Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಚಪಾತಿ ಹಿಟ್ಟು ಉಳಿದರೆ ಮತ್ತೆ ಚಪಾತಿ ಮಾಡಬೇಡಿ..! ಈ ರೀತಿ ಎರಡು ತಿಂಡಿ ಮಾಡಿ.!!
ನೀವು ಬೆಳಗ್ಗೆ ತಿಂಡಿಗೆ ಚಪಾತಿ ಲಟ್ಟಿಸಿ ಬೇಯಿಸಿ ಅದನ್ನು ಸವಿಯುವುದು ಸಾಮಾನ್ಯ ಎಲ್ಲರು ಕೂಡ ಇದನ್ನು ಮಾಡಿಯೇ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಎಲ್ಲಾ ಸಂದರ್ಭದಲ್ಲಿಯೂ ಅವರು ಚಪಾತಿ ಮಾಡುವುದು ಕಾಮನ್, ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನ, ರಾತ್ರಿ ಊಟಕ್ಕೂ ಚಪಾತಿ ಮಾಡುವುದು ನೋಡಬಹುದು. ಭಾರತೀಯರಲ್ಲಿ ಚಪಾತಿ ಎಂಬುದು ನಿತ್ಯ ಆಹಾರ ಕ್ರಮದಲ್ಲಿ ಸೇರಿ ಬಿಟ್ಟಿದೆ. ಕೆಲವರು ಚಪಾತಿಯನ್ನು ಎರಡು ಮೂರು ದಿನಗಳಿಗೆ ಆಗುವಷ್ಟು ಮಾಡಿ ಸವಿಯುವುದು ಸಹ ನೋಡಬಹುದು.
ಅದರಲ್ಲೂ ಚಪಾತಿಯನ್ನೇ ಹಲವು ರೀತಿಯಲ್ಲಿ ಮಾಡಿ ಸವಿಯುತ್ತಾರೆ. ಚಪಾತಿಯನ್ನೇ ಎಗ್ ರೋಲ್, ಚಿಕನ್ ರೋಲ್, ವೆಜಿಟೇಬಲ್ ರೋಲ್ ಈ ರೀತಿ ಹತ್ತು ಹಲವು ಬಗೆಯಲ್ಲಿ ಮಾಡಿ ಸವಿಯುವುದು ಸಹ ನಾವು ನೋಡಬಹುದು. ಹಾಗೆ ಚಪಾತಿ ಮೃದುವಾಗಿ ಅತ್ಯಂತ ತೆಳುವಾಗಿ ಬರುವಂತೆ ಹಿಟ್ಟನ್ನು ಹದ ಮಾಡಿಕೊಳ್ಳುವುದು ಸಹ ಇದಕ್ಕೆ ಮುಖ್ಯವಾಗುತ್ತದೆ.

ಹಿಟ್ಟು ಹದ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವೊಮ್ಮೆ ಹೆಚ್ಚು ಹಿಟ್ಟು ಹದ ಮಾಡುವುದು ನೋಡಬಹುದು. ಹೀಗಾಗಿ ಎಷ್ಟು ಚಪಾತಿ ಬೇಕೋ ಅಷ್ಟೇ ಮಾಡಿ ಉಳಿದ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಎತ್ತಿಡುತ್ತಾರೆ. ಅನಂತರ ರಾತ್ರಿ ಇಲ್ಲವೆ ಮಾರನೆ ದಿನ ಬೆಳಗ್ಗೆ ಅದೇ ಹಿಟ್ಟಿನಿಂದ ಮತ್ತೆ ಚಪಾತಿಯನ್ನು ಮಾಡಿ ಸವಿಯುವುದು ಕೂಡ ನೋಡಬಹುದು.
ಆದ್ರೆ ನಾವಿಂದು ಈ ರೀತಿಯಾಗಿ ಉಳಿದಿರುವ ಹಿಟ್ಟನ್ನು ಬಳಸಿಕೊಂಡು ಎರಡು ರೀತಿ ವಿಶೇಷ ಹಾಗೂ ವಿಭಿನ್ನ ರುಚಿ ನೀಡುವಂತಹ ಖಾದ್ಯವನ್ನು ಸವಿದು ನೋಡೋಣ. ಅದರಲ್ಲೂ ಹೊಸದಾಗಿ ಮಾಡುವಂತಹ ಈ ಎರಡು ತಿಂಡಿಗಳು ಮನೆಯ ಎಲ್ಲಾ ಸದಸ್ಯರಿಗೂ ಇಷ್ಟವಾಗುತ್ತೆ, ಮಕ್ಕಳಂತು ಕೇಳಿ ಮತ್ತೆ ಮತ್ತೆ ಸವಿಯುವುದು ಖಚಿತ. ಹಾಗಾದ್ರೆ ಯಾವೆಲ್ಲಾ ಎರಡು ತಿಂಡಿಯನ್ನು ಉಳಿದ ಗೋಧಿ ಹಿಟ್ಟಿನಿಂದ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಗೋಧಿ ಹಿಟ್ಟಿನಿಂದ ಮಾಡುವ ತಿಂಡಿಗೆ ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು
- ಜೀರಿಗೆ
- ಈರುಳ್ಳಿ
- ಉಪ್ಪು
- ಎಣ್ಣೆ
- ಖಾರದ ಪುಡಿ
- ಗರಂ ಮಸಾಲೆ
- ಅರಶಿಣ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಚಿಲ್ಲಿ ಸಾಸ್
ಗೋಧಿ ಹಿಟ್ಟಿನಿಂದ ತಿಂಡಿ ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಜೀರಿಗೆ, ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಹಾಕಿಕೊಂಡು ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಹಸಿ ಬಟಾಣಿ ಅಥವಾ ಕ್ಯಾಪ್ಸಿಕಂ ಇದ್ದರೂ ಹಾಕಿಕೊಳ್ಳಿ. ಅನಂತರ ಖಾರದ ಪುಡಿ, ಅರಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
3 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ 1 ಸ್ಪೂನ್ ರೆಡ್ ಚಿಲ್ಲಿ ಸಾಸ್ ಇದ್ದರೆ ಹಾಕಿಕೊಳ್ಳಿ. ಒಲೆ ಆಫ್ ಮಾಡಿಕೊಳ್ಳಿ. ಈಗ ಚಪಾತಿಗಾಗಿ ಮಾಡಿಕೊಂಡಿದ್ದ ಹಿಟ್ಟನ್ನು ತೆಗೆದುಕೊಂಡು ಒಂದು ದೊಡ್ಡ ಉಂಡೆ ಕಟ್ಟಿ ಅದನ್ನು ಸ್ವಲ್ಪ ತಟ್ಟಿಸಿಕೊಳ್ಳಿ. ಸಣ್ಣದಾಗಿ ಹಪ್ಪಳದ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ಅನಂತರ ಬಾಣಲೆಯಲ್ಲಿದ್ದ ಮಸಾಲೆಯನ್ನು ಮಧ್ಯಕ್ಕೆ ಇಟ್ಟುಕೊಂಡು ಹೋಳಿಗೆ ಹೂರ್ಣದಂತೆ ಉಂಡೆ ಕಟ್ಟಿಕೊಳ್ಳಿ. ಹಾಗೆ ವಡೆಯಂತೆ ಸ್ವಲ್ಪ ಒತ್ತಿಕೊಂಡು ಚಪ್ಪಟೆ ಆಕಾರಕ್ಕೆ ಇದನ್ನು ಮಾಡಿಕೊಳ್ಳಿ.
ಇದೇ ರೀತಿ ಉಳಿದಿರುವ ಎಲ್ಲಾ ಹಿಟ್ಟನ್ನು ಕೂಡ ಮಾಡಿಕೊಳ್ಳಬೇಕು. ಎಲ್ಲಾ ಹಿಟ್ಟಿನ ಮಧ್ಯದಲ್ಲಿ ಈ ರೀತಿ ಮಸಾಲೆಗಳ ತುಂಬಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಇಡ್ಲಿ ಅಥವಾ ಕಡಬು ಬೇಯಿಸಲು ಬಳಸುವ ಕುಕ್ಕರ್ ತೆಗೆದುಕೊಂಡು ಅದರ ಒಳಗೆ ಇವುಗಳನ್ನು ಹಾಕಿಕೊಂಡು ಮೇಲೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ. ಅನಂತರ ಒಲೆ ಮೇಲೆ ಇಟ್ಟು ಬೇಯಿಸಿಕೊಳ್ಳಿ. 10 ನಿಮಿಷದಲ್ಲಿ ಇದು ಬೇಯುತ್ತದೆ.
ಅನಂತರ ಎಲ್ಲಾ ಉಂಡೆಗಳನ್ನು ತೆಗೆದುಕೊಂಡು ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದರ ಒಳಗೆ ಈ ಉಂಡೆಗಳ ಇಟ್ಟುಕೊಳ್ಳಿ. ಎಲ್ಲಾ ಉಂಡೆಗಳು ಚೆನ್ನಾಗಿ ಫ್ರೈ ಮಾಡಬೇಕು. ಎರಡು ಬದಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ರೋಸ್ಟ್ ಆಗುವವರೆಗೂ ಇದನ್ನು ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನಿಮ್ಮ ಮುಂದೆ ಉಳಿದ ಗೋಧಿ ಹಿಟ್ಟಿನಿಂದ ಮಾಡಿರುವ ಅತ್ಯಂತ ರುಚಿ ರುಚಿಯ ತಿಂಡಿ ರೆಡಿಯಾಗುತ್ತದೆ. ಇದನ್ನು ಮಕ್ಕಳಿಗೆ ಸವಿಯಲು ನೀಡಿದರೆ ಮತ್ತೆ ಕೇಳಿ ಸವಿಯುತ್ತಾರೆ. ಹೀಗಾಗಿ ಉಳಿದ ಚಪಾತಿ ಹಿಟ್ಟಿನಿಂದ ಮತ್ತೆ ಚಪಾತಿ ಮಾಡುವ ಬದಲಾಗಿ ಈ ರೀತಿ ತಿಂಡಿ ಮಾಡಿ.
ಈಗ ಇದೇ ಚಪಾತಿ ಹಿಟ್ಟಿನಿಂದ ಮಾಡುವಂತಹ ಮತ್ತೊಂದು ವಿಭಿನ್ನ ರುಚಿಯ ತಿಂಡಿಯ ಕುರಿತಂತೆ ಇಲ್ಲಿ ತಿಳಿದುಕೊಳ್ಳೋಣ. ಅದರಲ್ಲೂ ಇದು ಗೋಧಿ ಹಿಟ್ಟಿನ ನೂಡಲ್ಸ್ ಆಗಿದೆ. ನೂಡಲ್ಸ್ ನಿಮಗೆಲ್ಲಾ ಬಹಳ ಇಷ್ಟವಾಗುವ ಖಾಧ್ಯ. ರಸ್ತೆ ಬದಿಯ ಅಂಗಡಿಗಳಿಂದ ಹಿಡಿದು ಹೋಟೆಲ್‌ನಲ್ಲೂ ಹಲವರು ಸ್ನ್ಯಾಕ್ಸ್ ಗೆ ಈ ನೂಡಲ್ಸ್ ಸವಿಯಲು ಇಷ್ಟಪಡುತ್ತಾರೆ. ಆದರೆ ನಾವಿಂದು ಉಳಿದ ಚಪಾತಿ ಹಿಟ್ಟಿನಿಂದ ರುಚಿ ರುಚಿಯ ನೂಡಲ್ಸ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಗೋಧಿ ನೂಡಲ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗೋಧಿ ಹಿಟ್ಟು
- ಈರುಳ್ಳಿ
- ಟೊಮೆಟೋ
- ಯಾವುದಾದರು ತರಕಾರಿ
- ಖಾರದ ಪುಡಿ
- ಗರಂ ಮಸಾಲೆ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಟೊಮೆಟೋ ಸಾಸ್
- ಕರಿಬೇವು
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಗೋಧಿ ನೂಡಲ್ಸ್ ಮಾಡುವುದು ಹೇಗೆ?
ಮೊದಲು ಗೋಧಿ ಹಿಟ್ಟನ್ನು ಮತ್ತೆ ಹದ ಮಾಡಿಕೊಳ್ಳಿ. ಇದು ಗಟ್ಟಿಯಾಗಿರಬಾರದು. ಹಾಗೆ ಉಳಿದ ಹಿಟ್ಟನ್ನು ಹದ ಮಾಡಿದ ಬಳಿಕ ಶಾವಿಗೆ ಮಾಡುವ ಅಚ್ಚು ಅಥವಾ ನೂಡಲ್ಸ್ ಮಾಡುವಂತ ಒತ್ತು ಅಚ್ಚಿನಲ್ಲಿ ಈ ಹಿಟ್ಟನ್ನು ಹಾಕಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಬಿಡಿ. ಹಾಗೆ ಅದಕ್ಕೆ ಉಪ್ಪು 1 ಸ್ಪೂನ್ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ.
ನೀರು ಬಿಸಿಯಾದಾಗ ಅದಕ್ಕೆ ನೇರವಾಗಿ ಅಚ್ಚಿನಿಂದ ಹಿಟ್ಟನ್ನು ಪ್ರೆಸ್ ಮಾಡಿಕೊಳ್ಳಿ. ಇಲ್ಲವೆ ಪ್ಲೇಟ್ ಮೇಲೆ ಪ್ರೆಸ್ ಮಾಡಿಕೊಂಡು ಬಳಿಕ ಬಾಣಲೆಗೆ ಇದನ್ನು ಹಾಕಿಕೊಳ್ಳಬಹುದು. 5 ನಿಮಿಷ ಚೆನ್ನಾಗಿ ಈ ನೂಡಲ್ಸ್ ಕುದಿಬಂದು ಬೇಯಲು ಬಿಡಿ. ನಂತರ ಒಲೆ ಆಫ್ ಮಾಡಿ ಜರಡಿಯಲ್ಲಿ ನೂಡಲ್ಸ್ ಹಿಡಿದು ಅದರ ಮೇಲೆ ತಣ್ಣೀರು ಹಾಕಿ ಜರಡಿ ಹಿಡಿದುಕೊಂಡು ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಈರುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿ 1 ನಿಮಿಷ ಫ್ರೈ ಮಾಡಿ ಬಳಿಕ ಇದಕ್ಕೆ ಸಣ್ಣದಾಗಿ ತುರಿದಿರುವ ಕ್ಯಾರೆಟ್ ಅಥವಾ ಎಲೆ ಕೋಸು, ಟೊಮೆಟೋ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಖಾರದ ಪುಡಿ, ಗರಂ ಮಸಾಲೆ, ಟೊಮೆಟೋ ಸಾಸ್ ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ರೆಡಿ ಮಾಡಿರುವ ನೂಡಲ್ಸ್ ಅನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ನೂಡಲ್ಸ್‌ಗೆ ಮಸಾಲೆಗಳು ಹಿಡಿಯುವಂತೆ ಉರಿ ದೊಡ್ಡದಾಗಿಟ್ಟು ಮಿಕ್ಸ್ ಮಾಡಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಗೋಧಿ ನೂಡಲ್ಸ್ ರೆಡಿಯಾಗುತ್ತದೆ. ಬೆಳಗ್ಗೆ ತಿಂಡಿಗೆ ಇಲ್ಲವೆ ಸ್ನ್ಯಾಕ್ಸ್‌ಗೆ ಇದನ್ನು ಮಾಡಿದ್ರೆ ಎಲ್ಲರು ಸವಿಯಲು ಬಹಳ ಚೆನ್ನಾಗಿರುತ್ತೆ.



Click it and Unblock the Notifications