Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಲ್ಪುವಾ ಮತ್ತು ರಾಬ್ರಿ ರೆಸಿಪಿ: ಮಾಲ್ಪುವಾ ರಾಬ್ರಿ ಜೊತೆ ಸವಿದರೆ ಅದರ ರುಚಿ ಇದೆಯಲ್ಲಾ ಅಬ್ಬಾ!
ಮಾಲ್ಪುವಾ ನೀವು ಟೇಸ್ಟ್ ಮಾಡಿದ್ದೀರಾ, ಬರಿ ಮಾಲ್ಪವಾ
ಸವಿಯುವದಕ್ಕಿಂತ ಅದನ್ನು ರಾಬ್ರಿ ಜೊತೆ ಸವಿಯಬೇಕು, ಇದನ್ನು ಮಾಡುವುದು ಸ್ವಲ್ಪ
ಶ್ರಮ, ಆದರೆ ರುಚಿ ಇದೆಯಲ್ಲಾ ಅಷ್ಟೇ ಸೂಪರ್, ಬನ್ನಿ ಇದನ್ನು ಮಾಡುವುದು ಹೇಗೆ
ಎಂದು ನೋಡೋಣ:
ಬೇಕಾಗುವ ಸಾಮಗ್ರಿ
1 ಕಪ್ ಮೈದಾ
3 ಚಮಚ ಮೊಸರು
3 ಚಮಚ ಕೋಯಾ
2-3 ಏಲಕ್ಕಿ
1 ಚಮಚ ಸೋಂಪು'1/4 ಚಮಚ ಅಡುಗೆ ಸೋಡಾ
1/2 ಕಪ್ ನೀರು
ತುಪ್ಪ

ಸಕ್ಕರೆ ಪಾಕ
1/2 ಕಪ್ ಸಕ್ಕರೆ
1/2 ಕಪ್ ನೀರು
ರಾಬ್ರಿ
11/2ಲೀ ಹಾಲು
3 ಚಮಚ ಸಕ್ಕರೆ
1/2 ಚಮಚ ಏಲಕ್ಕಿ ಪುಡಿ
ಸ್ವಲ್ಪ ಕೇಸರಿ
1 ಚಮಚ ರೋಸ್ ವಾಟರ್
2 ಚಮಚ ಬಾದಾಮಿ, ಚಿಕ್ಕದಾಗಿ ಕತ್ತರಿಸಿದ್ದು
2 ಚಮಚ ಪಿಸ್ತಾ, ಕತ್ತರಿಸಿದ್ದು
ಮಾಡುವುದು ಹೇಗೆ?
* ಒಂದು ದೊಡ್ಡ ಬೌಲ್ ತೆಗೆದುಕೊಳ್ಳಿ, ಅದರಲ್ಲಿ ಮೈದಾ, ಸೋಂಪು, ಏಲಕ್ಕಿ ಹಾಕಿ
ಮಿಕ್ಸ್ ಮಾಡಿ.
* ನಂತರ ಕೋಯಾ, ಮೊಸರು ಸೇರಿಸಿ ಮಿಕ್ಸ್ ಮಾಡಿ
* ಕೋಯಾ ಇಲ್ಲದಿದ್ದರೆ ಹಾಲಿನ ಪುಡಿ ಬಳಸಬಹುದು
* ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟು ತಯಾರಿಸಿ, ಹೀಗೆ ಮಿಕ್ಸ್
ಮಾಡುವಾಗ ಗಂಟು-ಗಂಟು ಇರಬಾರದು
* ನಂತರ ಹಿಟ್ಟನ್ನು 30 ನಿಮಿಷ ಹಾಗೇ ಇಡಿ. (ಹಿಟ್ಟು ದೋಸೆ ಹಿಟ್ಟಿನಂತೆ
ಇರಲಿ)
* ಅದೇ ಸಮಯದಲ್ಲಿ ಬಾದಾಮಿ ಹಾಗೂ ಪಿಸ್ತಾವನ್ನು ನೀರಿನಲ್ಲಿ ನೆನೆ ಹಾಕಿ, ನಂತರ
ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ.
ಸಕ್ಕರೆ ಪಾಕ ತಯಾರಿಸಿ
ಒಂದು ಪಾತ್ರೆಗೆ ಸಮ ಪ್ರಮಾಣ ಸಕ್ಕರೆ ಹಾಗೂ ನೀರು ಹಾಕಿ ಕುದಿಸಿ, ಸಕ್ಕರೆ ಪಾಕ
ತಯಾರಿಸಿ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.
ಮಾಲ್ಪುವಾ ಮಾಡುವುದು ಹೇಗೆ?
* ಬಾಣಲೆಗೆ ತುಪ್ಪ ಹಾಕಿ ಕಾಯಿಸಿ.
* ಈಗ ಹಿಟ್ಟಿಗೆ ಸ್ವಲ್ಪ ಸೋಡಾ ಸೇರಿಸಿ ಕಲೆಸಿ
* ನಂತರ ಸೌಟ್‌ನಲ್ಲಿ ಸ್ವಲ್ಪ-ಸ್ವಲ್ಪ ಹಿಟ್ಟು ತೆಗೆದು ಎಣ್ಣೆಗೆ ಹಾಕಿ.
* ಸೈಜ್ ನಿಮಗೆ ಬೇಕಾದ ಗಾತ್ರದಲ್ಲಿ ಮಾಡಬಹುದು, ಎರಡೂ ಬದಿ ಫ್ರೈ ಆದ ಮೇಲೆ
ಅದನ್ನು ತೆಗೆದು ಸಕ್ಕರೆ ಪಾಕಗೆ ಹಾಕಿ.
ರಾಬ್ರಿ ಮಾಡುವುದು ಹೇಗೆ
* ದಪ್ಪ ತಳವಿರುವ ಚಿಕ್ಕ ಬಾಣಲಿ ತೆಗೆದುಕೊಳ್ಳಿ
* ಅದಕ್ಕೆ ಒಂದೂವರೆ ಲೀಟರ್ ಹಾಲು ಹಾಕಿ ಚೆನ್ನಾಗಿ ಕುದಿಸಿ.
* ಹಾಲು ಕುದಿ ಬಂದ ಮೇಲೆ ಕಡಿಮೆ ಉರಿಯಲ್ಲಿ ಕುದಿಸಿ, ಮೇಲ್ಭಾಗದಲ್ಲಿ ಬರುವ
ಕ್ರೀಮ್ ಅನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕುತ್ತಾ ಹಾಲನ್ನು ಸೌಟ್‌ನಿಂದ
ತಿರುಗಿಸುತ್ತಾ ಕುದಿಸಿ.'
* ಈ ರೀತಿ 50-60 ನಿಮಿಷ ಕುದಿಸಬೇಕು.
* ಹಾಲು ಮಂದವಾದಾಗ ಅದಕ್ಕೆ ಸಕ್ಕರೆ, ಕೇಸರಿ ಹಾಕಿ, ಬಾದಾಮಿ, ಪಿಸ್ತಾ
ಸೇರಿಸಿ
* ಈಗ ರಾಬ್ರಿ ರೆಡಿ
* ರೆಡಿಯಾದ ಮಾಲ್ಬುವಾವನ್ನು ರಾಬ್ರಿ ಜೊತೆ ಸವಿಯಿರಿ.
* ರಾಬ್ರಿಯನ್ನು ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು.



Click it and Unblock the Notifications