್ಟುಕೊಳ್ಳಲು ಆರಂಭವಾಗುತ್ತದೆಯೋ ಅಂದರೆ ಪಾತ್ರೆಯ ಸುತ್ತ ಎಣ್ಣೆ ಕಾಣಿಸುತ್ತದೆಯೋ ಆಗ ಬಿಸಿ ಎಣ್ಣೆ ಹಾಕುವುದನ್ನು ಬಿಡಿ ಅಲ್ಲಿಯವರೆಗೂ ನೀವು ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಲೇ ಇರಬೇಕು. ಈ ಪ್ರಕ್ರಿಯೆಗೆ ಸುಮಾರು 20 ನಿಮಿಷಗಳ ಅವಧಿ ಬೇಕು.
ಈಗ ಮಿಶ್ರಣ ದಪ್ಪವಾದ ನಂತರ ಒಂದು ಪಾತ್ರೆಗೆ ತುಪ್ಪವನ್ನು ಸವರಿ ಆ ಪಾತ್ರೆಗೆ ಮಿಶ್ರಣವನ್ನು ಹುಯ್ದುಕೊಳ್ಳಿ. ನಿಮಗೆ ಪಕ್ಕ ಮೈಸೂರ್ ಪಾಕ್ ರೀತಿಯ ಸ್ಟ್ರಕ್ಚರ್ ಬೇಕು ಎಂದಿದ್ದರೆ ಗುಂಡಗಿರುವ ಕಂಟೇನರ್ (ಮೈಸೂರ್ ಪಾಕ್ ಕಂಟೇನರ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ) ತೆಗೆದುಕೊಳ್ಳುವುದು ಸೂಕ್ತ ಅಥವಾ ಅಗಲವಾಗಿರುವ ಬಟ್ಟಲಲ್ಲಿಯೂ ತುಪ್ಪ ಸವರಿ ಪಾಕವನ್ನು ಸುರಿಯರಿ.
ಈ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಒಂದು ಚಾಕು ಅಥವಾ ಚೂಪಾದ ವಸ್ತುವಿನ
ಸಹಾಯದಿಂದ ಗುರುತು ಹಾಕಿ ಮೈಸೂರ್ ಪಾಕ್ ರೀತಿ ಕತ್ತರಿಸಿ ಇಟ್ಟುಕೊಳ್ಳಿ. ಮತ್ತೆ
ಸಂಪೂರ್ಣವಾಗಿ ಆರಿದ ನಂತರ ಕತ್ತರಿಸಿಟ್ಟ ಪೀಸ್ ಗಳನ್ನು ತೆಗೆದು ಸ್ಟೋರ್ ಮಾಡಿ
ಇಟ್ಟುಕೊಂಡರೆ ಒಂದು ವಾರದವರೆಗೆ ಸುಲಭವಾಗಿ ಸೇವಿಸಬಹುದು.
ಹೀಗೆ ಅತ್ಯಂತ ರುಚಿಕರವಾಗಿರುವ ಮೈಸೂರುಪಾಕ್ ಅನ್ನು ನೀವು ಮನೆಯಲ್ಲಿಯೇ ಸುಲಭವಾಗಿ
ತಯಾರಿಸಬಹುದು.



Click it and Unblock the Notifications