Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ ಉಳಿದರೆ ಈ ಎರಡು ಖಾದ್ಯ ರೆಡಿ ಮಾಡಿ..! ಎಲ್ರಿಗೂ ಇಷ್ಟವಾಗುತ್ತೆ..!
ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ನಾವು ಇಡ್ಲಿ ಮಾಡುತ್ತೇವೆ. ಇಡ್ಲಿ ಅಂದ್ರೆ ಎಲ್ಲರಿಗಿರುವ ಬ್ರೇಕ್ ಫಾಸ್ಟ್ ಅನ್ನೋದ್ರಲ್ಲಿ ಅನುಮಾನವೇನಿಲ್ಲ. ಕಡಿಮೆ ಎಣ್ಣೆ ಬಳಸಿ ಮಾಡುವ ಇಡ್ಲಿಗೆ ಎಲ್ಲರು ಫಿದಾ ಆಗುತ್ತಾರೆ. ಇಡ್ಲಿ ಬೆಳಗ್ಗೆ ಮಾತ್ರವಲ್ಲ ಊಟದ ಜೊತೆಗೆ ಒಂದು ಎರಡೂ ಸವಿಯುವವರನ್ನು ಕೂಡ ನಾವು ನೋಡಬಹುದು. ಇಡ್ಲಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತೆ, ಹಾಗೆ ಆರೋಗ್ಯಕ್ಕೂ ಇದು ಉತ್ತಮ ಆಹಾರವೇ.
ಆದ್ರೆ ನೀವು ಮನೆಯಲ್ಲಿ ಮಾಡಿರುವ ಇಡ್ಲಿ ಉಳಿದುಬಿಟ್ಟರೆ ಏನು ಮಾಡುವುದು. ಮನೆಯಲ್ಲಿ ಅನ್ನ ಉಳಿದರೆ ಹಲವು ರೀತಿಯ ಖಾದ್ಯವನ್ನು ಥಟ್ ಅಂತ ರೆಡಿ ಮಾಡಬಹುದು. ಆದ್ರೆ ಇಡ್ಲಿ ಉಳಿದರೆ ಎನು ಮಾಡಬೇಕು ಅನ್ನೋದು ನಿಮಗೆ ತಿಳಿದಿದ್ಯಾ?. ಅನ್ನ ಉಳಿದರೆ ಹೇಗೆ ಚಿತ್ರಾನ್ನ ಮಾಡಿ ಸವಿಯುತ್ತೇವೋ ಅದೇ ರೀತಿ ಇಡ್ಲಿ ಉಳಿದರೂ ಕೂಡ ಅದ್ಭುತ ರುಚಿಯಲ್ಲಿ ಹಲವು ಖಾದ್ಯ ಮಾಡಬಹುದು.

ಹಾಗಾದ್ರೆ ನಾವಿಂದು ನಿನ್ನೆ ದಿನ ಮಾಡಿ ಉಳಿದ ಇಡ್ಲಿಯಲ್ಲಿ ಯಾವ ಖಾದ್ಯ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಇಡ್ಲಿಯಲ್ಲಿ ರುಚಿ ರುಚಿಯಾದ ತಿಂಡಿ ಮಾಡಬಹುದು. ಹಾಗಾದ್ರೆ ಉಳಿದ ಇಡ್ಲಿಯಲ್ಲಿ ನಾವಿಂದು ಅದ್ಭುತ ರುಚಿಯ ಮತ್ತೊಂದು ಖಾದ್ಯ ಮಾಡೋಣ.
ಮೊದಲು ನಿಮ್ಮಲ್ಲಿ ಉಳಿದ ಇಡ್ಲಿಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇಡ್ಲಿ ಪುಡಿಯಾಗುವ ಬದಲು ಹಿಟ್ಟಿನಂತೆ ಅಂಟು ಅಂಟಾಗಿ ಮುದ್ದೆಯಾಗುತ್ತದೆ. ಅದನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. 5ರಿಂದ 6 ಇಡ್ಲಿ ಇದ್ದರೆ ಹೀಗೆ ಮಾಡಿಟ್ಟುಕೊಳ್ಳಿ. ನಂತರ ಈ ಹಿಟ್ಟಿಗೆ ಸ್ವಲ್ಪ ತುರಿದ ಕ್ಯಾರೆಟ್, ಈರುಳ್ಳಿ, ಕರಿಬೇವಿನ ಸೊಪ್ಪು ಹಾಕಿಕೊಳ್ಳಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು ಕೂಡ ಇದಕ್ಕೆ ಹಾಕಿ ನಂತರ ಅಂಗಡಿಯಲ್ಲಿ ಸಿಗುವ ಸೆಜ್ವಾನ್ ಚಟ್ನಿ 2 ಸ್ಪೂನ್ ಅನ್ನು ಹಾಕಿಕೊಳ್ಳಿ. ನಿಧಾನಕ್ಕೆ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಇಡ್ಲಿ ಹಿಟ್ಟಿಗೆ ಎಲ್ಲಾ ಅಂಶಗಳು ಚೆನ್ನಾಗಿ ಹಿಡಿಯುವಂತೆ ಮಾಡಿಕೊಳ್ಳಿ. ಅನಂತರ ಸಣ್ಣ ವಡೆಯ ರೀತಿ ಇದನ್ನು ತಟ್ಟಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಅದರ ಮೇಲೆ ವಡೆ ರೀತಿ ಮಾಡಿಕೊಂಡಿರುವ ಹಿಟ್ಟನ್ನು ಈ ಬಾಣಲೆಯಲ್ಲಿ ಹಾಕಿಕೊಳ್ಳಿ. ಎರಡೂ ಕಡೆಯೂ ಈ ಹಿಟ್ಟನ್ನು ಚೆನ್ನಾಗಿ ಕರಿದುಕೊಳ್ಳಿ. ಇದು ಕಟ್ಲೇಟ್‌ನಂತೆ ಬಹಳ ರುಚಿಯಾಗಿರುತ್ತೆ. ಮಕ್ಕಳಂತು ಇಷ್ಟಪಟ್ಟು ಇದನ್ನು ಸವಿಯುತ್ತಾರೆ.
ಇಡ್ಲಿ ಕಟ್ಲೇಟ್ ಮಾಡಲು ಬೇಕಾಗುವ ಪದಾರ್ಥ
ಇಡ್ಲಿ
ಕ್ಯಾರೆಟ್
ಈರುಳ್ಳಿ
ಸೆಜ್ವಾನ್ ಚಟ್ನಿ
ಉಪ್ಪು
ಎಣ್ಣೆ
ಕರಿಬೇವಿನ ಎಲೆ
ಇದಿಷ್ಟೇ ಅಲ್ಲ ನೀವು ಉಳಿದ ಇಡ್ಲಿಯನ್ನು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ 1 ಇಡ್ಲಿಯನ್ನು ನಾಲ್ಕು ಭಾಗವಾಗಿ ಕತ್ತರಿಸಿ. ಒಂದು ಬಾಣಲೆಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಸಣ್ಣ ಉರಿಯಲ್ಲಿ ಕರಿಯಲು ಬಿಡಿ. ಎರಡು ಕಡೆ ಚೆನ್ನಾಗಿ ಕರಿದ ಬಳಿಕ ನೀವು ಯಾವುದೇ ಚಟ್ನಿ ಅಥವಾ ಸಾಂಬಾರ್ ಅಥವಾ ಸೆಜ್ವಾನ್ ಚಟ್ನಿಯೊಂದಿಗೆ ಇದನ್ನು ಸವಿಯಬಹುದು. ಬಹಳ ರುಚಿಕರವಾಗಿರುತ್ತೆ.



Click it and Unblock the Notifications