Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾವಿನಕಾಯಿಂದ ಮಾಡುವ ಸಿಹಿ ಚಟ್ನಿ ರೆಸಿಪಿ: ಚಪಾತಿ, ದೋಸೆಗೆ ಸೂಪರ್ ಕಾಂಬಿನೇಷನ್
ಮಾವಿನಕಾಯಿ ಸೀಸನ್... ಮೇ ತಿಂಗಳಿನಲ್ಲಿ ಮಾವಿನಕಾಯಿ ಮಾವಿನಹಣ್ಣಾಗುವುದು, ಆದ್ದರಿಂದ ಮಾವಿನಕಾಯಿ ಸಂಬಂಧಿತ ರೆಸಿಪಿ ಈಗಲೇ ಮಾಡುವುದು ಒಳ್ಳೆಯದು. ಉಪ್ಪಿನಕಾಯಿ, ಮಿಡಿ ಉಪ್ಪಿನಕಾಯಿ, ಮಾವಿನಕಾಯಿ ಚಟ್ನಿ, ಮಾವಿನಕಾಯಿ ಚಿತ್ರನ್ನ, ಮಾವಿನಕಾಯಿ ತೊಕ್ಕು ಹೀಗೆ ನೂರಾರು ಬಗೆಯ ರೆಸಿಪಿಗಳನ್ನು ಈ ಸಮಯದಲ್ಲಿಯೇ ಮಾಡಬೇಕು ಅಲ್ವಾ?
ಆದ್ದರಿಂದ ನಾವಿಂದು ಮಾವಿನಕಾಯಿ ಸಿಹಿ ಚಟ್ನಿ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
ಸಕ್ಕರೆ 1/4 ಕೆಜಿ
ಮಾವಿನಕಾಯಿ 1(ಚಿಕ್ಕ ಗಾತ್ರದ್ದು ಆದರೆ 2)
ನೀರು 1/4 ಕಪ್
ಏಲಕ್ಕಿ1 ಚಮಚ
ಮಾಡುವುದು ಹೇಗೆ?
ಮಾವಿನಕಾಯಿ ಸಿಪ್ಪೆ ಸುಲಿದು ತುರಿಯಿರಿ
ಈಗ ದಪ್ಪ ತಳವಿರುವ ಪ್ಯಾನ್ ಬಿಸಿ ಮಾಡಿ
ಅದಕ್ಕೆ ಸಕ್ಕರೆ ಸೇರಿಸಿ ಕೂಡಲೇ ನೀರು ಹಾಕಿ ( ಇಲ್ಲದಿದ್ದರೆ ಸಕ್ಕರೆ
ಕಪ್ಪಾಗುವುದು)
ಸಕ್ಕರೆ ಕರಗಿ ಸಕ್ಕರೆ ಪಾಕ ರೀತಿಯಾಗುವುದು
ಈಗ ಗ್ಯಾಸ್ ಆಫ್ ಮಾಡಿ ತುರಿದ ಮಾವಿನಕಾಯಿ ಸೇರಿಸಿ, ಏಲಕ್ಕಿ ಸೇರಿಸಿ ಮಿಕ್ಸ್
ಮಾಡಿ ಗಾಳಿಯಾದ ಗಾಜಿನ ಡಬ್ಬದಲ್ಲಿ ಹಾಕಿಡಿ. ಈ ರೀತಿ ಮಾಡಿಟ್ಟರೆ ಒಂದು
ತಿಂಗಳಿಗಿಂತಲೂ ಅಧಿಕ ಸಮಯ ಬಳಸಬಹುದು, ಫ್ರಿಡ್ಜ್‌ನಲ್ಲಿ ಇಟ್ಟರೆ ಇನ್ನೂ ಅಧಿಕ
ಸಮಯ ಬಳಸಬಹುದು
ಇತರ ಟಿಪ್ಸ್
- ನೀವು ಸಕ್ಕರೆ ಬಳಸಲ್ಲ ಎಂದಾದರೆ ಬೆಲ್ಲ ಬಳಸಬಹುದು
- ತುರಿದ ಮಾವಿನಕಾಯಿ ಜೊತೆಗೆ ಕೆಲವೊಂದು ಮಾವಿನಕಾಯಿ ತುಂಡುಗಳನ್ನೂ ಸೇರಿಸಬಹುದು.
- ಇನ್ನು ಸಕ್ಕರೆ ಪಾಕದಲ್ಲಿ ಒಂದು ಅಥವಾ ಎರಡು ಹಸಿ ಮೆಣಸು ಹಾಕಿ ಸಿಹಿ-ಮಿಶ್ರಿತ ಖಾರದ ರುಚಿ ಇಷ್ಟವಾಗಬಹುದು.
ಇದನ್ನು ಯಾವುದರ ಜೊತೆಗೆ ಸವಿಯಬಹುದು?
ಅನ್ನದ ಜೊತೆ ಸವಿಯಬಹುದು, ಆದರೆ ಚಪಾತಿ, ದೋಸೆಗೆ ಇದು ಸೂಪರ್ ಆಗಿರುತ್ತದೆ.
ಮಾವಿನಕಾಯಿ ಪ್ರಯೋಜನಗಳು
ಮಾವಿನಕಾಯಿ ಮೈ ಉಷ್ಣಾಂಶ ಕಡಿಮೆಯಾಗುವುದು. ಇದು ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ. ಆದ್ದರಿಂದ ಬೇಸಿಗೆಯಲ್ಲಿ ಮಾವಿನಕಾಯಿ ತಿನ್ನುವುದು ಒಳ್ಳೆಯದು. ಅಲ್ಲದೆ ಇದು ಸೀಸನಲ್ ಫುಡ್, ಬೇಸಿಗೆ ಕಾಲಕ್ಕೆ ಸೂಕ್ತವಾದ ಆಹಾರ ಇದಾಗಿದೆ. ಆದ್ದರಿಂದ ಈ ಸೀಸನಲ್ ಫುಡ್ ಮಿಸ್ ಮಾಡಬೇಡಿ. ನೀವು ಮಾವಿನಕಾಯಿ ತಿನ್ನುವುದರಿಂದ ಈ ಪ್ರಯೋಜನಗಳಿವೆ.
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಮಾವಿನಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ,
ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ಉಷ್ಣಾಂಶ ಹೆಚ್ಚಾದರೆ ಬೇಧಿ
ಉಂಟಾಗುವುದು, ಇದನ್ನು ತಡೆಗಟ್ಟಲು ಕೂಡ ಸಹಕಾರಿ.
ತಲೆಸುತ್ತು, ಸುಸ್ತು ಕಡಿಮೆಯಾಗುವುದು
ಮಾವಿನಕಾಯಿ ತಿನ್ನುವುದರಿಂದ ತಲೆಸುತ್ತು, ಸುಸ್ತು ಈ ಬಗೆ ಸಮಸ್ಯೆ ಉಂಟಾಗದಂತೆ
ತಡೆಗಟ್ಟುವುದು. ಬಿಸಿಲಿನಲ್ಲಿ ಸ್ವಲ್ಪ ತಿರುಗಾಡಿದರೆ ಸುಸ್ತಾಗುವುದು,
ಮಾವಿನಕಾಯಿ ಈ ಬಗೆಯ ಸುಸ್ತು ತಡೆಗಟ್ಟುವುದು.
ಮಾವಿನಕಾಯಿ ಕ್ಯಾನ್ಸರ್ ತಡೆಗಟ್ಟುತ್ತದೆ
ಮಾವಿನಕಾಯಿ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ ಎಂಬುವುದು ವೈಜ್ಞಾನಿಕವಾಗಿ
ಸಾಬೀತಾಗಿದೆ.
ಲಿವರ್ ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಾವಿನಕಾಯಿ ತಿನ್ನುವುದರಿಂದ ಲಿವರ್ ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಹಸಿ ಮಾವಿನಕಾಯಿಯಲ್ಲಿರುವ ಪೋಷಕಾಂಶ
ಕ್ಯಾಲೋರಿ, ಕಾರ್ಬೋಹೈಟ್ರೇಟ್ಸ್, ಪ್ರೊಟೀನ್, ಕೊಬ್ಬಿನಂಶ, ನಾರಿನಂಶ, ವಿಟಮಿನ್
ಸಿ, ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಬಿ 1, ಪೋಲೆಟ್,
ವಿಟಮಿನ್ ಕೆ, ಪೊಟಾಷ್ಯಿಯಂ, ರಂಜಕ, ಕ್ಯಾಲ್ಸಿಯಂ, ಮ್ಯಗ್ನಿಷ್ಯಿಯಂ, ಸತು,
ಸೋಡಿಯಂ, ಬೀಟಾ ಕೆರೋಟಿನ್, ಆಲ್ಫಾ ಕೆರೋಟಿನ್ ಇದೆ.
- ಮಾವಿನಕಾಯಿಯಲ್ಲಿರುವ ಗುಣಗಳು
- ಇದರಲ್ಲಿ ಆಂಟಿಆಕ್ಸಿಡೆಂಡ್ ಅಧಿಕವಿರುತ್ತದೆ
- ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
- ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
- ವಸಡಿನಂದ ರಕ್ತಸ್ರಾವವಾಗುವುದನ್ನು ತಡೆಗಟ್ಟುತ್ತದೆ.
ಈ ಮಾವಿನಕಾಯಿ ನಿಮಗೆ ಇಷ್ಟವಾದ ರುಚಿಯಲ್ಲಿ ಮಾಡಿ ಸವಿಯಿರಿ. ಬಾಯಿಗೆ ಹೊಸ ರುಚಿ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು ನೋಡಿ.



Click it and Unblock the Notifications