Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಸ್ತ್ ಆಗಿ ಮಸಾಲ ವಡೆ ಮಾಡೋದು ಹೇಗೆ..? ಇಷ್ಟು ಸುಲಭನಾ ನೋಡಿ..?
ಮಸಾಲೆ ವಡೆ ಸಾಮಾನ್ಯವಾಗಿ ಎಲ್ಲರೂ ತಿಂದಿರ್ತೀರಾ, ಆದ್ರೆ ಥಟ್ ಅಂತ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ? ನೀವು ಹೋಟೆಲ್‌ನಲ್ಲಿ ಬಾಯಿ ಚಪ್ಪರಿಸಿ ಮಸಾಲಾ ವಡೆ ತಿಂದಿರಬಹುದು, ಆದ್ರೆ ಅದನ್ನು ಮಾಡುವುದು ಹೇಗೆ ಅನ್ನೋದು ನಿಮಗೆ ತಿಳಿದಿರುವುದಿಲ್ಲ. ಸಂಜೆ ವೇಳೆ ಕಾಫಿ, ಟೀ ಜೊತೆ ಈ ಮಸಾಲ ವಡೆ ಸೇವಿಸುತ್ತಾರೆ, ಜೊತೆಗೆ ಬೆಳಗ್ಗೆಯ ತಿಂಡಿಗೂ ಈ ವಡೆ ಹೆಚ್ಚಾಗಿ ಬಳಸುತ್ತಾರೆ.
ಹಾಗಾದರೆ ನಾವಿಂದು ಕಡಲೇ ಬೇಳೆಯಿಂದ ಮಾಡುವ ಮಸಾಲೆ ವಡೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥವೇನು? ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.

ಮಸಾಲೆ ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ-1 ಕಪ್
- ಅವರೇ ಕಾಳು- ಅರ್ಧ ಕಪ್
- ಹಸಿ ಮೆಣಸು-2
- ಈರುಳ್ಳಿ-1 ದೊಡ್ಡದು
- ಶುಂಠಿ
- ಬೆಳ್ಳುಳ್ಳಿ
- ಲವಂಗ-2
- ಸೋಂಕಾಳು
- ಒಣ ಮೆಣಸು-2
- ಹಿದುಕಿದ ಬೇಳೆ (ಇದ್ದರೆ)
- ಎಣ್ಣೆ
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಕಡಲೆ ಬೇಳೆಯನ್ನು ಕಪ್‌ನಲ್ಲಿ ತೆಗೆದುಕೊಂಡು ನೀರಿನಲ್ಲಿ ನೆನೆಪಿ ಸುಮಾರು 2 ಗಂಟೆಗಳ ಕಾಲ ಬೇಳೆಯನ್ನು ನೆನೆಸಿಡಿ, ಬಳಿಕ ನೀರು ತೆಗೆದು ಬದಿಗಿಡಿ. ಬಳಿಕ ಈ ಬೇಳೆಯನ್ನು ತೆಗೆದುಕೊಂಡು ಅದಕ್ಕೆ ಅವರೆಕಾಳು ಕಾಳು, ಶುಂಠಿ, ಬೆಳ್ಳುಳ್ಳಿ, ಸೋಂಕಾಳು, ಲವಂಗ, ಒಣಮೆಣಸು ಹಾಕಿ ರುಬ್ಬಿಕೊಳ್ಳಿ. ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಬಳಿಕ ಈ ರುಬ್ಬಿಕೊಂಡ ತರಿತರಿಯಾದ ಹುಟ್ಟಿಗೆ ಈರುಳ್ಳಿ, ಎಲ್ಲಾ ರೀತಿಯ ಸೊಪ್ಪುಗಳು (ಕೊತ್ತಂಬರಿ, ಕರಿಬೇವು) ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈ ವೇಳೆ ನೀರು ಹಾಕಬೇಡಿ ಮಿಶ್ರಣ ಗಟ್ಟಿಯಾಗಿರಲಿ. ಚೆನ್ನಾಗಿ ಮಿಶ್ರಣ ಮಾಡಬೇಕು, ಈರುಳ್ಳಿಯನ್ನೂ ಕಡಿಮೆ ಹಾಕಬೇಕು ಇಲ್ಲದಿದ್ದರೆ ಮಿಶ್ರಣ ನೀರಾಗುತ್ತದೆ.
ಬಳಿಕ ಹಿಟ್ಟನ್ನು ಸಣ್ಣದಾಗಿ ಉಂಡೆ ಮಾಡಿಕೊಳ್ಳಿ ಬಳಿಕ ಬಾಳೆ ಎಲೆ ಸಣ್ಣ ಪೀಸ್ ಅಥವಾ ಪ್ಲಾಸ್ಟಿಕ್ ಮೇಲೆ ಹಿಟ್ಟಿನ ಉಂಡೆ ಇಟ್ಟು ಅದನ್ನು ವೃತ್ತವಾಗಿ ಒತ್ತಿಕೊಳ್ಳಿ. ಬಳಿಕ ಒಲೆ ಮೇಲೆ ಇಟ್ಟಿರುವ ಪಾತ್ರೆಯಲ್ಲಿ ಎಣ್ಣೆ ಇಟ್ಟು ಮಧ್ಯಮ ಉರಿಯಲ್ಲಿ ಕಾಯಿಸಿ, ಎಣ್ಣೆ ಕಾದ ಬಳಿಕ ಅದಕ್ಕೆ ವಡೆಯನ್ನು ಹಾಕಿ. ಉರಿಯನ್ನು ಹೆಚ್ಚು ಮಾಡಬೇಡಿ, ಮಧ್ಯಮ ಉರಿಯಲ್ಲಿ ಐದಾರು ನಿಮಿಷ ಕಾಯಿಸಿ. ವಡೆಯ ಬಣ್ಣ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಕಾಯಿಸಿ. ವಡೆಯನ್ನು ಎಣ್ಣೆಯಲ್ಲಿ ತಿರುಗಿಸಿ ಹಾಕುತ್ತಿರಿ. ಇಷ್ಟು ಮಾಡಿದರೆ ಮಸಾಲ ವಡೆ ಸವಿಯಲು ಸಿದ್ಧವಾಗುತ್ತದೆ.
ಮಸಾಲ ವಡೆಗೆ ತೆಂಗಿನ ಕಾಯಿ ಚಟ್ನಿ ಮಾಡಿ
ಮಸಾಲ ವಡೆಯನ್ನು ಕಾಫಿ ಟಿ ಜೊತೆಗೂ ಸವಿಯಬಹುದು. ಆದರೆ ತೆಂಗಿನ ಕಾಯಿ ಚಟ್ನಿ
ಜೊತೆ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಹಾಗಾದರೆ ಕಾಯಿ ಚಟ್ನಿ ಮಾಡುವುದು
ಹೇಗೆ ನೋಡಿ.
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಬೆಳ್ಳುಳ್ಳಿ, ಒಣ ಮೆಣಸು ಹಾಕಿ
ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ, ಒಣ ಮೆಣಸು ರೋಸ್ಟ್ ಆಗಬೇಕು.
ನಂತರ ತೆಂಗಿನತುರಿ ಸೇರಿಸಿ ರೋಸ್ಟ್ ಮಾಡಿ, ತೆಂಗಿನ ತುರಿ, ಹುಣಸೆ ಹಣ್ಣು ಸ್ವಲ್ಪ
ಕೆಂಪು ಬಣ್ಣಕ್ಕೆ ತಿರುಗುವಾಗ ಸ್ಟೌವ್‌ನಿಂದ ತೆಗೆಯಿರಿ
ಹುರಿದ ಮಸಾಲೆ ತಣ್ಣಗಾಗಲು ಪ್ಲೇಟ್‌ಗೆ ಹಾಕಿ.
ನಂತರ ಮಿಕ್ಸಿ ಬ್ಲೆಂಡರ್‌ಗೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಗಟ್ಟಿಯಾಗಿ
ಅಥವಾ ಸ್ವಲ್ಪ ನೀರು ನೀರಾಗಿ ನಿಮಗೆ ಹೇಗೆ ಬೇಕೋ ಹಾಗೆ ರುಬ್ಬಿ, ನಂತರ ಒಗ್ಗರಣೆ
ಹಾಕಿದರೆ ಮಸಾಲೆ ವಡೆ ಜೊತೆ ಸವಿಯಲು ಕಾಯಿ ಚಟ್ನಿ ರೆಡಿ



Click it and Unblock the Notifications