Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನ್ನ, ಚಪಾತಿ ಜೊತೆ ಸವಿಯಲು ಸೂಪರ್ ಟೇಸ್ಟ್ನ ಮಶ್ರೂಮ್ ಮಸಾಲೆ ರೆಸಿಪಿ
ನೀವು ಮಶ್ರೂಮ್ ಪ್ರಿಯರಾಗಿದ್ದರೆ ಇಲ್ಲಿದೆ ನಿಮಗಾಗಿ ಮಶ್ರೂಮ್ ಮಸಾಲ ರೆಸಿಪಿ. ಅಣಬೆಯಿಂದ ಹಲವಾರು ರುಚಿಯಲ್ಲಿ ಅಡುಗೆ ತಯಾರಿಸಬಹುದು. ಅದರಲ್ಲೂ ಅದರ ಮಸಾಲೆಯನ್ನು ನೂರಕ್ಕೂ ಹೆಚ್ಚು ರುಚಿಯಲ್ಲಿ ತಯಾರಿಸಬಹುದು.

ನಾವಿಲ್ಲಿ ಸ್ವಲ್ಪ ಗಟ್ಟಿ ಗ್ರೇವಿಯ ಮಸಾಲ ನೀಡಿದ್ದೇವೆ. ಈ ಮಸಾಲ, ಅನ್ನ, ಚಪಾತಿ ಇವುಗಳ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಈ ಮಸಾಲೆ ಮಾಡುವ ವಿಧಾನ ಸರಳವಾಗಿದ್ದು ರೆಸಿಪಿ ನೋಡಿ ಹೀಗಿದೆ:
Recipe By: Reena TK
Recipe Type: Veg
Serves: 4
-
ಬೇಕಾಗುವ ಸಾಮಗ್ರಿ
* 3 ಚಮಚ ಅಡುಗೆ ಎಣ್ಣೆ
* 2-3 ಲವಂಗ
* 5-6 ಕಾಳು ಮೆಣಸು
* 2 ಏಲಕ್ಕಿ
* 1 ಕಪ್ಪು ಏಲಕ್ಕಿ
* 1 ಕಪ್ ಈರುಳ್ಳಿ (ಉದ್ದುದ್ದವಾಗಿ ಹೆಚ್ಚಿದ್ದು)
* 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1 ಕಪ್ ಟೊಮೆಟೊ (ಚಿಕ್ಕದಾಗಿ ಕತ್ತರಿಸಿದ್ದು)
* 1/4 ಕಪ್ ಟೊಮೆಟೊ ಪೇಸ್ಟ್
* 2 ಚಮಚ ಕೊತ್ತಂಬರಿ ಪುಡಿ
* ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
* 1 ಚಮಚ ಅರಿಶಿಣ ಪುಡಿ
*1/2 ಚಮಚ ಗರಂ ಮಸಾಲ ಪುಡಿ
* 1/2 ಚಮಚ ಕಾಳು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು
* 300ಗ್ರಾಂ ಮಶ್ರೂಮ್ (ಅಣಬೆ)
* 1 ಕ್ಯಾಪ್ಸಿಕಂ
* 1 ಚಮಚ ನಿಂಬೆರಸ
-
ಮಾಡುವ ವಿಧಾನ:
* ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದು ಬಿಸಿಯಾದಾಗ ಅದಕ್ಕೆ ಲವಂಗ, ಕಾಳು ಮೆಣಸು, ಹಸಿರು ಏಲಕ್ಕಿ, ಕಪ್ಪು ಏಲಕ್ಕಿ ಹಾಕಿ ಕೆಲವು ಸೆಕೆಂಡ್ ಫ್ರೈ ಮಾಡಿ.
* ಈಗ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಟೊಮೆಟೊ ಹಾಕಿ ಅದು ಸ್ವಲ್ಪ ಮೆತ್ತಗಾದ ಮೇಲೆ ಟೊಮೆಟೊ ಪೇಸ್ಟ್ ಮಾಡಿ 2-3 ನಿಮಿಷ ಸೌಟ್ನಿಂದ ಆಡಿಸಿ.
* ಈಗ ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಪುಡಿ, ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಎಣ್ಣೆ ಮಸಾಲೆಯಿಂದ ಬೇರ್ಪಟ್ಟು ಮೇಲ್ಭಾಗ ತೇಲುವಷ್ಟು ಹೊತ್ತು ಫ್ರೈ ಮಾಡಿ (5-7 ನಿಮಿಷ).
* ಈಗ ಅಣಬೆ ಹಾಕಿ ಮಿಶ್ರ ಮಾಡಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ (ಮಧ್ಯದಲ್ಲಿ ಎರಡು ಬಾರಿ ಸೌಟ್ನಿಂದ ಆಡಿಸಬೇಕು).
* ಈಗ ಗಟ್ಟಿ ಗ್ರೇವಿಯಾದ ಮೇಲೆ ಅದನ್ನು ಉರಿಯಿಂದ ಇಳಿಸಿ ಅದಕ್ಕೆ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ ಚಪಾತಿ, ರೊಟ್ಟಿ ಅಥವಾ ಬಿಸಿಬಿಸಿಯಾದ ಅನ್ನ ಜೊತೆ ಸರ್ವ್ ಮಾಡಿ.
- ನೀವು ಬೇಕಿದ್ದರೆ ಅಣಬೆ ಜೊತೆಗೆ ಬೇಬಿಕಾರ್ನ್, ಪನ್ನೀರ್ ಕೂಡ ಸೇರಿಸಬಹುದು.
- ಸರ್ವ್ -
- ಕ್ಯಾಲೋರಿ - 158ಕ್ಯಾ
- ಕಾರ್ಬ್ಸ್ - 14 ಗ್ರಾಂ
- ನಾರಿನಂಶ - 3ಗ್ರಾಂ



Click it and Unblock the Notifications