Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಬಲ್ ವೇಗದಲ್ಲಿ ತೂಕ ಇಳಿಸಬೇಕಾ? ಈ ಓಟ್ಸ್ ಕಿಚಡಿ ತಿಂದು ನೋಡಿ ಸಾಕು!!
ತೂಕ ಹೆಚ್ಚಳ ಆಗೋದು ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ನೋಡುತ್ತಿರುವ ಸಮಸ್ಯೆ. ಆದ್ರೆ ತೂಕ ಇಳಿಸಲು ನೀವು ಸಹ ಹಲವು ರೀತಿಯ ಪ್ರಯತ್ನಗಳ ಮಾಡಿರಬಹುದು. ಅದ್ರಲ್ಲೂ ತೂಕ ಇಳಿಸುವ ಕಾರಣದಿಂದಲೇ ನೀವು ಡಯೆಟ್ ಮಾಡುವುದು ಊಟ ಬಿಡುವುದು ಅಥವಾ ಸರಿಯಾದ ರೀತಿಯಲ್ಲಿ ಊಟ ಮಾಡದೆ ಇರುವುದು, ಔಷಧಿಗಳ ಸೇವಿಸುವುದು, ಹೀಗೆ ಹತ್ತಾರು ರೀತಿಯ ಹರಸಾಹಸ ಮಾಡಿರಬಹುದು.
ಇಷ್ಟೆಲ್ಲಾ ಮಾಡಿದರೂ ಕೂಡ ಒಂದು ಕೆ.ಜಿ ಇಳಿಸಲು ನೀವು ತಿಂಗಳ ಕಾಲ ಶ್ರಮಿಸಿರಬಹುದು. ಇದಿಷ್ಟೇ ಅಲ್ಲದೆ ಜಿಮ್, ವ್ಯಾಯಾಮ, ಯೋಗ, ನಾಟಿ ಔಷಧಿ, ಮನೆ ಮದ್ದು ಇಂತಹ ಹತ್ತಾರು ಕ್ರಮಗಳ ಅನುಸರಿಸಿರಬಹದು. ಆದ್ರೆ ಇದ್ಯಾವುದೂ ಇಲ್ಲದೆ ಕೇವಲ ಊಟೋಪಚಾರದಿಂದಲೂ ನಿಮ್ಮ ತೂಕ ಇಳಿಸಬಹುದು ಎಂಬುದು ನಿಮಗೆ ಗೊತ್ತಾ?

ಹೌದು ಊಟ, ತಿಂಡಿ ಮಾಡುತ್ತಲೇ ನಿಮ್ಮ ತೂಕ ಇಳಿಸಿಕೊಳ್ಳಬಹುದು. ಅದ್ರಲೂ ಓಟ್ಸ್ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಫೈಬರ್‌ನಿಂದ ತುಂಬಿರುವ ಈ ಓಟ್ಸ್ ಜೀರ್ಣಕ್ರಿಯೆಗೆ ಬಹಳ ಮುಖ್ಯ ಅಂಶವಾಗಿದೆ. ಓಟ್ಸ್ ನಿಮ್ಮ ತೂಕ ಇಳಿಸಲು ಬಹುಮುಖ್ಯ ಅಂಶ. ನಿತ್ಯ ಓಟ್ಸ್ ನಿಮ್ಮ ತೂಕ ಇಳಿಸಲು ಮುಖ್ಯ ಪದಾರ್ಥ.
ಓಟ್ಸ್ ಕಿಚಡಿ ನಿತ್ಯ ಸವಿದರೆ ನಿಮ್ಮ ತೂಕ ಇಳಿಸುವುದು ಸುಲಭವಾಗುತ್ತೆ. ಹಾಗಾದ್ರೆ ಈ ಓಟ್ಸ್ ಕಿಚಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಓಟ್ಸ್ ಕಿಚಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಓಟ್ಸ್
- ಹಸಿ ಮೆಣಸು
- ಕ್ಯಾರೆಟ್
- ಕ್ಯಾಪ್ಸಿಕಂ
- ಸಾಸಿವೆ
- ಬೀನ್ಸ್
- ಉಪ್ಪು
- ಹಸಿ ಬಟಾಣಿ
- ಖಾರದ ಪುಡಿ
- ಅರಶಿಣ
- ಗರಂ ಮಸಾಲ
ಓಟ್ಸ್ ಕಿಚಡಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಹಸಿ ಮೆಣಸು, ಸಣ್ಣದಾಗಿ ಕತ್ತರಿಸಿಕೊಂಡ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಉಪ್ಪು, ಕ್ಯಾಪ್ಸಿಕಂ, ಕರಿಬೇವು ಹಾಕಿಕೊಂಡು 2 ನಿಮಿಷ ಬೇಯಿಸಿಕೊಳ್ಳಿ. ಅನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಟೊಮೆಟೋ ಕೂಡ ಹಾಕಿಕೊಳ್ಳಿ.
ಈಗ ಖಾರದ ಪುಡಿ, ಅರಶಿಣ, ಗರಂ ಮಸಾಲ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಓಟ್ಸ್ ತೆಗೆದುಕೊಂಡ ಕಪ್‌ನಲ್ಲಿಯೇ 3 ಕಪ್ ನೀರು ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಕುದಿಬರಲು ಬಿಡಬೇಕು. ಕುದಿಬರುವಾಗ 2 ನಿಮಿಷ ಬಿಟ್ಟು ಈಗ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ.
ಈಗ 1 ಕಪ್ ಓಟ್ಸ್ ಅನ್ನು ತೆಗೆದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ನಿಧಾನವಾಗಿ ಕುದಿಬರಲು ಬಿಡಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಓಟ್ಸ್ ಬೇಯಲು ಬಿಡಿ. ಹೀಗೆ 3ರಿಂದ 4 ನಿಮಿಷ ಬಿಟ್ಟು ಅನಂತರ ಕೆಳಗೆ ಇಳಿಸಕೊಂಡು ಮಿಕ್ಸ್ ಮಾಡುತ್ತಾ ಇರಿ. ನಿಮಗೆ ತೆಳುವಾಗಿ ಬೇಕಿದ್ದರೆ ನೀರು ಹಾಕಿಕೊಳ್ಳಬಹುದು, ಹಾಗೆ ದಪ್ಪವಾಗಿಯೂ ಮಾಡಿಕೊಳ್ಳಬಹುದು.
ಇಷ್ಟಾದರೆ ಸಾಕು ನಿಮ್ಮ ಮುಂದೆ ಓಟ್ಸ್ ಕಿಚಡಿ ಸಿದ್ದವಾಗುತ್ತೆ. ಇದನ್ನು ನಿತ್ಯ ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಸವಿದರೆ ನಿಮ್ಮ ತೂಕ ಡಬಲ್ ವೇಗದಲ್ಲಿ ಕಡಿಮೆಯಾಗುತ್ತೆ. ಇದು ಜೀರ್ಣಕ್ರಿಯೆಗೆ ಉತ್ತಮ ಆಹಾರವಾಗಿದೆ. ಹಾಗೆ ಇದರಿಂದ ನಿಮ್ಮ ಆರೋಗ್ಯ ಕೂಡ ಸುಧಾರಿಸಲಿದೆ. ನೀವು ಬಯಸಿದಂತೆ ತೂಕ ಇಳಿಸಿಕೊಳ್ಳಬಹುದು. ಅದ್ರಲ್ಲೂ ಯಾವುದೇ ಡಯೆಟ್ ಇಲ್ಲದೆಯೇ ಈ ರೀತಿ ತೂಕ ಇಳಿಸಿಕೊಳ್ಳಿ.



Click it and Unblock the Notifications