Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈಗಲೇ ಬರೆದಿಟ್ಟುಕೊಳ್ಳಿ! ದಿನಾಲು ಮಾಡಿದ್ದೆ ಮಾಡ್ಬೇಡಿ.. ಟೈಮ್ ಸೇವ್ ಮಾಡುವ ಟಿಫನ್‌ಗಳಿವು
ದಿನಾ ಬೆಳಗ್ಗಿನ ಟಿಫನ್‌ಗೆ ಬೇರೆ ಬೇರೆ ರೆಸಿಪಿ ಮಾಡ್ತಾ ಇರ್ತೀವಿ. ಕೇವಲ ಚಪಾತಿ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡಲ್ಲ. ದಿನಾಲು ಮಾಡಿದ್ದೆ ಮಾಡ್ತೀಯಾ ಅಂತ ಕೋಪ ಮಾಡಿಕೊಳ್ತಾರೆ. ಹಾಗಿದ್ರೆ, ಬೆಳಗ್ಗೆ ಅವಸರದಲ್ಲಿ ಏನು ಮಾಡಬೇಕು? 10 ನಿಮಿಷಗದಲ್ಲಿ ಈ ಬೆಳಗ್ಗಿನ ನಾಷ್ಟಾ (Morning Tiffin Ideas) ಟ್ರೈ ಮಾಡಿ. ನೀವು ಖಂಡಿತ ಪದೇ ಪದೆ ಮಾಡ್ತೀರಾ. ಮನೆಮಂದಿಯೆಲ್ಲ ಇಷ್ಟಪಡುತ್ತಾರೆ. ನಾವಿಂದು ದಿನಕ್ಕೊಂದು ರುಚಿಯಾದ ಬ್ರೇಕ್ ಫಾಸ್ಟ್ ಮಾಡುವ ಐಡಿಯಾ ತಿಳಿಸುತ್ತೇವೆ. ಕೆಲಸದ ಒತ್ತಡದಲ್ಲಿರುವ ಮಹಿಳೆಯರಿಗೆ ಇವು ಸಮಯ ಉಳಿಸುತ್ತವೆ. ಕೆಲವು ರುಚಿಕರ ಮತ್ತು ಆರೋಗ್ಯಕರವಾದ ಟಿಫನ್‌ಗಳು (Quick Tiffin Ideas) ಇಲ್ಲಿವೆ ನೋಡಿ.
ಪ್ರಸ್ತುತ ಒತ್ತಡದ ಜೀವನದಲ್ಲಿ, ನಮಗಾಗಿ ಟೈಮ್ ಕೊಡುವುದು ತುಂಬಾ ಕಷ್ಟ. ನಾವು ಕೆಲಸ ಮಾಡುತ್ತಿದ್ದರೆ ಟೈಮ್ ಬ್ಯಾಲೆನ್ಸ್ ಮಾಡುವುದು ತುಸು ಕಷ್ಟ. ಇನ್ನು ಮನೆಯಲ್ಲಿ ಮಕ್ಕಳಿದ್ದರೆ, ಮನೆಯಿಂದ ಬೇರೆ ಕಡೆ ವಾಸಿಸುತ್ತಿದ್ದರೆ ತೊಂದರೆ ಖಂಡಿತ. ಬೆಳಗ್ಗೆ, ನಾವು ಟಿಫಿನ್ ಬಗ್ಗೆ ಯೋಚಿಸಬೇಕು. ಮತ್ತು ಬೇಗನೆ ತಯಾರಿಸಬಹುದಾದ ಮತ್ತು ಆರೋಗ್ಯಕರವಾದ ತಿಂಡಿ ಮಾಡಬೇಕು. ದಿನಾಲೂ ಈ ಸಮಸ್ಯೆ ಎದುರಿಸುತ್ತೇವೆ. ಹಾಗಿದ್ರೆ, ಬೆಳಗ್ಗಿನ ಟಿಫನ್‌ಗೆ ಏನು ಮಾಡಬಹುದು ಅಥವಾ ಬೇಗನೇ ತಯಾರಿಸಬಹುದಾದ ಮತ್ತು ಆರೋಗ್ಯಕರವಾದ ತಿಂಡಿ ಯಾವುದು? ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಮೊಸರು ಅನ್ನ
ನೀವು ಬೆಳಗ್ಗೆ ಕೆಲಸದ ಆತುರದಲ್ಲಿದ್ದರೆ ಮೊಸರು ಅನ್ನ (Curd rice) ಮಾಡಬಹುದು. ಇದನ್ನು ಮಾಡಲು, ನೀವು ನಿನ್ನೆ ರಾತ್ರಿಯ ಉಳಿದ ಅನ್ನವನ್ನು ಬಳಸಬಹುದು. ಅನ್ನವನ್ನು ಮೊಸರಿನೊಂದಿಗೆ ಬೆರೆಸಿ. ಬಳಿಕ ಅದರ ಮೇಲೆ ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು ಮತ್ತು ಕೆಂಪು ಮೆಣಸಿನಕಾಯಿಯ ಒಗ್ಗರಣೆ ಹಾಕಿ. ಇದು ಬೇಗನೆ ತಯಾರಾಗುತ್ತದೆ. ಇದು ಹೊಟ್ಟೆಗೆ ಹಿತ ಮತ್ತು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.
ರವೆ ಇಡ್ಲಿ
ಟಿಫಿನ್‌ಗೆ ನೀವು ರವೆ ಇಡ್ಲಿ (Rava idli) ಸಹ ಮಾಡಬಹುದು. ನೀವು ಈ ಇಡ್ಲಿ ಬ್ಯಾಟರ್ ಅನ್ನು 20 ರಿಂದ 25 ನಿಮಿಷಗಳಲ್ಲಿ ತಯಾರಿಸಬಹುದು. ಈ ಇಡ್ಲಿಯನ್ನು ರವೆ, ಮೊಸರು ಮತ್ತು ಉಪ್ಪಿನೊಂದಿಗೆ ತಯಾರಿಸಬಹುದು. ರವೆಯನ್ನು ಮೊಸರಿನೊಂದಿಗೆ ಬೆರೆಸಿ ಬಳಿಕ ಸಾಸಿವೆ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆಯನ್ನು ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಮತ್ತು ಹಿಟ್ಟು ನಿಲ್ಲಲು ಬಿಡಿ. ಈ ಹಿಟ್ಟಿನಿಂದ ಇಡ್ಲಿ ತಯಾರಿಸಿ. ನೀವು ಇದಕ್ಕೆ ಕ್ಯಾರೆಟ್ ಸಹ ಹಾಕಬಹುದು. ಇದನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ಬಡಿಸಬಹುದು.
ಮೊಳಕೆ ಸಲಾಡ್
ಸದೃಢ ಆಹಾರಕ್ಕಾಗಿ ಬೆಳಗಿನ ತಿಂಡಿಗೆ ಹೀಗೆ ಮಾಡಬಹುದು. ನಿಮ್ಮ ಟಿಫಿನ್‌ನಲ್ಲಿ ಫೈಬರ್ ಭರಿತ ಮೊಳಕೆ ಸಲಾಡ್ (Sprouts Salad) ಅನ್ನು ಸಹ ನೀವು ತೆಗೆದುಕೊಂಡು ಹೋಗಬಹುದು. ಇದರಲ್ಲಿ ನೀವು ವಿವಿಧ ರೀತಿಯ ತರಕಾರಿಗಳು ಮತ್ತು ಮಿಶ್ರ ಮೊಳಕೆಗಳನ್ನು ಬಳಸಬಹುದು. ಉಪ್ಪು ಮತ್ತು ನಿಂಬೆಹಣ್ಣನ್ನು ಹಾಕಿದ ಬಳಿಕ, ಅದು ತುಂಬಾ ರುಚಿಕರವಾಗಿರುತ್ತದೆ. ಇನ್ನು ಮೊಳಕೆ ಕಟ್ಟಿದ ಹೆಸರುಕಾಳಿನ ಸಲಾಡ್ ಸಹ ಆರೋಗ್ಯಕ್ಕೆ ಉತ್ತಮ. ತೂಕ ಕಡಿಮೆ ಮಾಡಲು ಒಳ್ಳೆಯ ಆಹಾರ.
ಅವಲಕ್ಕಿ
ಅವಲಕ್ಕಿ (Avalakki) ಬೆಳಗಿನ ಉಪಾಹಾರದಲ್ಲಿ ಬಳಸುವ ಜನಪ್ರಿಯ ತಿಂಡಿ. ಇದು ಬೇಗನೆ ತಯಾರಾಗುತ್ತದೆ ಖಾದ್ಯವೂ ಹೌದು. ಅವಲಕ್ಕಿ (Flattened rice) ತಿನ್ನಲು ರುಚಿಕರವಾಗಿರುತ್ತದೆ. ಜೊತೆಗೆ, ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. 10 ನಿಮಿಷದಲ್ಲಿ ಹೊಸ ರುಚಿ ಅವಲಕ್ಕಿ ಮಾಡಬಹುದು.
ಕಡ್ಲೆಹಿಟ್ಟಿನ ದೋಸೆ
ಕಡ್ಲೆಹಿಟ್ಟಿನ ದೋಸೆ (Besan Dosa) ಅಥವಾ ಬೇಸನ್ ಚೀಲಾ ಒಂದು ಸುಲಭ ಮತ್ತು ರುಚಿಕರವಾದ ತಿಂಡಿಯಾಗಿದೆ. ನೀವು ನಿಮ್ಮ ಆಯ್ಕೆಯ ಪ್ರಕಾರ ಇದನ್ನು ತಯಾರಿಸಬಹುದು. ಇದನ್ನು ಸಾದಾ ಅಥವಾ ಈರುಳ್ಳಿ ಮತ್ತು ತರಕಾರಿಗಳೊಂದಿಗೆ ಮಾಡಬಹುದು. ಕಡಲೆ ಹಿಟ್ಟಿಗೆ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಅರಿಶಿನ ಸೇರಿಸಿ ದ್ರಾವಣವನ್ನು ತಯಾರಿಸಿ.



Click it and Unblock the Notifications