Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಮಟನ್ ಲಿವರ್ ಪೆಪ್ಪರ್ ಫ್ರೈ, ಸುಲಭವಾಗಿ ಮಾಡಬಹುದು
ಲಿವರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಾನ್‌ವೆಜ್ ತಿನ್ನುವ ಎಲ್ಲರು ಲಿವರ್ ಇಷ್ಟಪಡಲ್ಲ, ಆದರೆ ಲಿವರ್ ಟೇಸ್ಟ್ ಮಾಡಿದವರು ಮಾಂಸಕ್ಕಿಂತ ಲಿವರ್ ತಿನ್ನ ಬಯಸುತ್ತಾರೆ, ಅಷ್ಟೊಂದು ಚೆನ್ನಾಗಿರುತ್ತದೆ.
ನಾವಿಲ್ಲಿ ಮಟನ್ ಪೆಪ್ಪರ್ ಫ್ರೈ ರೆಸಿಪಿ ನೀಡಿದ್ದೇವೆ, ಈಗಷ್ಟೇ ಅಡುಗೆ ಮಾಡಲು ಬರುತ್ತೆ ಎಂದು ಹೇಳುವವರು ಕೂಡ ಸುಲಭವಾಗಿ ತಯಾರಿಸಬಹುದು, ಅಲ್ಲದೆ ಈ ಮಟನ್ ಪೆಪ್ಪರ್ ಫ್ರೈ ತುಂಬಾನೇ ರುಚಿಯಾಗಿರುತ್ತೆ ಕೂಡ.

ಬೇಕಾಗುವ ಸಾಮಗ್ರಿ
1 ಚಮಚ ಕಾಳುಮೆಣಸು
2-3 ಲವಂಗ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
1 ಚಮಚ ಸೋಪು
ಲಿವರ್ ಫ್ರೈ ಮಾಡಲು ಬೇಕಾಗುವ ಸಾಮಗ್ರಿ
2 ಚಮಚ ಎಣ್ಣೆ
1 ಈರುಳ್ಳಿ( ಚಿಕ್ಕದಾಗಿ ಕತ್ತರಿಸಿರಬೇಕು)
1/2 ಚಮಚ ಶುಂಠಿ ಪೇಸ್ಟ್
1/2 ಚಮಚ ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಅರಿಶಿಣ ಪುಡಿ (1/2 ಚಮಚ)
ಖಾರದ ಪುಡಿ
ಹಸಿ ಮೆಣಸು 2
1 ಚಮಚ ಕೊತ್ತಂಬರಿ ಪುಡಿ
2-3 ಹಣ್ಣಾದ ಟೊಮೆಟೊ
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ನೀವು ತವಾ ಬಿಸಿ ಮಾಡಿ ಅದರಲ್ಲಿ ಕಾಳುಮೆಣಸು, ಲವಂಗ, ಚಕ್ಕೆ, ಸೋಂಪು
ಹಾಕಿ ರೋಸ್ಟ್ ಮಾಡಿ.
ನಂತರ ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಪುಡಿ ಮಾಡಿ
- ಪಾತ್ರೆಯನ್ನು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕರಿಬೇವು ಹಾಕಿ, ಈರುಳ್ಳಿ, ಹಸಿ ಮೆಣಸು ಸಹಾಕಿ ಫ್ರೈ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ.
- ನಂತರ ಮಟನ್ ಹಾಕಿ, ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ 5 ನಿಮಿಷ ಬೇಯಿಸಿ.
- ಲಿವರ್ ಅರ್ಧ ಬೆಂದಾಗ ರೋಸ್ಟ್ ಮಾಡಿ ಪುಡಿ ಮಾಡಿದ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಮಿಕ್ಸ್ ಮಾಡಿ. ಅದೇ ಸಮಯದಲ್ಲಿ ಟೊಮೆಟೊ ಪೇಸ್ಟ್ ಮಾಡಿ ಹಾಕಿ.
- ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ.
- ನಂತರ ಕಡಿಮೆ ಉರಿಯಲ್ಲಿ ಬೇಯಿಸಿ, ಲಿವರ್ ಡ್ರೈಯಾಗುವವರೆ ಫ್ರೈ ಮಾಡಿ.
- ನಂತರ ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ಲಿವರ್ ಫ್ರೈ ರೆಡಿ.
ಇತರ ಸಲಹೆ:
ಲಿವರ್ ಫ್ರೆಷ್ ಇರಲಿ: ನೀವು ಫ್ರೀಝರ್‌ನಲ್ಲಿಟ್ಟ
ಲಿವರ್ ಬಳಸಬೇಡಿ, ಬದಲಿಗೆ ಫ್ರೆಷ್ ಲಿವರ್ ಬಳಿಸಿ, ಮಟನ್ ಅಂಗಡಿಯಿಂದ ತಂದು
ಬಳಸಿ.
ಕಾಳುಮೆಣಸು: ಮಣಸಿನ ಪುಡಿ ಬದಲಿಗೆ ಕಾಳು ಮೆಣಸು ಹೆಚ್ಚಾಗಿ
ಬಳಸಿ
ಟೊಮೆಟೊ: ಹಣ್ಣಾದ ಟೊಮೆಟೊ ಪೇಸ್ಟ್ ಮಾಡಿ, ಸ್ವಲ್ಪ ಹಸಿ
ಇರುವ ಟೊಮೆಟೊ ಬಳಸಬೇಡಿ.



Click it and Unblock the Notifications