Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ಯಾವಿಗೆ ಪಾಯಸ ರೆಸಿಪಿ
ಶ್ಯಾವಿಗೆ ಪಾಯಸ ಎನ್ನುವುದು ಸಾಂಪ್ರದಾಯಿಕ ಸಿಹಿ ತಿಂಡಿ. ಬಹುತೇಕ ಸಂದರ್ಭಗಳಲ್ಲಿ ದೇಶದೆಲ್ಲೆಡೆಯೂ ಶ್ಯಾವಿಗೆ ಪಾಯಸವನ್ನು ಮಾಡುತ್ತಾರೆ. ಭಾರತದಲ್ಲಿ ಅನೇಕ ಹಬ್ಬಗಳಲ್ಲಿ ವೆರ್ಮಿಕೆಲ್ಲಿ ಖೀರ್ ಅಥವಾ ಸ್ವೀಟ್ ಸೆವಿಯನ್(ಶ್ಯಾವಿಗೆ ಪಾಯಸ) ಮಾಡುವ ಮೂಲಕ ಆನಂದಿಸುತ್ತಾರೆ. ಇದನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಹಾಗೂ ಉಪವಾಸ, ವ್ರತ ಆಚರಣೆಯ ಸಂದರ್ಭದಲ್ಲೂ ಸ್ವೀಕರಿಸುತ್ತಾರೆ.
ಸಕ್ಕರೆ, ಹಾಲಿನ ಮಿಶ್ರಣದಲ್ಲಿ ಅರಳುವ ಶ್ಯಾವಿಗೆ ಪಾಯಸ ಸಿಹಿತಿಂಡಿಯ ವರ್ಗಕ್ಕೆ ಸೇರುತ್ತದೆ. ರುಚಿಯನ್ನು ದ್ವಿಗುಣ ಗೊಳಿಸುವ ಉದ್ದೇಶದಿಂದ ನಾವಿಲ್ಲಿ ಖೋಯಾವನ್ನು ಸಹ ಸೇರಿಸಿದ್ದೇವೆ. ಆಗಾಗ ನಾಲಿಗೆ ಚಪ್ಪರಿಸಲು, ಸಿಹಿ ತಿಂಡಿಯ ಬಯಕೆಯಾದಾಗ ಹಾಗೂ ಇನ್ನಿತರ ಸನ್ನಿವೇಶಗಳಲ್ಲಿ ಬಹು ಬೇಗ ತಯಾರಿಸಬಹುದಾದ ಸರಳ ಪಾಕವಿಧಾನ ಇದು.
ಶ್ಯಾವಿಗೆ ಪಾಯಸ ಒಂದೊಂದು ಪ್ರದೇಶದಲ್ಲೂ ವಿಭಿನ್ನ ರೀತಿಯಲ್ಲಿ ತಯಾರಿಸುತ್ತಾರೆ. ರುಚಿಯಲ್ಲೂ ಸ್ವಲ್ಪ ವ್ಯತ್ಯಾಸ ಇರುವುದನ್ನು ನಾವು ಕಾಣಬಹುದು. ಈ ಒಂದು ಸುಲಭ ಸಿಹಿ ಪಾಕವಿಧಾನವನ್ನು ನೀವು ಮಾಡಲು ಬಯಸುವುದರಾದರೆ ಇಲ್ಲಿರುವ ಚಿತ್ರ ವಿವರಣೆ ಹಾಗೂ ವೀಡಿಯೋಅನ್ನು ನೋಡಿ ತಿಳಿದುಕೊಳ್ಳಬಹುದು.
ಶ್ಯಾವಿಗೆ ಪಾಯಸ ಪಾಕವಿಧಾನದ ವೀಡಿಯೋ

Recipe By: ಮೀನಾ ಭಂಡಾರಿ
Recipe Type: ಸಹಿ ತಿಂಡಿ
Serves: 2 ಮಂದಿಗೆ
-
ತುಪ್ಪ-1 ಚಮಚ
ಶ್ಯಾವಿಗೆ - 1 ಕಪ್
ಹಾಲು -750 ಮಿ.ಲೀ.
ಖೋಯಾ -2 ಚಮಚ
ಸಕ್ಕರೆ - 5 ಚಮಚ
ಒಣದ್ರಾಕ್ಷಿ -5-6
ಗೋಡಂಬಿ 4-5 (ಅಲಂಕಾರಕ್ಕೆ)
ಹೆಚ್ಚಿದ ಬಾದಾಮಿ - 4-5 (ಅಲಂಕಾರಕ್ಕೆ)
ಹೆಚ್ಚಿದ ಪಿಸ್ತಾ-3-4 (ಅಲಂಕಾರಕ್ಕೆ)
-
1.ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಶ್ಯಾವಿಗೆಯನ್ನು ಸೇರಿಸಿ ಹುರಿಯಿರಿ.
2. ಶ್ಯಾವಿಗೆ ಸ್ವಲ್ಪ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
3. ಇದಕ್ಕೆ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
4. ನಂತರ 4-5 ನಿಮಿಷಗಳ ಕಾಲ ಕುದಿಯಲು ಬಿಡಿ.
5. ಖೋಯಾವನ್ನು ಬೆರೆಸಿ 2 ನಿಮಿಷಗಳ ಕಾಲ ಚೆನ್ನಾಗಿ ಕಲುಕಿ.
6. ನಂತರ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗು ತನಕ ಕೈಯಾಡಿಸುತ್ತಲೇ ಇರಿ.
7. ಒಣ ದ್ರಾಕ್ಷಿಯನ್ನು ಸೇರಿಸಿ ಕಲುಕುತ್ತಿರಿ.
8. ನಂತರ ಬಡಿಸುವ ಬಟ್ಟಲಿಗೆ ಹಾಕಿ
9. ಗೋಡಂಬಿ, ಹೆಚ್ಚಿದ ಬಾದಾಮಿ ಮತ್ತು ಪಿಸ್ತಗಳಿಂದ ಅಲಂಕರಿಸಿ.
- 1.ಸಕ್ಕರೆ ಹಾಕಿ ಕುದಿಸುವ ಮೊದಲು ಹಾಲಿನಲ್ಲಿ ಶ್ಯಾವಿಗೆ ಬೆಂದಿದೆಯೇ ಎನ್ನುವುದನ್ನು ಗಮನಿಸಬೇಕು. ಸಕ್ಕರೆ ಸೇರಿಸಿದ ಮೇಲೆ ಮತ್ತೆ ಶ್ಯಾವಿಗೆ ಮೃದುವಾಗಿ ಬೇಯುವುದಿಲ್ಲ.
- 2. ಬಡಿಸುವ ಬಟ್ಟಲಿಗೆ ಹಾಕುವ ಮುನ್ನ ಬೆಂದಿದೆಯೇ ಎನ್ನುವುದನ್ನು ಪರೀಕ್ಷಿಸಿ.
- 3. ಖೋಯಾ ಹಾಕುವುದು ನಿಮ್ಮ ಆಯ್ಕೆ. ಬಳಸದೆಯೇ ಪಾಯಸ ತಯಾರಿಸಬಹುದು.
- 4. ಹೆಚ್ಚುವರಿ ಪರಿಮಳ ಹಾಗೂ ರುಚಿಗೆ ಖರ್ಜೂರಾ ಹಾಗೂ ಇನ್ನಿತರ ಒಣ ಹಣ್ಣುಗಳನ್ನು ಸೇರಿಸಬಹುದು.
- ಬಡಿಸುವ ಪ್ರಮಾಣ - 1 ಕಪ್
- ಕ್ಯಾಲೋರಿ - 170 ಕ್ಯಾಲ್
- ಕೊಬ್ಬು - 6.0 ಗ್ರಾಂ
- ಪ್ರೋಟೀನ್ - 4.9 ಗ್ರಾಂ.
- ಕಾರ್ಬೋಹೈಡ್ರೇಟ್ಸ್ - 24.5 ಗ್ರಾಂ.
- ಸಕ್ಕರೆ - 19.4
- ನಾರಿನಂಶ - 0.2 ಗ್ರಾಂ
ಹಂತ ಹಂತವಾದ ಪಾಕವಿಧಾನ:
1. ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಶ್ಯಾವಿಗೆಯನ್ನು ಸೇರಿಸಿ ಹುರಿಯಿರಿ.


2. ಶ್ಯಾವಿಗೆ ಸ್ವಲ್ಪ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

3. ಇದಕ್ಕೆ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.


4. ನಂತರ 4-5 ನಿಮಿಷಗಳ ಕಾಲ ಕುದಿಯಲು ಬಿಡಿ.

5. ಖೋಯಾವನ್ನು ಬೆರೆಸಿ 2 ನಿಮಿಷಗಳ ಕಾಲ ಚೆನ್ನಾಗಿ ಕಲುಕಿ.


6. ನಂತರ ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗು ತನಕ ಕೈಯಾಡಿಸುತ್ತಲೇ ಇರಿ.


7. ಒಣ ದ್ರಾಕ್ಷಿಯನ್ನು ಸೇರಿಸಿ ಕಲುಕುತ್ತಿರಿ.


8. ನಂತರ ಬಡಿಸುವ ಬಟ್ಟಲಿಗೆ ಹಾಕಿ

9. ಗೋಡಂಬಿ, ಹೆಚ್ಚಿದ ಬಾದಾಮಿ ಮತ್ತು ಪಿಸ್ತಗಳಿಂದ ಅಲಂಕರಿಸಿ.






Click it and Unblock the Notifications