Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾವಿನ ಹಣ್ಣಿನ ಸಾರು: ಅನ್ನದ ಜೊತೆ ಸವಿದರೆ ಒನ್ಸ್ ಮೋರ್ ಹೇಳುತ್ತಾರೆ
ಮಾವಿನ ಹಣ್ಣಿನ ಸಾರು ತುಂಬಾ ರುಚಿಯಾಗಿರುತ್ತದೆ, ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರಲಿದೆ, ಮಾವಿನ ಹಣ್ಣಿನ ಸಾರಿನ ರೆಸಿಪಿ ಇಲ್ಲಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಗ್ರಿ
8-10 ಮಾವಿನಹಣ್ಣು
2 ಚಮಚ ಎಣ್ಣೆ
ಸ್ವಲ್ಪ ಕರಿಬೇವು
1 ಚಮಚ ಮಂತೆ ಬೀಜ
ಒಣಮೆಣಸು 6-7
1 ಚಮಚ ಕಾಳು ಮೆಣಸು
1 ಚಮಚ ಕೊತ್ತಂಬರಿ ಬೀಜ
1 ಚಮಚ ಜೀರಿಗೆ
ಸ್ವಲ್ಪ ಹಸಿ ಶುಂಠಿ
ಈರುಳ್ಳಿ 1
ಸ್ವಲ್ಪ ನಿಂಬೆ ಹಣ್ಣು
ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಒಂದು ಪ್ಯಾನ್‌ನಲ್ಲಿ ಸೋಂಪು, ಜೀರಿಗೆ, ಮೆಂತೆ, ಒಣ ಮೆಣಸು , ಚಕ್ಕೆ, ಲವಂಗ ಹಾಕಿ ರೋಸ್ಟ್ ಮಾಡಿ.
- ನಂತರ ನೀವು ರೋಸ್ಟ್ ಮಾಡಿದ ಮಸಾಲೆಗೆ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಗ್ರೈಂಡ್ ಮಾಡಿ.
- ಈಗ ನೀವು ಪಾತ್ರೆಯನ್ನು ಸ್ಟೌವ್ ಮೇಲೆ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ. ನಂತರ ಸ್ವಲ್ಪ ಹುಣಸೆ ರಸ ಹಾಕಿ, ಹುಣಸೆ ರಸ ಕುದಿಯುವಾಗ ನೀವು ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಸೇರಿಸಿ, ಅರಿಶಿಣ ಪುಡಿ ಹಾಕಿ, ಉಪ್ಪು ಸೇರಿಸಿ ಕುದಿಸಿ, ನಂತರ ಸಿಪ್ಪೆ ಸುಲಿದ ಮಾವಿನ ಹಣ್ಣು ಹಾಕಿ.
- ಟಿಪ್ಸ್: ನೀವು ಇದಕ್ಕೆ ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಸೇರಿಸಿದರೆ ರುಚಿ ಇನ್ನೂ ಸೂಪರ್
- ಇನ್ನು ಮಸಾಲೆ ಚೆನ್ನಾಗಿ ರೋಸ್ಟ್ ಆಗಿರಬೇಕು
- ಇನ್ನು ನೀವು ಮಾವಿನ ಹಣ್ಣು ಕತ್ತರಿಸಿ ಹಾಕಬಹುದು ಅಥವಾ ಸಿಪ್ಪೆ ಸುಲಿದು ಹಾಕಬಹುದು.
- ಇದನ್ನು ನೀವು 2-3 ದಿನ ಇಟ್ಟು ಬೇಕಾದರೂ ಬಳಸಬಹುದು, ಫ್ರಿಡ್ಜ್‌ನಲ್ಲಿ ಇಟ್ಟರೆ ವಾರದವರೆಗೆ ಬಳಸಬಹುದು.
-
ಈ ಮಾವಿನ ಹಣ್ಣಿನ ಸಾರು ಸ್ವಲ್ಪ ಭಿನ್ನ, ಮಸಾಲೆ ರೋಸ್ಟ್ ಮಾಡದೆ ಮಾಡುವ ಸಾರು.
ಬೇಕಾಗುವ ಸಾಮಗ್ರಿ
ಮಾವಿನಹಣ್ಣು 10
2 ಕಪ್ ನೀರು
4 ಹಸಿ ಮೆಣಸು
ಸ್ವಲ್ಪ ಬೆಲ್ಲ
2 ಚಮಚ ಮೈದಾ
1 ಚಮಚ ಉಪ್ಪು
ಒಗ್ಗರಣೆಗೆ
1 ಚಮಚ ತೆಂಗಿನೆಣ್ಣೆ
1 ಸಾಸಿವೆ
ಸ್ವಲ್ಪ ಉದ್ದಿನ ಬೇಳೆ
ಸ್ವಲ್ಪ ಕರಿಬೇವು
ಒಣ ಮೆಣಸು 2
ಸ್ವಲ್ಪ ಮೆಂತೆ
ಮಾಡುವ ವಿಧಾನ
ಮಾವಿನ ಹಣ್ಣಿನ ಸಿಪ್ಪೆ ಸುಲಿಯಿರಿ
ನಂತರ ನೀರಿಗೆ ಮಾವಿನ ಹಣ್ಣಿನ ಸಿಪ್ಪೆ ಹಿಸುಕಿ, ಸಿಪ್ಪೆ ಬಿಸಾಡಿ
ಈಗ ಮಾವಿನ ಸಿಪ್ಪೆ ಹಿಸುಕಿರುವ ನೀರಿಗೆ ಹಸಿ ಮೆಣಸು, ಉಪ್ಪು ಹಾಕಿ
ಮಾವಿನ ಹಣ್ಣು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ
ನಂತರ ಬೆಲ್ಲ ಸೇರಿಸಿ
ಸಾರು ದಪ್ಪವಾಗುವವರೆಗೆ ಕಾಯಿಸಿ
ಸಾರು ದಪ್ಪವಾದ ಮೇಲೆ ಮತ್ತೊಂದು ಪಾತ್ರೆಯಲ್ಲಿ ಎಣ್ನೆ ಹಾಕಿ, ಎಣ್ಣೆ ಬಿಸಿಯಾದಾಗ,
ಸಾಸಿವೆ, ಮೆಂತೆ, ಉದ್ದು, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಹಾಕಿ.
ಈ ಸಾರು ಕೂಡ ಸೂಪರ್ ಆಗಿರುತ್ತದೆ.



Click it and Unblock the Notifications