Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ ಸ್ಪೆಷಲ್: ಮಿಷ್ತಿ ದಹಿ ರೆಸಿಪಿ
ನವರಾತ್ರಿಯ ಸಡಗರ ಅಕ್ಟೋಬರ್ 15ರಿಂದ ಶುರು... ಎಲ್ಲರಿಗೂ ನವರಾತ್ರಿ ವಿಜಯದಶಮಿ ಹಬ್ಬದ ಶುಭಾಶಯಗಳು
ದಪ್ಪದಾದ ಹಾಲು, ಸಕ್ಕರೆ ಪಾಕದ ಮಿಶ್ರಣಗಳಿಂದ ತಯಾರಾಗುವ ಮಿಷ್ತಿ ಡೊಯೈ ಅಥವಾ ಮಿಷ್ತಿ ದಹಿ ಬೆಂಗಾಲಿಯ ವಿಶೇಷ ಸಿಹಿ ತಿನಿಸುಗಳಲ್ಲೊಂದು. ಇದು ಬೆಂಗಾಲಿಯಲ್ಲಿ ಹುಟ್ಟಿರುವ ಸಿಹಿ ಭಕ್ಷ್ಯವಾಗಿದ್ದರೂ ದೇಶದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಹಬ್ಬ, ಉತ್ಸವ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ತಯಾರಿಸಲಾಗುವ ಮಿಶ್ತಿ ಡೊಯೈಯನ್ನು ಎಲ್ಲಾ ವಯಸ್ಸಿನವರೂ ಸಹ ಇಷ್ಟ ಪಟ್ಟು ಸವಿಯುತ್ತಾರೆ.
ಇದನ್ನು ತಯಾರಿಸಲು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆಯಾದರೂ ಮಾಡುವ ವಿಧಾನಗಳು ಬಹಳ ಸುಲಭ ಹಾಗೂ ಸರಳವಾದದ್ದು. ಈ ಸಿಹಿ ಭಕ್ಷ್ಯವು ಸ್ವಲ್ಪ ಹುಳಿ, ಸ್ವಲ್ಪ ಸಿಹಿಯ ರುಚಿಯನ್ನು ನೀಡುವ ಮೂಲಕ ಅನನ್ಯವಾದ ಅನುಭವ ನೀಡುತ್ತದೆ. ನೀವು ಈ ಸಿಹಿ ತಿಂಡಿಯನ್ನು ಮಾಡುವ ಉತ್ಸಾಹದಲ್ಲಿದ್ದರೆ ಇಲ್ಲಿ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ವೀಕ್ಷಿಸಿ.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 4 ಮಂದಿಗೆ
-
ಹಾಲು - 750 ಮಿ.ಲೀ
ಸಕ್ಕರೆ - 7,1/2 ಟೇಬಲ್ ಚಮಚ
ನೀರು - 1/4 ಕಪ್
ತಾಜಾ ಮೊಸರು - 1/2 ಕಪ್
ಹೆಚ್ಚಿಕೊಂಡ ಬಾದಾಮಿ - ಅಲಂಕಾರಕ್ಕೆ
ಅಲ್ಯೂಮಿನಿಯಮ್ ಫಾಯಿಲ್
-
1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.
2. ಹಾಲಿನ ಮೊದಲ ಪ್ರಮಾಣಕ್ಕಿಂತ ಅರ್ಧದಷ್ಟು ಆಗುವವರೆಗೂ ಕುದಿಸಿ.
3. ಈ ಮಧ್ಯೆ, ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿಮಾಡಿ.
4. ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಿರಿ.
5. ಸಕ್ಕರೆಯು ತಳ ಹಿಡಿಯುತ್ತಿದೆ ಎಂದಾಗ ಒಮ್ಮೆ ಉರಿಯನ್ನು ಆರಿಸಿ.
6. ಸಕ್ಕರೆ ಕರಗಿ, ಕಂದು ಬಣ್ಣಕ್ಕೆ ತಿರುಗುವ ತನಕ ಉರಿಯನ್ನು ಆರಿಸುವುದು ಮತ್ತು ಹಚ್ಚುವ ಪ್ರಕ್ರಿಯೆಯನ್ನು ಮುಂದುವರಿಸುತ್ತಲೇ ಇರಿ.
7. ಉರಿಯನ್ನು ಆರಿಸಿ, ನೀರನ್ನು ಬೆರೆಸಿ.
8. ಚೆನ್ನಾಗಿ ಮಿಶ್ರಗೊಳಿಸಿ ಒಂದೆಡೆ ಇಡಿ.
9. ಹಾಲು ಅರ್ಧ ಪ್ರಮಾಣಕ್ಕೆ ಇಳಿದಾಗ ಸಕ್ಕರೆ ಪಾಕವನ್ನು ಸೇರಿಸಿ.
10. ಚೆನ್ನಾಗಿ ಕಲುಕಿ, ಉರಿಯನ್ನು ಆರಿಸಿ.
11. ಉಗುರು ಬೆಚ್ಚಗಾಗುವಷ್ಟು ತಣಿಯಲು ಒಂದೆಡೆ ಇಡಿ.
12. ತಾಜಾ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
13. ಸವಿಯಲು ನೀಡುವ ಮಟಕಾ/ಬೌಲ್‍ಗೆ ವರ್ಗಾಯಿಸಿ.
14. ಅಲ್ಯುಮಿನಿಯಂ ಫಾಯಿಲ್‍ನಿಂದ ಮಟಕಾವನ್ನು ಮುಚ್ಚಿರಿ.
15. ಫ್ರಿಜ್‍ನಲ್ಲಿ 10-12 ಗಂಟೆಗಳ ಕಾಲ ಇಡಿ.
16. ಫಾಯಿಲ್‍ಅನ್ನು ತೆಗೆದು ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕಾರ ಮಾಡಿ.
- 1. ಹುಳಿಯಿಲ್ಲದ, ತಾಜಾ ಮೊಸರನ್ನು ಬಳಸುತ್ತಿದ್ದೀರಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
- 2. ಸಕ್ಕರೆ ಪಾಕ ಮಾಡುವಾಗ ಉರಿಯನ್ನು ಆರಿಸುವುದು ಮತ್ತು ಹಚ್ಚುವ ಪ್ರಕ್ರಿಯೆಯನ್ನು ಮಾಡಬೇಕು. ಇಲ್ಲವಾದರೆ ಪಾಕ ತಳಹಿಡಿದು ಹೊತ್ತಿಹೋಗುವುದು.
- 3. ಮೊಸರನ್ನು ನುಣುಪಾಗಿಸಿಕೊಳ್ಳಲು ಚೆನ್ನಾಗಿ ಕಲುಕಬೇಕು.
- ಸರ್ವಿಂಗ್ ಸೈಜ್ - 1 ಬೌಲ್
- ಕ್ಯಾಲೋರಿ - 152 ಕ್ಯಾಲ್
- ಫ್ಯಾಟ್ - 5 ಗ್ರಾಂ.
- ಪ್ರೋಟೀನ್ - 4 ಗ್ರಾಂ.
- ಕಾರ್ಬೋಹೈಡ್ರೇಟ್ - 23 ಗ್ರಾಂ.
- ಸಕ್ಕರೆ - 19 ಗ್ರಾಂ.
ಹಂತ ಹಂತವಾದ ಚಿತ್ರ ವಿವರಣೆ
1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

2. ಹಾಲಿನ ಮೊದಲ ಪ್ರಮಾಣಕ್ಕಿಂತ ಅರ್ಧದಷ್ಟು ಆಗುವವರೆಗೂ ಕುದಿಸಿ.

3. ಈ ಮಧ್ಯೆ, ಇನ್ನೊಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿಮಾಡಿ.

4. ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಿರಿ.

5. ಸಕ್ಕರೆಯು ತಳ ಹಿಡಿಯುತ್ತಿದೆ ಎಂದಾಗ ಒಮ್ಮೆ ಉರಿಯನ್ನು ಆರಿಸಿ.

6. ಸಕ್ಕರೆ ಕರಗಿ, ಕಂದು ಬಣ್ಣಕ್ಕೆ ತಿರುಗುವ ತನಕ ಉರಿಯನ್ನು ಆರಿಸುವುದು ಮತ್ತು ಹಚ್ಚುವ ಪ್ರಕ್ರಿಯೆಯನ್ನು ಮುಂದುವರಿಸುತ್ತಲೇ ಇರಿ.

7. ಉರಿಯನ್ನು ಆರಿಸಿ, ನೀರನ್ನು ಬೆರೆಸಿ.

8. ಚೆನ್ನಾಗಿ ಮಿಶ್ರಗೊಳಿಸಿ ಒಂದೆಡೆ ಇಡಿ.

9. ಹಾಲು ಅರ್ಧ ಪ್ರಮಾಣಕ್ಕೆ ಇಳಿದಾಗ ಸಕ್ಕರೆ ಪಾಕವನ್ನು ಸೇರಿಸಿ.

10. ಚೆನ್ನಾಗಿ ಕಲುಕಿ, ಉರಿಯನ್ನು ಆರಿಸಿ.

11. ಉಗುರು ಬೆಚ್ಚಗಾಗುವಷ್ಟು ತಣಿಯಲು ಒಂದೆಡೆ ಇಡಿ.

12. ತಾಜಾ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

13. ಸವಿಯಲು ನೀಡುವ ಮಟಕಾ/ಬೌಲ್‍ಗೆ ವರ್ಗಾಯಿಸಿ.

14. ಅಲ್ಯುಮಿನಿಯಂ ಫಾಯಿಲ್‍ನಿಂದ ಮಟಕಾವನ್ನು ಮುಚ್ಚಿರಿ.

15. ಫ್ರಿಜ್‍ನಲ್ಲಿ 10-12 ಗಂಟೆಗಳ ಕಾಲ ಇಡಿ.

16. ಫಾಯಿಲ್‍ಅನ್ನು ತೆಗೆದು ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕಾರ ಮಾಡಿ.

Click it and Unblock the Notifications