Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಪ್ಯಾಕ್ ಚಿಪ್ಸ್ ಇದ್ರೆ ಈ 2 ನಿಮಿಷದ ಸ್ನ್ಯಾಕ್ಸ್ ಮಾಡಿ.! ಮಾಡುವ ವಿಧಾನವಿದು!
ಮಕ್ಕಳಿಗೆ ಈಗ ಬೇಸಿಗೆ ರಜೆ ಆರಂಭಗೊಂಡಿದೆ. ಹೀಗಾಗಿ ಅವರಿಗೆ ಮನೆಯಲ್ಲೇ ಯಾವುದಾದರು ಸ್ನ್ಯಾಕ್ಸ್ ಮಾಡಿ ಸವಿಯಲು ನೀಡಿದರೆ ಅವರಿಗೂ ಬಹಳ ಇಷ್ಟವಾಗಬಹುದು. ಹಾಗೆ ಅವರು ಮನೆಯೊಂದ ಹೊರಗೆ ಸ್ನ್ಯಾಕ್ಸ್ ಸವಿಯುವ ಅಭ್ಯಾಸವನ್ನ ಮರೆಯಬಹುದು. ಮಕ್ಕಳು ಹೆಚ್ಚಾಗಿ ಅಂಗಡಿ, ಬೇಕರಿ ಹಾಗೆ ರಸ್ತೆ ಬದಿಯಲ್ಲಿ ಸಿಗುವಂತಹ ಬಗೆ ಬಗೆಯ ಖಾದ್ಯಗಳ ಸವಿಯುವುದು ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಸದಾ ಅಂಗಡಿ, ಬೇಕರಿ ರುಚಿಯ ತಿಂಡಿಗಳ ಸವಿಯಲು ಅವರು ಮುಂದಾಗುತ್ತಾರೆ.
ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲೇ ಅವರಿಗೆ ಇಷ್ಟವಾಗುವಂತಹ ಸ್ನ್ಯಾಕ್ಸ್ ಮಾಡಿ ಕೊಡುವುದು ಹೇಗೆ ಅನ್ನೋದನ್ನು ತಿಳಿಸುತ್ತೇವೆ. ಅದರಲ್ಲೂ ನೀವು ಲೇಸ್ ಪ್ಯಾಕೆಟ್‌ನಲ್ಲಿ ಬರುವ ಚಿಪ್ಸ್ ಸವಿದಿರಬಹುದು. ಅದರ ರುಚಿಗೆ ಮಕ್ಕಳು ಮನಸೋಲುತ್ತಾರೆ. ವಿವಿಧ ರುಚಿಯಲ್ಲಿ ಈ ಲೇಸ್‌ನ ಚಿಪ್ಸ್ ಈಗ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಮಾರುಕಟ್ಟೆಯಲ್ಲಿ ಸಿಗುವಂತಹ ವಿವಿಧ ಬಗೆಯ ಈ ಚಿಪ್ಸ್ ಅನ್ನು ಅವರು ಮನೆಗೆ ತಂದು ಸವಿಯಲು ಮುಂದಾಗುತ್ತಾರೆ. ಆದ್ರೆ ನಾವಿಂದು ಇದೇ ಚಿಪ್ಸ್‌ನಿಂದ ಅದ್ಭುತ ಸ್ನ್ಯಾಕ್ಸ್ ಮಾಡುವ ಕುರಿತು ತಿಳಿಯೋಣ. ನೀವೆಂದು ಸವಿಯದೇ ಇರದಂತಹ ಸ್ನ್ಯಾಕ್ಸ್ ಇದು. ಅದರಲ್ಲೂ ಮಕ್ಕಳಿಗೆ ಈ ರುಚಿಯಲ್ಲಿ ಮಾಡಿಕೊಟ್ಟರೆ ಅವರೆಂದು ಮತ್ತೆ ಅಂಗಡಿ, ಬೇಕರಿ ತಿಂಡಿಯ ಹಿಂದೆ ಬೀಳಲ್ಲ.
ಹಾಗಾದ್ರೆ ಒಂದು ಪ್ಯಾಕ್ ಚಿಪ್ಸ್ ಪ್ಯಾಕ್‌ನಿಂದ ಅದ್ಭುತ ಸ್ನ್ಯಾಕ್ಸ್ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿಪ್ಸ್ ಪ್ಯಾಕ್‌ನಲ್ಲಿ ಸ್ನ್ಯಾಕ್ಸ್ ಮಾಡಲು ಬೇಕಾಗುವ ವಸ್ತುಗಳು
ಚಿಪ್ಸ್-1 ಪ್ಯಾಕ್
ಮಂಡಕ್ಕಿ
ಈರುಳ್ಳಿ
ಟೊಮೆಟೊ
ಕ್ಯಾರೆಟ್
ಕಡಲೆ
ಸೇವ್
ಕೆಂಪು ಮೆಣಸಿನ ಪುಡಿ
ಜೀರಿಗೆ
ಚಾಟ್ ಮಸಾಲ
ಕೊತ್ತಂಬರಿ ಸೊಪ್ಪು
ನಿಂಬೆ ರಸ
ಉಪ್ಪು ರುಚಿಗೆ ತಕ್ಕಷ್ಟು
ಚಿಪ್ಸ್ ಪ್ಯಾಕ್‌ನಲ್ಲಿ ಸ್ನ್ಯಾಕ್ಸ್ ಮಾಡುವುದು ಹೇಗೆ?
ಮೊದಲು 1 ಪ್ಯಾಕ್ ಚಿಪ್ಸ್ ಅನ್ನು ಒಡೆದು ಬೌಲ್‌ಗೆ ಹಾಕಿಕೊಂಡು ಪುಡಿ ಮಾಡಿ. ಸಣ್ಣದಾಗಿ ಪುಡಿ ಮಾಡಬೇಡಿ, ಸ್ವಲ್ಪ ದೊಡ್ಡ ದೊಡ್ಡದಾಗಿರಲಿ. ನಂತರ ಇದಕ್ಕೆ ಸ್ವಲ್ಪ ಮಂಡಕ್ಕಿ ಅಥವಾ ಕಡ್ಲೆ ಪುರಿಯನ್ನು ಹಾಕಿಕೊಳ್ಳಿ. ಹಾಗೆ ಚಿಕ್ಕದಾಗಿ ಕಾಳಿನಂತೆ ಕತ್ತರಿಸಿಕೊಂಡಿರುವ ಟೊಮೆಟೋ ಕೂಡ ಇದಕ್ಕೆ ಹಾಕಿಕೊಳ್ಳಿ.
ಅನಂತರ ತುರಿದುಕೊಂಡ ಕ್ಯಾರೆಟ್ ಅನ್ನು ಸಹ ಇದಕ್ಕೆ ಹಾಕಿ. ಹಾಗೆ ಕೊತ್ತಂಬರಿ ಸೊಪ್ಪು, ಮಸಾಲೆ ಶೇಂಗಾ ಕಡಲೆ ಹಾಕಿಕೊಳ್ಳಿ. ಅಂಗಡಿಯಲ್ಲಿ ಈ ಮಸಾಲೆ ಕಡಲೆ ಬೀಜ ಸಿಗುತ್ತದೆ. ನಂತರ ಇದಕ್ಕೆ ಚಾಟ್ ಮಸಾಲೆ, ಖಾರದ ಪುಡಿ, ಜೀರಿಗೆ ಪುಡಿ, ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಉಪ್ಪು ಕಡಿಮೆ ಹಾಕಿಕೊಳ್ಳಿ.
ಕೊನೆಯದಾಗಿ ಅರ್ಧ ನಿಂಬೆ ರಸವನ್ನು ಸಹ ಇದಕ್ಕೆ ಹಾಕಿಕೊಂಡು ಕೈಯಿಂದ ನಿಧಾನವಾಗಿ ಮಿಕ್ಸ್ ಮಾಡಿ, ಪುಡಿ ಮಾಡಬೇಡಿ. ಹೀಗೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಚಾಟ್ಸ್ ಅಥವಾ ಚಿಪ್ಸ್‌ನಿಂದ ಒಂದು ಸರಳ ಸ್ನ್ಯಾಕ್ಸ್ ರೆಡಿಯಾಗುತ್ತದೆ. ಇದನ್ನು ನೀವು ಮನೆಯಲ್ಲಿ ಮಕ್ಕಳಿಗೆ ಮಾಡಿ ಸವಿಯಲು ನೀಡಿದರೆ ಅದರ ರುಚಿಗೆ ಯಾವಾಗಲು ಮಾಡಿಕೊಂಡುವಂತೆ ಕೇಳುತ್ತಾರೆ.
ಈ ಸ್ನ್ಯಾಕ್ಸ್ ಅನ್ನು ಸುಲಭವಾಗಿ 2 ನಿಮಿಷದಲ್ಲಿ ಮಾಡಿ ಮುಗಿಸಬಹುದು. ಹಾಗೆ ಕಡಿಮೆ ವಸ್ತುಗಳ ಬಳಸಿ ಮಾಡಬಹುದು. ನೀವು ಸಹ ಮಕ್ಕಳಿಗೆ ಈ ರಜೆಯಲ್ಲಿ ಸುಲಭದ ಈ ಸ್ನ್ಯಾಕ್ಸ್ ಮಾಡಿ ಸವಿಯಲು ನೀಡಿ.



Click it and Unblock the Notifications