Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಕಿ ರೊಟ್ಟಿ ಈ ಮಸಾಲೆ, ತರಕಾರಿ ಹಾಕಿ ತಟ್ಟಿದರೆ ರುಚಿ ಇನ್ನೂ ಸೂಪರ್
ಅಕ್ಕಿ ರೊಟ್ಟೆಯನ್ನು ಎರಡು ರೀತಿಯಲ್ಲಿ ಮಾಡಬಹುದು, ಒಂದು ಪ್ಲೇನ್ ರೊಟ್ಟಿ, ಆದರೆ ಮಸಾಲೆ ಹಾಕಿ ಮಾಡುವ ಅಕ್ಕಿ ರೊಟ್ಟಿ ಇನ್ನೂ ಸ್ಪೆಷಲ್, ತೆಳುವಾದ ಆ ಅಕ್ಕಿರೊಟ್ಟಿಯನ್ನು ಸವಿಯಲು ಇನ್ನೂ ರುಚಿ, ಅದರಲ್ಲಿ ಕಾಯಿ ಚಟ್ನಿ ಜೊತೆ ಸವಿದರೆ ಸೂಪರ್. ಬನ್ನಿ ಇದನ್ನು ಮಾಡುವ ಸುಲಭ ರೆಸಿಪಿ ನೋಡೋಣ:

ಅಕ್ಕಿ ಹಿಟ್ಟು 1 ಕಪ್
ಹೆಚ್ಚಿದ ಈರುಳ್ಳಿ- 2
ಹಸಿಮೆಣಸಿನ ಕಾಯಿ - 5-6
ಉಪ್ಪು -3/4 ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು - 1/2 ಕಪ್ ಹೆ
ಕ್ಯಾರೆಟ್ 1/4 ಕಪ್
ಎಣ್ಣೆ 3-4 ಚಮಚ
ಬಿಸಿ ನೀರು
ಸೋಂಪು 1 ಚಮಚ
ಮಾಡುವ ವಿಧಾನ
- ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ, ನಂತರ ಅದಕ್ಕೆ ಕತ್ತರಿಸಿಟ್ಟ ಇತರ ವಸ್ತುಗಳನ್ನು ಸೇರಿಸಿ, ಮತ್ತೊಮ್ಮೆ ಕಲೆಸಿ. ಹೀಗೆ ಕಲೆಸುವಾಗ ಸೋಂಪುಸೇರಿಸಿ ಮಿಕ್ಸ್ ಮಾಡಿ.
- ಹಿಟ್ಟನ್ನು ಹದವಾಗಿ ಕಲೆಸಿ, ಕಲೆಎಸುವಾಗ ಸ್ವಲ್ಪ ಬಿಸಿ ಎಣ್ಣೆ ಬೇಕಾದರೆ ಸೇರಿಸಬಹುದು.
- ಈಗ ಒಂದು ಗಟ್ಟಿ ಪ್ಲಾಸ್ಟಿಕ್ ಇಟ್ಟು ಅದರಲ್ಲಿ ಎಣ್ಣೆ ಸವರಿ
- ನಂತರ ಹಿಟ್ಟಿನಿಂದ ದೊಡ್ಡ ನಿಂಬೆ ಹನ್ಣು ಗಾತ್ರದಷ್ಟು ಉಂಡೆ ಕಟ್ಟಿ, ಕೈಯಿಂದಲೇ ತಟ್ಟಿ, ಕೈಯಿಂದಲೇ ತಟ್ಟಲು ಗೊತ್ತಿಲ್ಲ ಎಂದರೆ ನೀವು ರೊಟ್ಟಿ ಮೆಷನ್ ಬಳಸಬಹುದು.
- ನಂತರ ತವಾದಲ್ಲಿ ಎಣ್ಣೆ ಸವರಿ ರೊಟ್ಟಿ ಹಾಕಿ, ಎರಡೂ ಬದಿ ಬೇಯಿಸಿ, ನಂತರ ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ.
- ಈಗ ರೆಡಿಯಾದ ಅಕ್ಕಿರೊಟ್ಟಿಯನ್ನು ಖಾರ ಚಟ್ನಿ ಜೊತೆ ಸವಿಯಿರಿ.
ಖಾರ ಚಟ್ನಿಗೆ ಬೇಕಾಗುವ ಸಾಮಗ್ರಿ
ತೆಂಗಿನ ತುರಿ 1 ಕಪ್
3-4 ಹಸಿ ಮೆಣಸಿನಕಾಯಿ(ತುಂಬಾ ಖಾರವಿದ್ದರೆ 2 ಮೆಣಸಿನಕಾಯಿ ಸಾಕು)
ಸ್ವಲ್ಪ ಹುಣಸೆಹಣ್ಣು
1 ಈರುಳ್ಳಿ
1 ಚಮಚ ಹುರಿಗಡಲೆ(Optional)
1/2 ಚಮಚ ಉಪ್ಪು
ಈಗ ಎಲ್ಲಾ ಸಾಮಗ್ರಿ ಗ್ರೈಂಡರ್‌ನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿ, ರೆಡಿಯಾದ ಗಟ್ಟಿ ಚಟ್ನಿಯನ್ನು ಅಕ್ಕಿರೊಟ್ಟಿ ಜೊತೆ ಸವಿಯಿರಿ.
ಅಕ್ಕಿ ರೊಟ್ಟಿಗೆ ಪಲ್ಯನೂ ಚೆನ್ನಾಗಿರುತ್ತದೆ, ಆದರೆ ಚಟ್ನಿ ಇರಲೇಬೇಕು ನೋಡಿ. ಹಾಗಾಗಿ ರೊಟ್ಟಿ ಮಾಡ ಈ ಚಟ್ನಿ ಜೊತೆ ಸರ್ವ್ ಮಾಡಿ.



Click it and Unblock the Notifications